Abu Dhabi Hindu temple: ಅಬುಧಾಬಿಯಲ್ಲಿ ಹಿಂದೂ ದೇವಸ್ಥಾನ, ವೆಚ್ಚ, ವಿಶಿಷ್ಟತೆ, ಈ ಮಾಹಿತಿ ನೀವು ತಿಳಿದಿರಬೇಕು

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಅಬುಧಾಬಿಯಲ್ಲಿ ಹಿಂದೂ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿಗರನ್ನು ಅಬುಧಾಬಿಗೆ ಆಕರ್ಷಿಸಲು ಇರುವ ಮತ್ತೊಂದು ಕಾರ್ಯವಾಗಿದೆ. ಇದು ವಾಸ್ತವವಾಗಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಹಿಂದೂ ದೇವಾಲಯವಾಗಿದೆ.

ಈ ದೇವಾಲಯವು ಮರುಭೂಮಿ ರಾಷ್ಟ್ರಕ್ಕೆ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಈ ಪ್ರದೇಶದಲ್ಲಿ ಮೊದಲ ಕಲ್ಲಿನ ಹಿಂದೂ ದೇವಾಲಯವಾಗಿದೆ. ಪಶ್ಚಿಮ ಏಷ್ಯಾದಲ್ಲಿಯೇ ಅತಿ ದೊಡ್ಡ ದೇವಾಲಯವಾಗಿದೆ. ಇದನ್ನು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ದೇವಾಲಯದ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

 ಅಬುಧಾಬಿಯಲ್ಲಿ ಹಿಂದೂ ದೇವಸ್ಥಾನ, ಈ ಮಾಹಿತಿ ನೀವು ತಿಳಿದಿರಬೇಕು

ಬಿಎಪಿಎಸ್ ದೇವಾಲಯದ ಪ್ರಾರಂಭ, ವೆಚ್ಚ

ಮಂದಿರ ಅಥವಾ ದೇವಾಲಯವು ಬೃಹತ್ ಲಾಜಿಸ್ಟಿಕಲ್ ಕಾರ್ಯವಾಗಿದೆ. ಇದಕ್ಕೆ 40,000 ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಕ್ಯೂಬಿಕ್ ಮೀಟರ್ ಸ್ಟ್ಯಾಂಡ್ ಸ್ಟೋನ್ ಮತ್ತು 1.8 ಮಿಲಿಯನ್ ಇಟ್ಟಿಗೆಗಳು ಬೇಕಾಗುತ್ತವೆ. ಇಲ್ಲಿಯವರೆಗೆ 4 ಲಕ್ಷ ಗಂಟೆಗಳ ಕಾಲ ಇದರ ಕಾರ್ಯನಿರ್ವಹಣೆ ಮಾಡಲಾಗಿದೆ. ಇನ್ನೂ ಕೂಡಾ ದೇವಾಲಯದ ಕಾರ್ಯ ನಡೆಯಲಿದೆ.

ಮೊದಲ ಇತಿಹಾಸ

ಯುಎಇಯಲ್ಲಿ ಮೊದಲ ಕಲ್ಲಿನ ಹಿಂದೂ ದೇವಾಲಯವಾಗಿ, ಬಿಎಪಿಎಸ್ ದೇವಾಲಯವು ಈ ಪ್ರದೇಶದಲ್ಲಿ ವೈವಿಧ್ಯಮಯ ಸಮುದಾಯಗಳ ಸಾಂಸ್ಕೃತಿಕ ಏಕೀಕರಣಕ್ಕೆ ದಾರಿ ಮಾಡಿಕೊಡುತ್ತಿದೆ. ವಿಸ್ತಾರವಾದ ದೇವಾಲಯದ ಸಂಕೀರ್ಣವು 108 ಅಡಿ ಎತ್ತರದಲ್ಲಿದೆ.

ದಾಖಲೆ ಸೃಷ್ಟಿ, ಸ್ಪೂರ್ತಿದಾಯಕ ವಿನ್ಯಾಸ

ಪಶ್ಚಿಮ ಏಷ್ಯಾದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯವೆಂದು ವರದಿಯಾಗಿದೆ. ದೇವಾಲಯದ ಪ್ರಮಾಣ ಮತ್ತು ಭವ್ಯತೆಯು ಪ್ರದೇಶದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ. ದೇವಾಲಯದ ವಿನ್ಯಾಸವು ವೈದಿಕ ವಾಸ್ತುಶಿಲ್ಪ ಮತ್ತು ಶಿಲ್ಪಗಳಿಂದ ಸ್ಫೂರ್ತಿ ಪಡೆಯುತ್ತದೆ. ಅನೇಕ ಪ್ರತಿಮೆಗಳು ಮತ್ತು ಕೆತ್ತನೆಗಳನ್ನು ಭಾರತದ ಕುಶಲಕರ್ಮಿಗಳು ಮಾಡಿದ್ದಾರೆ ಮತ್ತು ಅಬುಧಾಬಿಗೆ ರವಾನಿಸಲಾಗಿದೆ.

ಪ್ರಧಾನಿ ಮೋದಿ ಕನ್ನೋಟ

2015 ರಲ್ಲಿ, ಪ್ರಧಾನಿ ಮೋದಿಯವರ ಯುಎಇ ಭೇಟಿಯ ಸಂದರ್ಭದಲ್ಲಿ, ಅಬುಧಾಬಿಯು ದುಬೈ-ಅಬುಧಾಬಿ ಹೆದ್ದಾರಿಯಲ್ಲಿ ದೇವಾಲಯದ ಯೋಜನೆಗಾಗಿ 17 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಮಂದಿರಕ್ಕೆ 2017 ರಲ್ಲಿ ಪ್ರಧಾನಿ ಮೋದಿಯವರು ಅಡಿಪಾಯ ಹಾಕಿದರು.

ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಟರಾದ ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ 50,000 ಕ್ಕೂ ಹೆಚ್ಚು ಜನರು ಮಂದಿರದ ನಿರ್ಮಾಣದಲ್ಲಿ ಇಟ್ಟಿಗೆಗಳನ್ನು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+