ಪ್ರವಾಸ ಮಾಡುವ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ಹಿಮತುಂಬಿದ ಪ್ರದೇಶಗಳಿಗೆ, ಸುಂದರ ಪ್ರದೇಶಗಳು ಇರುವೆಡೆ ನಾವು ಪ್ರಯಾಣ ಮಾಡಲು ಬಯಸುತ್ತೇವೆ. ಈಗ ನಿಮಗೆ ಇಂತಹ ಪ್ರದೇಶಕ್ಕೆ ಭೇಟಿ ನೀಡುವ, ಪ್ರವಾಸ ಮಾಡುವ ಅವಕಾಶವನ್ನು ಐಆರ್‌ಸಿಟಿಸಿ ನೀಡಿದೆ.
ತಾಜ್‌ಮಹಲ್, ಮೈಸೂರು ಪ್ಯಾಲೇಸ್ ಮೊದಲಾದವುಗಳು ನಮ್ಮ ಲೀಸ್ಟ್‌ನಲ್ಲಿ ಇರುವಂತೆಯೇ ಲಡಾಖ್ ಕೂಡಾ ಹಲವಾರು ಮಂದಿ ಪ್ರವಾಸ ಮಾಡಲು ಬಯಸುವ ಪಟ್ಟಿಯಲ್ಲಿರುವ ತಾಣದ ಹೆಸರಾಗಿದೆ. ಅತೀ ಎತ್ತರದ ಪ್ರದೇಶದಲ್ಲಿ ದಾರಿಯನ್ನು ಹೊಂದಿರುವ ಈ ಪ್ರದೇಶವನ್ನು land of the passes ಎಂದು ಕರೆಯಲಾಗುತ್ತದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ....

ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: ಡಿಸ್ಕವರಿ ಲಡಾಖ್ ವಿತ್ ಐಆರ್‌ಸಿಟಿಸಿ
ಯಾವಾಗ ಪ್ರವಾಸ: ಸೆಪ್ಟೆಂಬರ್ 2, 4, 9, 11, 16, 18, 23, 25, 27, 30
ಅಕ್ಟೋಬರ್ 2, 7, 9, 14, 16, 21, 23, 28
ಹೇಗೆ ಪ್ರಯಾಣ: ವಿಮಾನದಲ್ಲಿ ಪ್ರಯಾಣ
ಎಷ್ಟು ದಿನ ಪ್ರಯಾಣ: ಆರು ರಾತ್ರಿಗಳು, ಏಳು ದಿನಗಳ ಪ್ರಯಾಣ
ಪ್ಯಾಕೇಜ್ ದರ ಎಷ್ಟಿದೆ?
ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 38,800 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 35,500 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 34,800 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 33,600 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 29,200 ರೂಪಾಯಿ ಆಗಿದೆ. 2-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 15,800 ರೂಪಾಯಿ ಆಗಿದೆ.
ದಿನ 1: ಲೇಹ್ ಆಗಮನ
06:30 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿ, ಲೇಹ್‌ಗೆ 07:50 ಗಂಟೆಗೆ ತಲುಪುವುದು. ಹೊಟೇಲ್‌ಗೆ ಚೆಕ್ ಇನ್ ಆಗುವುದು. ದಿನವಿಡಿ ಬೇರೆ ಪ್ರವಾಸ ಇರದು. ನಿಮಗೆ ವಿಶ್ರಾಂತಿ ಇರುತ್ತದೆ. ಲೇಹ್‌ನಲ್ಲಿ ರಾತ್ರಿ ತಂಗಲಾಗುತ್ತದೆ.
ದಿನ 2: ಲೇಹ್ - ಶಾಮ್ ವ್ಯಾಲಿ- ಲೇಹ್
ಉಪಹಾರದ ನಂತರ, ಲೇಹ್-ಶ್ರೀನಗರ ಹೆದ್ದಾರಿಯಲ್ಲಿ ಪ್ರಯಾಣ. ಶಾಂತಿ ಸ್ತೂಪ ಮತ್ತು ಲೇಹ್ ಅರಮನೆಗೆ ಭೇಟಿ. ಹಾಲ್ ಆಫ್ ಫೇಮ್ ಮತ್ತು ಗುರುದ್ವಾರ ಪತ್ತರ್ ಸಾಹಿಬ್ ಭೇಟಿ. ಸಿಂಧೂ ಮತ್ತು ಝನ್ಸ್ಕರ್ ನದಿಗಳ ಸಂಗಮ ವೀಕ್ಷಣೆ. ರಾತ್ರಿ ಲೇಹ್‌ನಲ್ಲಿ ತಂಗುವುದು.
ದಿನ 3: ಲೇಹ್ - ನುಬ್ರಾ
ಬೆಳಗಿನ ಉಪಾಹಾರದ ನಂತರ ಖರ್ದುಂಗ್ಲಾ ಪಾಸ್ ಮೂಲಕ ನುಬ್ರಾ ಕಣಿವೆಗೆ ಪ್ರಯಾಣ. ಊಟದ ನಂತರ ದೀಕ್ಷಿತ್ ಮತ್ತು ಹಂದರ್ ಗ್ರಾಮಗಳಿಗೆ ಭೇಟಿ, ಮಠಗಳಿಗೆ ಭೇಟಿ. ಸಂಜೆ ಒಂಟೆ ಸಫಾರಿ. ನುಬ್ರಾ ಕಣಿವೆಯಲ್ಲಿ ರಾತ್ರಿ ತಂಗುವುದು.
ದಿನ 4: ನುಬ್ರಾ - ಟರ್ಟುಕ್ - ನುಬ್ರಾ
ಉಪಹಾರದ ನಂತರ ತುರ್ತುಕ್ ಕಣಿವೆಗೆ ಪ್ರಯಾಣ. ದಾರಿಯಲ್ಲಿ, ಸಿಯಾಚಿನ್ ಯುದ್ಧ ಸ್ಮಾರಕ, ಥಾಂಗ್ ಝೀರೋ ಪಾಯಿಂಟ್‌ಗೆ ಭೇಟಿ. ಊಟದ ಬಂತರ ಟರ್ಟುಕ್ ಗ್ರಾಮದಲ್ಲಿ ಪ್ರಯಾಣ. ಬಾಲ್ಟಿ ಹೆರಿಟೇಜ್ ಹೌಸ್ ಮತ್ತು ಮ್ಯೂಸಿಯಂ ಮತ್ತು ನೈಸರ್ಗಿಕ ಕೋಲ್ಡ್ ಸ್ಟೋರೇಜ್‌ಗೆ ಭೇಟಿ. ನುಬ್ರಾಗೆ ಹಿಂತಿರುಗಿ, ನುಬ್ರಾ ಕಣಿವೆಯಲ್ಲಿ ರಾತ್ರಿ ತಂಗುವುದು.
ದಿನ 5: ನುಬ್ರಾ ಕಣಿವೆ - ಪಾಂಗಾಂಗ್
ಉಪಹಾರದ ನಂತರ ಪಾಂಗಾಂಗ್‌ಗೆ ಪ್ರಯಾಣ. ತ್ರೀ ಈಡಿಯಟ್ಸ್ ಚಲನಚಿತ್ರ ಶೂಟಿಂಗ್ ನಡೆದ ಸ್ಥಳಕ್ಕೆ ಭೇಟಿ. ಸರೋವರದ ದಡದಲ್ಲಿ ವಿಹಾರ. ಪಾಂಗಾಂಗ್‌ನಲ್ಲಿ ರಾತ್ರಿ ತಂಗುವುದು.
ದಿನ 6: ಪಾಂಗಾಂಗ್ - ಚಾಂಗ್ಲಾ ಮೂಲಕ ಲೇಹ್
ಮುಂಜಾನೆ, ಸರೋವರದಲ್ಲಿ ಸೂರ್ಯೋದಯದ ಸುಂದರ ನೋಟ ವೀಕ್ಷಣೆ. ಬೆಳಗಿನ ಉಪಾಹಾರದ ನಂತರ, ಲೇಹ್‌ಗೆ ವಾಪಾಸ್. ಮಾರ್ಗದಲ್ಲಿ ಥಿಕ್ಸೇ ಮೊನಾಸ್ಟರಿಗೆ ಭೇಟಿ. ಅದಾದ ಬಳಿಕ ಲೇಹ್‌ನಲ್ಲಿ ಹೊಟೇಲ್‌ನಲ್ಲಿ ಚೆಕ್ ಇನ್. ಸಂಜೆ ಮಾರುಕಟ್ಟೆಯಲ್ಲಿ ಸುತ್ತಾಟ.
ದಿನ 7: ಲೇಹ್ ಪ್ರಯಾಣ - ದೆಹಲಿ
ಲೇಹ್ ವಿಮಾನ ನಿಲ್ದಾಣದಲ್ಲಿ ಉಪಹಾರ ಮಾಡಿದ ಬಳಿಕ 07:40 ಗಂಟೆಗೆ ವಿಮಾನವನ್ನು ಹತ್ತಿ ಮತ್ತು 09:00 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಣ.


Click it and Unblock the Notifications