ಭಾರತದಾದ್ಯಂತ ಗೃಹಿಣಿಯರಿಗೆ ಸ್ವಂತವಾಗಿ ವ್ಯವಹಾರವನ್ನು ಪ್ರಾರಂಭಿಸಲು ಅವಕಾಶ ಮತ್ತು ಸಂಪನ್ಮೂಲಗಳ ಲಭ್ಯತೆ ತೀರಾ ಕಡಿಮೆ. ಅದರಲ್ಲೂ ಕೆಲವು ವರ್ಷಗಳ ಹಿಂದೆ ಮಹಿಳೆಯರಿಗೆ ಇಂದು ಸಿಗುತ್ತಿರುವ ಪೋತ್ಸಾಹವೂ ಸಿಗುತ್ತಿರಲಿಲ್ಲ. ಆದರೆ ಕೇರಳದ ಗೃಹಿಣಿಯೊಬ್ಬರು ಇದೆಲ್ಲವೂ ಮೀರಿ ಮಹಿಳೆಯರ ಇನ್ನರ್ ವೇರ್ ಬ್ರ್ಯಾಂಡ್ ಅನ್ನು ಪ್ರಾರಂಭಿಸುವ ಮೂಲಕ ಖ್ಯಾತರಾಗಿದ್ದಾರೆ.
ಗೃಹಿಣಿಯಿಂದ ಉದ್ಯಮಿಯಾಗಿ ಶೀಲಾ ಕೊಚೌಫ್ ಪ್ರಯಾಣ: ಉದ್ಯಮ ಕುಟುಂಬದಿಂದ ಬಂದವರಾದರೂ ಶೀಲಾ ಕೊಚೌಫ್ ಅವರ ಉದ್ಯಮಿಯಾಗಿ ಪ್ರಯಾಣ ಸುಲಭವಾಗಿರಲಿಲ್ಲ. ಶೀಲಾ ಕೊಚೌಫ್ ಅವರು 1995 ರಲ್ಲಿ ವಿ-ಸ್ಟಾರ್ ಕ್ರಿಯೇಷನ್ಸ್ ಕಂಪನಿಯನ್ನು ಪ್ರಾರಂಭಿಸಿದರು. ಶೀಲಾ ಕೊಚೌಫ್ ಅವರ ಪತಿ ಕೊಚೌಫ್ ಚಿಟ್ಟಿಲಪಿಲ್ಲಿ ಸ್ವತಃ ಓರ್ವ ಉದ್ಯಮಿಯಾಗಿದ್ದು, ಅವರು ವಿ-ಸ್ಟಾರ್ ಗ್ರೂಪ್ (ವಿ ಗಾರ್ಡ್ ಎಲೆಕ್ಟ್ರಾನಿಕ್ಸ್, ವಂಡರ್ಲಾ ಥೀಮ್ ಪಾರ್ಕ್‌ಗಳು, ಇತ್ಯಾದಿ) ಮಾಲೀಕರಾಗಿದ್ದಾರೆ.

ಶೀಲಾ ತಮ್ಮ ಪತಿಯ ಬಳಿ ಸ್ವಂತವಾಗಿ ಏನಾದರೂ ಉದ್ಯಮ ಪ್ರಾರಂಭಿಸುವ ಆಸೆ ವ್ಯಕ್ತಪಡಿಸಿದಾಗ, ಪತಿ ಕೊಚೌಫ್ ಎರಡು ಷರತ್ತುಗಳನ್ನು ಶೀಲಾ ಕೊಚೌಫ್ ಅವರ ಮುಂದಿಟ್ಟರು. ಉದ್ಯಮ ಪ್ರಾರಂಭಿಸಲು ಬೇಕಾದ ಹಣವನ್ನು ಕುಟುಂಬದಿಂದ ಪಡೆಯದೇ ಬ್ಯಾಂಕ್ ಸಾಲದ ಮೂಲಕ ಪಡೆಯಬೇಕು ಮತ್ತು ಅವರಿಗೆ ಬೇಕಾದ ಖಾಲಿ ಕಚೇರಿಯನ್ನು ಒದಗಿಸಿದರೂ ಅದಕ್ಕೆ ಮಾಸಿಕ ಬಾಡಿಗೆಯನ್ನು ಪಾವತಿಸಬೇಕು ಎಂಬ ಷರತ್ತು ಪತಿ ಹಾಕಿದ್ದರು.
ಹಲವಾರು ವರ್ಷಗಳಿಂದ ಗೃಹಿಣಿಯಾಗಿದ್ದ ಶೀಲಾ ಕೊಚೌಫ್ ಅವರು ತಮ್ಮ ಪತಿಯ ಷರತ್ತುಗಳನ್ನು ಸವಾಲನ್ನು ಸ್ವೀಕರಿಸಿ ಬ್ಯಾಂಕ್‌ನಿಂದ ಸಣ್ಣ ಮೊತ್ತ ಸಾಲವನ್ನು ತೆಗೆದುಕೊಳ್ಳಲು ನಿರ್ಧರಿಸಿ ವಿ-ಸ್ಟಾರ್ ಕ್ರಿಯೇಷನ್ಸ್ ಎಂಬ ಒಳ ಉಡುಪು ಬ್ರಾಂಡ್ ಅನ್ನು ತೆರೆಯಲು ನಿರ್ಧರಿಸಿದರು. ಮಹಿಳೆಯರಿಗೆ ಮತ್ತು ಪುರುಷರಿಗೆ ಸರಳ ಮತ್ತು ಪ್ರತ್ಯೇಕ ವಿನ್ಯಾಸಗಳನ್ನು ವಿ-ಸ್ಟಾರ್ ಕ್ರಿಯೇಷನ್ಸ್ ಮೂಲಕ ನೀಡಲು ಯೋಜನೆ ಹಾಕಿಕೊಂಡರು.
ಶೀಲಾ ಕೊಚೌಫ್ ಅವರು ಸಾಲವನ್ನು ಪಡೆದು ಉದ್ಯಮಿಯಾಗಿ ಪ್ರಯಾಣ ಆರಂಭಿಸಿದಾಗ ಅವರಲ್ಲಿದ್ದೂ ಅವರ ಉತ್ಸಾಹ ಮತ್ತು 10 ಜನರ ತಂಡ. 1995 ರಲ್ಲಿ ಆರಂಭದಲ್ಲಿ ಬಟ್ಟೆ ವ್ಯಾಪಾರವಾಗಿ ಪ್ರಾರಂಭವಾಯಿತು. ಈ ಸಂದರ್ಭ ಒಳ ಉಡುಪು ವಸ್ತ್ರಗಳು ಮುಂಬೈ ಮತ್ತು ಬೆಂಗಳೂರಿನಿಂದ ತರಿಸಲಾಗುತ್ತಿದ್ದು, ಕೇರಳದಲ್ಲಿ ಯಾವುದೇ ಸ್ವದೇಶಿ (ತಾಯ್ನಾಡಿನ) ಬ್ರಾಂಡ್ ಇಲ್ಲ ಎಂಬುವುದು ಅರಿತುಕೊಂಡರು.
ಶೀಲಾ ಕೊಚೌಫ್ ಶೀಘ್ರದಲ್ಲೇ ತನ್ನ ಆರಂಭಿಕ ಕಂಪನಿಯಾದ ವಿ- ಸ್ಟಾರ್ ಕ್ರಿಯೇಷನ್ಸ್ ನ ಮೂಲಕ ಒಳ ಉಡುಪು ತಯಾರಿಸಲು ನಿರ್ಧರಿಸಿ ಸರಳ ವಿನ್ಯಾಸಗಳು ಮತ್ತು ಬಣ್ಣಗಳನ್ನು ಆಯ್ಕೆ ಮಾಡಿಕೊಂಡರು. ವಿನ್ಯಾಸಗಳು ಮತ್ತು ಬಣ್ಣಗಳನ್ನು ಸರಳವಾಗಿ ಇರಿಸಿಕೊಂಡು ಒಳ ಉಡುಪುಗಳನ್ನು ತಯಾರಿಸಲು ನಿರ್ಧರಿಸಿದರು. ಆರಂಭದಲ್ಲಿ, ಬ್ರಾ ಮತ್ತು ಪ್ಯಾಂಟಿಗಳನ್ನು 10 ಉದ್ಯೋಗಿಗಳು ಕೈಯಿಂದ ಹೊಲಿಯುತ್ತಿದ್ದರು.
ಸರಳ ಶೈಲಿ ಮತ್ತು ಕೈಗೆಟುಕುವ ಬೆಲೆಯಿಂದಾಗಿ, ವಿ-ಸ್ಟಾರ್ ಕ್ರಿಯೇಷನ್ಸ್ ಅತ್ಯಂತ ವೇಗವಾಗಿ ಬೆಳೆಯಲು ಪ್ರಾರಂಭಿಸಿ ಪ್ರಸ್ತುತ ಬಹು-ಮಿಲಿಯನ್ ಡಾಲರ್ ಕಂಪನಿಯಾಗಿ ಬೆಳೆದು ನಿಂತಿದೆ. ವಿ- ಸ್ಟಾರ್ ಕ್ರಿಯೇಷನ್ಸ್ ಹೆಣ್ನು ಮಕ್ಕಳಿಗಾಗಿ ಒಳ ಉಡುಪುಗಳು, ಲೆಗ್ಗಿಂಗ್‌ಗಳು, ರೆಡಿಮೇಡ್ ಬ್ಲೌಸ್‌ಗಳು, ಸ್ಲಿಪ್, ಕ್ಯಾಮಿಸೋಲ್‌ಗಳು ಮತ್ತು ಪುರುಷರಿಗಾಗಿ ಬ್ರೀಫ್‌ಗಳು ಮತ್ತು ಬನಿಯನ್ ಗಳನ್ನು ತಯಾರಿಸುತ್ತಿದೆ.
1995 ರಲ್ಲಿ ಶೀಲಾ ಕೊಚೌಫ್ ಸ್ಥಾಪಿಸಿದ ವಿ-ಸ್ಟಾರ್ ಕ್ರಿಯೇಷನ್ಸ್ ನ ಆದಾಯವೂ 2022 ರ ವೇಳೆಗೆ ಸುಮಾರು 500 ಕೋಟಿ ರೂಪಾಯಿಗಳನ್ನು ತಲುಪಿದೆ. ಝೀ ಬಿಸಿನೆಸ್ ಪ್ರಕಾರ, ಶೀಲಾ ಕೊಚೌಫ್ ಅವರ ಒಟ್ಟು ನಿವ್ವಳ ಮೌಲ್ಯವು 2020 ರಲ್ಲಿ ಸುಮಾರು 540 ಕೋಟಿ ರೂಪಾಯಿ ಆಗಿದೆ.


Click it and Unblock the Notifications