Aadhaar Shila: 58 ರೂ ಹೂಡಿಕೆ ಮಾಡಿ 8 ಲಕ್ಷ ರೂ ಪಡೆಯಿರಿ
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಲವಾರು ವಿಮಾ ಮತ್ತು ಹೂಡಿಕೆ ಯೋಜನೆಯನ್ನು ಹೊಂದಿದೆ. ಜೀವ ವಿಮೆಯ ಸುರಕ್ಷಿತೆಯ ಜೊತೆಗೆ ಹಣ ಉಳಿತಾಯ ಮಾಡಲು ಸಾಧ್ಯವಾಗುವಂತಹ ಅದೆಷ್ಟೋ ಯೋಜನೆಗಳನ್ನು ಎಲ್‌ಐಸಿಯು ಹೊಂದಿದೆ. ಅದರಿಂದಾಗಿ ವಿಮಾ ಮಾರುಕಟ್ಟೆಯಲ್ಲಿ ಈಗಲೂ ಎಲ್‌ಐಸಿ ಪ್ರಮುಖ ವಿಮಾ ಸಂಸ್ಥೆಯಾಗಿ ಉಳಿದಿದೆ.
ಎಲ್‌ಐಸಿಯ ಈ ಒಂದು ಯೋಜನೆಯಲ್ಲಿ ನೀವು ದಿನಕ್ಕೆ 58 ರೂಪಾಯಿ ಹೂಡಿಕೆ ಮಾಡಿ ಮೆಚ್ಯೂರಿಟಿ ವೇಳೆ 8 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗಲಿದೆ. ಅದುವೇ ಎಲ್‌ಐಸಿ ಆಧಾರ್ ಶಿಲಾ ಯೋಜನೆಯಾಗಿದೆ. ಇದು ಪ್ರಮುಖವಾಗಿ ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ, ಮಹಿಳೆಯರಿಗೆ ಹಣ ಉಳಿತಾಯ ಮಾಡಲು ಸಾಧ್ಯವಾಗುವಂತಹ ಯೋಜನೆಯಾಗಿದೆ.
ಇದು ನಾನ್‌ಲಿಂಕ್ಡ್ ಯೋಜನೆಯಾಗಿದ್ದು, ಇದರಲ್ಲಿ ಹಲವಾರು ಪ್ರಯೋಜನಗಳು ಲಭ್ಯವಾಗುತ್ತದೆ. ಇದು ಉಳಿತಾಯದೊಂದಿಗೆ ಜೀವ ಸುರಕ್ಷತೆಯನ್ನು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಪ್ರಯೋಜನ, ಪ್ರೀಮಿಯಂ, ದಿನಕ್ಕೆ 58 ರೂಪಾಯಿ ಹೂಡಿಕೆ ಮಾಡಿ 8 ಲಕ್ಷ ರೂಪಾಯಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯೋಜನೆಯಲ್ಲಿನ ಪ್ರಯೋಜನಗಳೇನು?
ಎಲ್‌ಐಸಿ ಆಧಾರ್ ಶಿಲಾ ಯೋಜನೆಯಲ್ಲಿ ನೀವು ಡೆತ್ ಬೆನಿಫಿಟ್ ಹಾಗೂ ಮೆಚ್ಯೂರಿಟಿ ಬೆನಿಫಿಟ್ ಎರಡನ್ನೂ ಪಡೆಯಲು ಸಾಧ್ಯವಿದೆ. ವಿಮಾದಾರರು ಯೋಜನೆ ಮೆಚ್ಯೂರಿಟಿ ಹೊಂದುವ ಮುನ್ನ, ಯೋಜನೆ ಆರಂಭಿಸಿ 5 ವರ್ಷದೊಳಗೆ ಸಾವನ್ನಪ್ಪಿದರೆ ಯೋಜನೆಯಲ್ಲಿ ನಿರ್ದಿಷ್ಟ ಡೆತ್ ಬೆನಿಫಿಟ್ ಅನ್ನು ನೀಡಲಾಗುತ್ತದೆ. 5 ವರ್ಷದ ಬಳಿಕ ಸಾವನ್ನಪ್ಪಿದರೆ ಡೆತ್ ಬೆನಿಫಿಟ್ ಜೊತೆಗೆ ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತದೆ. ಪಾಲಿಸಿತ ಅಂತ್ಯದಲ್ಲಿ ಮೆಚ್ಯೂರಿಟಿ ಬೆನಿಫಿಟ್ ಪಾಲಿಸಿದಾರರಿಗೆ ಲಭ್ಯವಾಗುತ್ತದೆ.

ಪ್ರೀಮೀಯಂ ಪಾವತಿ ವಿಧಾನ
ಪಾಲಿಸಿದಾರರು ನಿಗದಿತ ದಿನಾಂಕದೊಳಗೆ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಪಾಲಿಸಿ ದಾಖಲೆಯಲ್ಲಿ ಉಲ್ಲೇಖಿಸಿರುವ ದಿನಾಂಕಕ್ಕೂ ಮುನ್ನ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ವಿಮಾದಾರರು ಸಾವನ್ನಪ್ಪಿದ್ದರೆ, ಆ ಸಮಯದವರೆಗಿನ ಎಲ್ಲ ಪ್ರೀಮಿಯಂ ಅನ್ನು ಪಾವತಿಸದಿದ್ದರೆ, ಆ ನಿರ್ದಿಷ್ಟ ಅವಧಿಯಲ್ಲಿ ಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಿ ಕ್ಲೈಮ್ ಮೊತ್ತವನ್ನು ನೀಡಲಾಗುತ್ತದೆ. ಮೊತ್ತ ಪಾವತಿಗಾಗಿ ಯಾವುದೇ ನೋಟಿಸ್ ಅನ್ನು ಸಂಸ್ಥೆಯು ನೀಡುವಂತಿಲ್ಲ. ಪ್ರೀಮಿಯಂ ಅನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧವಾರ್ಷಿಕವಾಗಿ, ವಾರ್ಷಿಕವಾಗಿ ಪಾವತಿಸಬಹುದು.

ಪಾಲಿಸಿ ಅವಧಿ, ಗ್ರೇಸ್ ಪಿರೇಡ್, ಅರ್ಹತೆ
ಈ ಪಾಲಿಸಿಯಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಅನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ 30 ದಿನಗಳ ಗ್ರೇಸ್ ಪಿರೇಡ್ ಇದೆ. ಗ್ರೇಸ್ ಅವಧಿ ಮುಗಿಯುವವರೆಗೂ ಪ್ರೀಮಿಯಂ ಮೊತ್ತವನ್ನು ಪಾವತಿ ಮಾಡದಿದ್ದರೆ, ಪಾಲಿಸಿಯು ಲ್ಯಾಪ್ಸ್ ಆಗುತ್ತದೆ. ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿರುವ ಕಾರಣದಿಂದಾಗಿ ಪ್ರೀಮಿಯಂ ಪಾವತಿ ಮಾಡಿಲ್ಲವೆಂಬ ಕಾರಣವನ್ನು ನೀಡುವುದಾದರೆ, ಪಾಲಿಸಿದಾರರು ಸಾವನ್ನಪ್ಪಿದ ದಿನವು ಗ್ರೇಸ್ ಪಿರೇಡ್ ಮುಗಿಯುವುದಕ್ಕೂ ಮುನ್ನ ಬಂದಿರಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 8 ವರ್ಷವಾಗಿದ್ದು ಗರಿಷ್ಠ 55 ವರ್ಷವಾಗಿದೆ. ಪಾಲಿಸಿ ಅವಧಿ 10ರಿಂದ 20 ವರ್ಷವಾಗಿದೆ. ಗರಿಷ್ಠ ಮೆಚ್ಯೂರಿಟಿ ವರ್ಷ 70 ವರ್ಷವಾಗಿದೆ.

58 ರೂ ಹೂಡಿಕೆ ಮಾಡಿ 9 ಲಕ್ಷ ರೂ ಪಡೆಯಿರಿ!
ಈ ಯೋಜನೆಯಲ್ಲಿ 3 ಲಕ್ಷದವರೆಗೆ ಹೂಡಿಕೆ ಮಾಡುವ ಅವಕಾಶವಿದೆ. ಇದು ಮಧ್ಯಮ ವರ್ಗದ ಮಹಿಳೆಯರಿಗೆ ಸಹಾಯಕವಾದ ಹೂಡಿಕೆ ವ್ಯವಸ್ಥೆಯಾಗಿದೆ. ವ್ಯಕ್ತಿಯು ಪ್ರತಿ ದಿನ 58 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ವೇಳೆ 8 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ನೀವು 20 ವರ್ಷದವರಾದರೆ ಪ್ರತಿ ದಿನ 58 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿ ದಿನ 58 ರೂಪಾಯಿಯಂತೆ ಪ್ರತಿ ದಿನ 21918 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. 20 ವರ್ಷದ ಬಳಿಕ 429392 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಆ ಸಂದರ್ಭದಲ್ಲಿ ಮೆಚ್ಯೂರಿಟಿ ವೇಳೆ ನಿಮಗೆ 794000 ರೂಪಾಯಿ ಅಂದರೆ ಸರಿ ಸುಮಾರು 8 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.