ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಾಮ್ ಚರಣ್ ಫ್ಯಾನ್‌ಗಳ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದ್ದಾರೆ. ಹಾಗೆಯೇ ದಕ್ಷಿಣ ಭಾರತದಲ್ಲಿ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ನಟರಲ್ಲಿ ಆರ್‌ಆರ್‌ಆರ್ ಸ್ಟಾರ್ ರಾಮ್ ಚರಣ್ ಕೂಡಾ ಒಬ್ಬರಾಗಿದ್ದಾರೆ. ನಟ ರಾಮ್ ಚರಣ್‌ರ ನಿವ್ವಳ ಆದಾಯವು ಪ್ರಸ್ತುತ 1,370 ಕೋಟಿ ರೂಪಾಯಿ ಆಗಿದೆ. ಆದರೆ ಈಗ ಸುದ್ದಿಯಲ್ಲಿರುವುದು ರಾಮ್ ಚರಣ್‌ರ ಪತ್ನಿ.
ಹೌದು, ಪ್ರಸ್ತುತ ರಾಮ್ ಚರಣ್‌ರ ಪತ್ನಿ ಸುದ್ದಿಯಲ್ಲಿದ್ದಾರೆ. ರಾಮ್ ಚರಣ್ ನಿವ್ವಳ ಆದಾಯವು 1,370 ಕೋಟಿ ರೂಪಾಯಿ ಆಗಿರುವಾಗ, ಉಪಾಸನಾ ಕಾಮಿನೇನಿ ಕೊನಿಡೇಲಾ ಆದಾಯವೇನು ರಾಮ್ ಚರಣ್‌ರ ಆದಾಯಕ್ಕಿಂತ ಕಡಿಮೆಯಾಗಿಲ್ಲ ಎಂಬುವುದು ನಿಮಗೆ ತಿಳಿದಿದೆಯೇ?. ಉಪಾಸನಾ ಕಾಮಿನೇನಿ ಅತೀ ದೊಡ್ಡ ಉದ್ಯಮಿ ಕುಟುಂಬದವರಾಗಿದ್ದಾರೆ. ಹಾಗೆಯೇ ಅನೇಕ ಕಂಪನಿಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಉಪಾಸನಾ ಕಾಮಿನೇನಿ ಆದಾಯ ಎಷ್ಟಿದೆ ಎಂದು ತಿಳಿಯೋಣ ಮುಂದೆ ಓದಿ...

ರಾಮ್ ಚರಣ್‌ರ ಪತ್ನಿಯ ಉಪಾಸನಾರ ಆದಾಯವೆಷ್ಟಿದೆ?
ಮಾಧ್ಯಮಗಳ ವರದಿಯ ಪ್ರಕಾರ ಉಪಾಸನಾ ಕಾಮಿನೇನಿ ಕೊನಿಡೇಲಾ ಹಾಗೂ ರಾಮ್ ಚರಣ್‌ರ ನಿವ್ವಳ ಆದಾಯವು 2500 ಕೋಟಿ ರೂಪಾಯಿ ಆಗಿದೆ. ಈ ಪೈಕಿ ರಾಮ್ ಚರಣ್ ಆದಾಯ 1,370 ಕೋಟಿ ರೂಪಾಯಿ ಆಗಿದ್ದರೆ, ಉಪಾಸನಾ ಕಾಮಿನೇನಿ ನಿವ್ವಳ ಆದಾಯವು 1130 ಕೋಟಿ ರೂಪಾಯಿ ಆಗಿದೆ. ಉಪಾಸನಾ ಕಾಮಿನೇನಿಯ ಅಜ್ಜ ಪ್ರತಾಪ್ ಸಿ. ರೆಡ್ಡಿ ಆಗಿದ್ದು, ಅಪೋಲೋ ಆಸ್ಪತ್ರೆಗಳ ಅಧ್ಯಕ್ಷರಾಗಿದ್ದಾರೆ.
ಅಪೋಲೋ ಭಾರತದ ಮೊದಲ ಆಸ್ಪತ್ರೆಗಳಲ್ಲಿ ಒಂದಾಗಿದೆ. ಪ್ರತಾಪ್ ಸಿ. ರೆಡ್ಡಿಯು 21,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇನ್ನು ಉಪಾಸನಾ ಕಾಮಿನೇನಿಯ ಅಜ್ಜ ದೇಶದ 100 ಬಿಲಿಯನೇರ್‌ಗಳಲ್ಲಿ ಒಬ್ಬರಾಗಿದ್ದಾರೆ. ಉಪಾಸನಾ ಕಾಮಿನೇನಿ ಕೊನಿಡೇಲಾ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರಾಗಿದ್ದರೆ, ಅವರ ತಾಯಿ ಶೋಭನಾ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.
ಉಪಾಸನಾ ಕಾಮಿನೇನಿ ಇಂಟರ್‌ನ್ಯಾಶನಲ್ ಬಿಸಿನೆಸ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಉಪಾಸನಾ ಕುಟುಂಬ ವ್ಯವಹಾರಕ್ಕೆ ಸೇರಿಕೊಂಡಿದ್ದಾರೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಗಳಲ್ಲಿ ಹಿರಿಯ ಹುದ್ದೆಯಲ್ಲದೇ ಬಿ ಪಾಸಿಟಿವ್ ಎಂಬ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.
ವಿಮಾ ಕಂಪನಿಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಟಿಪಿಎ ಹೆಸರನ್ನು ಕೇಳಿರಬಹುದು. ದು ಕುಟುಂಬ ಆರೋಗ್ಯ ವಿಮಾ ಕಂಪನಿಯಾಗಿದೆ. ಉಪಾಸನಾ ಕಾಮಿನೇನಿ ಕೊನಿಡೇಲಾ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಆಗಿದ್ದಾರೆ. ಉಪಾಸನಾ ಕಾಮಿನೇನಿಯ ತಂದೆ ಅನಿಲ್ ಕಾಮಿನೇನಿ ಕೂಡಾ ಉದ್ಯಮಿಯಾಗಿದ್ದಾರೆ. ಅವರು ಕೆಇಐ ಗ್ರೂಪ್ ಸಂಸ್ಥಾಪಕರಾಗಿದ್ದಾರೆ. ಈ ಕಂಪನಿಯ ಮಂಡಳಿಯಲ್ಲಿ ಉಪಾಸನಾ ಕೂಡ ಇದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಜೂನ್ 14, 2012 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಯ ವಿವಾಹವಾಗಿ 11 ವರ್ಷಗಳಾಗಿವೆ. ಉಪಾಸನಾ ಮತ್ತು ರಾಮ್ ಚರಣ್ ಇತ್ತೀಚೆಗೆ ಹೆಣ್ಣು ಮಗುವು ತಮ್ಮ ಜೀವನಕ್ಕೆ ಬಂದ ಸಂತಸದಲ್ಲಿದ್ದಾರೆ. ರಾಮ್ ಚರಣ್ ಹಿರಿಯ ನಟ ಚಿರಂಜೀವಿ ಅವರ ಮಗ.
ವರದಿಗಳ ಪ್ರಕಾರ, ಆರಂಭದಲ್ಲಿ, ಉಪಾಸನಾ ಕಾಮಿನೇನಿ ಕೊನಿಡೇಲಾ ಕುಟುಂಬ ವ್ಯವಹಾರಕ್ಕೆ ಸೇರುವ ಮೊದಲು ಫ್ಯಾಷನ್ ಡಿಸೈನರ್ ಆಗಲು ಬಯಸಿದ್ದರು. ಆದರೆ ನಂತರ, ಆತಿಥ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ನಂತರ ಉಪಾಸನಾ ಕಾಮಿನೇನಿ ತನ್ನ ಮನಸ್ಸನ್ನು ಬದಲಾವಣೆ ಮಾಡಿದ್ದಾರೆ. ಆರಂಭದಲ್ಲಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇರಿಕೊಂಡರು. ಉಪಾಸನಾ ತನ್ನ ದೇಣಿಗೆ, ದಾನ ಧರ್ಮದ ಕಾರ್ಯಗಳಿಗಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.


Click it and Unblock the Notifications