ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಿದರೆ ಜಾಗತಿಕವಾಗಿ ಏನು ಪರಿಣಾಮ?

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಸತತ ನಾಲ್ಕನೇ ಬಾರಿ ಬಡ್ಡಿ ದರವನ್ನು ಹೆಚ್ಚಿಸಿದೆ. ಅಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ತರಲು ಅಲ್ಲಿನ ಸೆಂಟ್ರಲ್ ಬ್ಯಾಂಕ್ 75 ಬೇಸಿಸ್ ಪಾಯಿಂಟ್‌ನಷ್ಟು ದರ ಏರಿಕೆಯ ಕ್ರಮ ಕೈಗೊಂಡಿದೆ. ಇದರೊಂದಿಗೆ ಫೆಡರಲ್ ಬ್ಯಾಂಕ್ ರೇಟುಗಳು ಶೇ. 3.75ರಿಂದ ಶೇ. 4ರ ಶ್ರೇಣಿ ತಲುಪಿವೆ.

ಈ ಬಡ್ಡಿ ದರ ಏರಿಕೆಯಿಂದ ಹಣದುಬ್ಬರವು ಶೇ. 2ರ ಮಟ್ಟ ಮುಟ್ಟಬಹುದು ಎನ್ನುವ ವಿಶ್ವಾಸದಲ್ಲಿ ಫೆಡರಲ್ ಬ್ಯಾಂಕ್ ಇದೆ. ಈ ಗುರಿ ಮುಟ್ಟುವವರೆಗೂ ಬಡ್ಡಿ ದರ ಏರಿಕೆಯ ಅಸ್ತ್ರ ಪ್ರಯೋಗಿಸುವ ಸುಳಿವನ್ನು ಸೆಂಟ್ರಲ್ ಬ್ಯಾಂಕ್ ನೀಡಿದೆ. ಆದರೆ, ಒಮ್ಮೆಗೇ 75 ಅಂಕಗಳನಷ್ಟು ಪ್ರಮಾಣದಲ್ಲಿ ದರವನ್ನು ಏಕಾಏಕಿ ಏರಿಸುವ ಬದಲು ಸ್ವಲ್ಪ ಸ್ವಲ್ಪವಾಗಿ ದರ ಏರಿಸಬಹುದು.

ಭಾರತದ ಮೇಲೇನು ಪರಿಣಾಮ?

ಭಾರತದ ಮೇಲೇನು ಪರಿಣಾಮ?

ಅಮೆರಿಕದ ಸೆಂಟ್ರಲ್ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಳದಿಂದ ಭಾರತದಂಥ ಉದಯೋನ್ಮುಖ ಆರ್ಥಿಕತೆಗಳ ಮೇಲೆ ತೀರಾ ಹೆಚ್ಚು ಎನಿಸುವಷ್ಟು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಸೀಮಿತ ಮಟ್ಟದಲ್ಲಿ ಪರಿಣಾಮವಾಗುವ ಸಂದರ್ಭವೇ ಹೆಚ್ಚು. ಆದರೂ ಕೆಲವೊಮ್ಮೆ ಪರಿಸ್ಥಿತಿ ಗಂಭೀರ ಹಂತಕ್ಕೆ ಹೋಗಲೂ ಬಹುದು. ಆ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆಯಿಂದ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಆಗುವ ಪ್ರಮುಖ ತೊಂದರೆಯಲ್ಲಿ ವಿದೇಶೀ ಹೂಡಿಕೆಗಳು ವಾಪಸ್ ಹೋಗುವುದು. ಭಾರತದಲ್ಲಿ ಇತ್ತೀಚೆಗೆ ಇದರ ನಿದರ್ಶನ ಬಹಳ ಸ್ಪಷ್ಟವಾಗಿದೆ. ಸಾವಿರಾರು ಕೋಟಿ ರೂ ಮೊತ್ತದ ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆಗಳು ವಾಪಸ್ಸಾಗಿವೆ. ಪೋರ್ಟ್‌ಫೋಲಿಯೋ ಹೂಡಿಕೆ ಎಂಬುದು ಷೇರು, ಬಾಂಡು, ಮ್ಯೂಚುವಲ್ ಫಂಡ್ ಇತ್ಯಾದಿ ಹಣಕಾಸು ಯೋಜನೆಗಳಲ್ಲಿ ಹಣ ತೊಡಗಿಸಿಕೊಳ್ಳುವುದು. ಕಳೆದ 9 ತಿಂಗಳಲ್ಲಿ ಭಾರತದಿಂದ 9 ಲಕ್ಷ ಕೋಟಿ ರೂ ಮೊತ್ತದಷ್ಟು ಎಫ್‌ಪಿಐಗಳು ಹೊರಹೋಗಿವೆ.

ಅಮೆರಿಕದ ಬಡ್ಡಿ ದರ ಹೆಚ್ಚಳದಿಂದ ಕರೆನ್ಸಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ದರ ಕುಸಿಯುತ್ತದೆ. ವಿದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದವರು ತಮ್ಮ ಬಂಡವಾಳವನ್ನು ಡಾಲರ್ ಕಡೆಗೆ ತಿರುಗಿಸುವುದು ಡಾಲರ್ ಶಕ್ತಿ ವರ್ಧನೆಗೆ ಕಾರಣವಾಗಬಹುದು.

 

ಐಟಿ ರಫ್ತು ಕಡಿಮೆ ಆಗಬಹುದು

ಐಟಿ ರಫ್ತು ಕಡಿಮೆ ಆಗಬಹುದು

ಇದರ ಜೊತೆಗೆ ಭಾರತದ ಐಟಿ ರಫ್ತಿನ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಡಾಲರ್ ಮೌಲ್ಯ ಹೆಚ್ಚಿದರೆ ರಫ್ತು ಕ್ಷೇತ್ರಕ್ಕೆ ಒಳ್ಳೆಯ ಪುಷ್ಟಿ ಸಿಗುತ್ತದೆ. ಆದರೆ, ಇಲ್ಲಿ ಬೇರೆಯೇ ಪರಿಣಾಮ ಆಗುತ್ತದೆ. ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚುತ್ತಲೇ ಹೋದರೆ ಆರ್ಥಿಕ ಹಿಂಜರಿತ ಆಗಬಹುದು ಎಂಬ ಭೀತಿ ಇರುವುದರಿಂದ ಅಮೆರಿಕನ್ ಕಂಪನಿಗಳು ತಮ್ಮ ಕೆಲ ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು. ಟಿಸಿಎಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ಎಚ್‌ಸಿಎಲ್ ಟೆಕ್ ಇತ್ಯಾದಿ ಐಟಿ ಸರ್ವಿಸ್ ಕಂಪನಿಗಳಿಗೆ ಸಿಗುವ ಪ್ರಾಜೆಕ್ಟ್‌ಗಳು ಕಡಿಮೆ ಆಗಬಹುದು. ಹೀಗಾಗಿ, ಭಾರತದ ರಫ್ತಿನ ಮೇಲೆ ಪರಿಣಾಮ ಬೀರಬಹುದು.

ಷೇರುಪೇಟೆ ಮೇಲೇನು ಪರಿಣಾಮ?

ಷೇರುಪೇಟೆ ಮೇಲೇನು ಪರಿಣಾಮ?

ಫೆಡರಲ್ ಬ್ಯಾಂಕ್ ದರ ಹೆಚ್ಚಾದರೆ ಷೇರುಪೇಟೆಗೆ ನಷ್ಟ ಆಗಿರುವ ನಿದರ್ಶನ ಬಹಳ ಇವೆ. ಬಡ್ಡಿ ದರ ಹೆಚ್ಚಿದರೆ ಸರ್ಕಾರದ ಬಾಂಡ್‌ಗಳು ಹೆಚ್ಚು ರಿಟರ್ನ್ಸ್ ನೀಡುತ್ತವೆ. ಹೆಚ್ಚಿನ ಬಡ್ಡಿ ದರ ಸಿಗುವ ಸಾಧ್ಯತೆಯಿಂದಾಗಿ ಷೇರುಪೇಟೆಯಲ್ಲಿ ಹೂಡಿದ್ದವರು ತಮ್ಮ ಹೂಡಿಕೆಯನ್ನು ಹಿಂಪಡೆದು ಬಾಂಡ್‌ನಂಥ ನಿಶ್ಚಿತ ಬಡ್ಡಿ ಯೋಜನೆಗಳ ಮೇಲೆ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ, ಷೇರುಪೇಟೆಗೆ ನಷ್ಟವಾಗುತ್ತದೆ. ನಿನ್ನೆ ಬುಧವಾರ ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಾದಾಗ ಅಮೆರಿಕದ ಷೇರುಪೇಟೆ ಜೊತೆಗೆ ಏಷ್ಯಾದ ವಿವಿಧ ‍ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಉಂಟಾಗಿದೆ. ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆಗಳು ಎಲ್ಲಿ ಹೆಚ್ಚು ಇದೆಯೋ ಅಂಥ ಹಣಕಾಸು ಮಾರುಕಟ್ಟೆಯ ಮೇಲೆ ಹೆಚ್ಚು ಪರಿಣಾಮವಾಗಿದೆ.

ಭಾರತದಂಥ ಉದಯೋನ್ಮುಖ ಆರ್ಥಿಕತೆಯಲ್ಲಿ ಸಾಮಾನ್ಯವಾಗಿ ವಿದೇಶೀ ಹೂಡಿಕೆಗಳು ಹೆಚ್ಚಿರುತ್ತವೆ. ಹೀಗಾಗಿ ಇಂಥ ಮಾರುಕಟ್ಟೆಗಳಿಗೆ ಅಮೆರಿಕದ ಡಾಲರ್ ಮತ್ತು ಬಡ್ಡಿ ದರ ಹೆಚ್ಚು ಬಿಸಿ ಕೊಡುತ್ತದೆ.

 

ಚಿನ್ನದ ಬೆಲೆ ಇಳಿಕೆ ಸಾಧ್ಯತೆ

ಚಿನ್ನದ ಬೆಲೆ ಇಳಿಕೆ ಸಾಧ್ಯತೆ

ಯುಎಸ್ ಫೆಡರಲ್ ರಿಸರ್ವ್‌ನಿಂದ ಬಡ್ಡಿ ದರ ಹೆಚ್ಚಿದರೆ ಬಾಂಡ್‌ನ ಯೀಲ್ಡ್ ಅಥವಾ ರಿಟರ್ನ್ ಹೆಚ್ಚುತ್ತದೆ. ಹೀಗಾದಾಗ ಚಿನ್ನದಂಥ ವಸ್ತುಗಳ ಮೇಲೆ ಬೇಡಿಕೆ ಕಡಿಮೆ ಆಗುತ್ತದೆ. ಯಾಕೆಂದರೆ ಚಿನ್ನದ ಮೇಲೆ ಹಣ ಹೂಡುವುದಕ್ಕಿಂತ ಸೋವರೀನ್ ಬಾಂಡ್ ಮೇಲೆ ಬಂಡವಾಳ ಹಾಕುವುದು ಹೆಚ್ಚು ಸುರಕ್ಷಿತ ಎನ್ನುವ ಭಾವನೆ ಹೂಡಿಕೆದಾರರಿಗೆ ಬರುತ್ತದೆ. ಹೀಗಾಗಿ, ಬಡ್ಡಿ ದರ ಹೆಚ್ಚಾದಂತೆ ಚಿನ್ನದ ಬೆಲೆ ಆಗುತ್ತದೆ. ಭಾರತದಂಥ ಮಾರುಕಟ್ಟೆಗೆ ಚಿನ್ನ ಕೊಳ್ಳುವ ಕಾರಣ ಬೇರೆಯೇ ಇರುವುದರಿಂದ ಇಲ್ಲಿ ಚಿನ್ನದ ಬೆಲೆ ತಗ್ಗುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಚಿನ್ನವನ್ನು ಹೂಡಿಕೆ ವಸ್ತುವಾಗಿ ಕಾಣುವ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+