ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲು ವಿಧಿಸಬೇಕಾದ ದರ, ಕಿ.ಮೀ. ಷರತ್ತು ನಿಬಂಧನೆಗಳನ್ನು ಪರಿಷ್ಕರಣೆ ಮಾಡಲಾಗಿದೆ. ನೂತನ ದರ ಪಟ್ಟಿಯನ್ನು ಕೆಎಸ್‌ಆರ್‌ಟಿಸಿ ಪ್ರಕಟಿಸಿದೆ.
ಡೀಸೆಲ್ ಹಾಗೂ ಸಿಬ್ಬಂದಿ ವೆಚ್ಚಗಳು ಅಧಿಕವಾದ ಕಾರಣದಿಂದಾಗಿ ಒಟ್ಟಾಗಿ ಕಾರ್ಯಾಚರಣೆಯ ವೆಚ್ಚವೂ ಕೂಡಾ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಪ್ರೀಮಿಯಂ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಹೇಳಿದೆ.

ಈ ಹಿಂದೆ ಆಗಸ್ಟ್ ಒಂದರಿಂದ ಜಾರಿಗೆ ಬರುವಂತೆ ಕರ್ನಾಟಕ ಸಾರಿಗೆ, ರಾಜಹಂಸ, ರಾಜಹಂಸ (12 ಮೀಟರ್ ಚಾಸಿಸ್), ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್, ಮಿಡಿ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರಗಳನ್ನೇ ಮುಂದುವರೆಸಲಾಗುತ್ತದೆ.
ಆದರೆ ಪ್ರೀಮಿಯಂ ಬಸ್ಸುಗಳನ್ನು ಗಂಟೆಗಳ ಆಧಾರದಲ್ಲಿ ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಲಭ್ಯವಿರುವ ಎಲ್ಲಾ ಪ್ರೀಮಿಯಂ ಬಸ್ಸಿನ ವರ್ಗಗಳನ್ನು ಇದರಲ್ಲಿ ಸೇರಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಈ ನೂತನ ದರವು ನವೆಂಬರ್ 20 ರಿಂದ ಜಾರಿಗೆ ಬರುತ್ತದೆ. ಈ ಆದೇಶವನ್ನು ಕೆಎಸ್‌ಆರ್‌ಟಿಸಿ ಹೊರಡಿಸುವ ಮುನ್ನವೇ ಬುಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸಲಾಗುತ್ತದೆ. ಈ ದಿನಾಂಕಕ್ಕೂ ನಂತರ ಬುಕ್ಕಿಂಗ್ ಮಾಡಿದರೆ ನೂತನ ದರವೇ ಅನ್ವಯವಾಗುತ್ತದೆ.
12 ಗಂಟೆಗಳ ಅವಧಿಗೆ ಒಪ್ಪಂದದ ದರಗಳು
12 ಗಂಟೆಗಳ ಒಪ್ಪಂದದ ಅವಧಿಯು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಅನ್ವಯವಾಗುತ್ತದೆ. ಇದು ರಾಜ್ಯದೊಳಗೆ ಮಾತ್ರ ಸಂಚಾರ ಮಾಡಲು ಮಾಡುವ ಒಪ್ಪಂದದ ದರವಾಗಿದೆ.
* ರಾಜಹಂಸದಲ್ಲಿ 36 ಆಸನಗಳಿದ್ದು, 200 ಕಿಮೀ ಪ್ರಯಾಣಕ್ಕೆ ಅವಕಾಶವಿದೆ. 12 ಗಂಟೆಗಳ ಅವಧಿಗೆ, ಪ್ರತಿ ಕಿ. ಮೀ. ಗೆ 55 ರೂಪಾಯಿಯಂತೆ ಬಾಡಿಗೆಗೆ ನೀಡಲಾಗುತ್ತದೆ. ಪರಿಷ್ಕೃತ ದರ 11000 ರೂಪಾಯಿ ಆಗಿದೆ.
* ಮೈಸೂರು ನಗರ ವೋಲ್ಟೋ ಎಸಿ ಬಸ್‌ಗಳಲ್ಲಿ 38 ಆಸನಗಳಿದೆ. ಈ ಬಸ್‌ನಲ್ಲಿ 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 80 ರೂಪಾಯಿ, 12 ಗಂಟೆಗಳ ದರ 16000 ರೂಪಾಯಿ ಆಗಿದೆ.
* ವೋಲ್ಟೋ (ಬಿಎಸ್4-ಬಿ8ಆರ್) ಬಸ್‌ನಲ್ಲಿ ಒಟ್ಟಾಗಿ 43 ಆಸನಗಳು ಇರುತ್ತದೆ. 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 90 ರೂಪಾಯಿ, 12 ಗಂಟೆಗಳ ದರ 18000 ರೂಪಾಯಿ ಆಗಿದೆ.
* ಐರಾವತ ಕ್ಲಬ್ ಕ್ಲಾಸ್ ಮಲ್ಟಿಆಕ್ಸಲ್ (ಬಿಎಸ್- III-ಬಿ9ಆರ್) ಬಸ್‌ಗಳಲ್ಲಿ 47/49 ಆಸನಗಳಿದೆ. ಈ ಬಸ್‌ನಲ್ಲಿ 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 90 ರೂಪಾಯಿ, 12 ಗಂಟೆಗಳ ದರ 18000 ರೂಪಾಯಿ ಆಗಿದೆ.
* ಐರಾವತ ಕ್ಲಬ್ ಕ್ಲಾಸ್ ಮಲ್ಟಿಆಕ್ಸಲ್ (ಬಿಎಸ್-IV-ಬಿ11ಆರ್-13.8) ಬಸ್‌ಗಳಲ್ಲಿ 47 ಆಸನಗಳಿದೆ. ಈ ಬಸ್‌ನಲ್ಲಿ 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 100 ರೂಪಾಯಿ, 12 ಗಂಟೆಗಳ ದರ 20000 ರೂಪಾಯಿ ಆಗಿದೆ.
* ಐರಾವತ ಕ್ಲಬ್ ಕ್ಲಾಸ್ ಮಲ್ಟಿಆಕ್ಸಲ್ (ಬಿಎಸ್-IV-ಬಿ11ಆರ್-14.5) ಬಸ್‌ಗಳಲ್ಲಿ 51 ಆಸನಗಳಿದೆ. ಈ ಬಸ್‌ನಲ್ಲಿ 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 110 ರೂಪಾಯಿ, 12 ಗಂಟೆಗಳ ದರ 22000 ರೂಪಾಯಿ ಆಗಿದೆ.
* ಫ್ಲೈ ಬಸ್ (ಬಿಎಸ್-IV-ಬಿ11ಆರ್-14.5) ಬಸ್‌ಗಳಲ್ಲಿ 48 ಆಸನಗಳಿದೆ. ಈ ಬಸ್‌ನಲ್ಲಿ 12 ಗಂಟೆಗಳಲ್ಲಿ 200 ಕಿ.ಮೀ. ಸಂಚಾರಕ್ಕೆ ಒಪ್ಪಂದ ನಡೆದಿರುತ್ತದೆ. ಪ್ರತಿ ಕಿ.ಮೀ.ಗೆ 120 ರೂಪಾಯಿ, 12 ಗಂಟೆಗಳ ದರ 24000 ರೂಪಾಯಿ ಆಗಿದೆ.


Click it and Unblock the Notifications