ಲೈಫ್ ಇಶ್ಯೂರೆನ್ಸ್ ಕಾರ್ಪೋರೇಶನ್‌ನ ಸರ್ಕಾರದ ಬೆಂಬಲಿತವಾದ "ಎಲ್ಐಸಿ ಆಧಾರ್ ಶಿಲಾ ಪ್ಲ್ಯಾನ್" ಜನಪ್ರಿಯ ವಿಮಾ ಯೋಜನೆಯಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಜೀವ ಸುರಕ್ಷತೆ ಮತ್ತು ಹಣ ಉಳಿತಾಯದ ಪ್ರಯೋಜನಗಳನ್ನು ಇದರಲ್ಲಿ ಪಡೆಯಬಹುದಾಗಿದೆ.
ಏನಿದು ಎಲ್ಐಸಿ ಆಧಾರ್ ಶಿಲಾ ಯೋಜನೆ: "ಎಲ್ಐಸಿ ಆಧಾರ್ ಶಿಲಾ ಪ್ಲಾನ್" ಇದುನಾನ್ ಲಿಂಕ್ಡ್ ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದ್ದು, ಮಹಿಳೆಯರಿಗೆ ಸಹಾಯ ಮಾಡಲೆಂದೇ ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ ವಿನ್ಯಾಸಗೊಳಿಸಲಾಗಿದೆ.
ಈ ಯೋಜನೆಯಲ್ಲಿ ದೀರ್ಘಾವಧಿಯಲ್ಲಿ ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಪಾಲಿಸಿಯ ಅವಧಿಯಲ್ಲಿ, ವಿಮೆದಾರರು ಮೃತಪಟ್ಟರೆ ವಿಮೆದಾರರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತದೆ. ಅಂದರೆ ಈ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ ಲಭ್ಯವಾಗುತ್ತದೆ.

ಎಲ್ಐಸಿ ಆಧಾರ್ ಶಿಲಾ ಯೋಜನೆಗೆ ಅರ್ಹತೆ:
8 ವರ್ಷದಿಂದ 55 ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳು / ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಪಾಲಿಸಿಯ ಮೆಚ್ಯೂರಿಟಿ ಅವಧಿಯೂ ಹತ್ತು ಮತ್ತು ಇಪ್ಪತ್ತು ವರ್ಷಗಳ ಮಧ್ಯಾವಧಿ ಆಗಿದೆ. ಅಲ್ಲದೆ ಈ ಎಲ್‌ಐಸಿ ಪಾಲಿಸಿಯ ಗರಿಷ್ಟ ಮೆಚ್ಯೂರಿಟಿ ವಯಸ್ಸು 70 ವರ್ಷಗಳಾಗಿದೆ.
ಎಲ್ಐಸಿ ಆಧಾರ್ ಶಿಲಾ ಯೋಜನೆಯು 3 ಲಕ್ಷ ರೂ. ಗಳ ಗರಿಷ್ಟ ಮೂಲ ಮೊತ್ತ ನೀಡುತ್ತದೆ. ಇದಲ್ಲದೆ ಈ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಕನಿಷ್ಠ ಮೂಲ ಮೊತ್ತ 75 ಸಾವಿರ ರೂ. ಆಗಿರುತ್ತದೆ.
ಎಲ್‌ಐಸಿ ಹೇಳಿಕೆ ಪ್ರಕಾರ, "ಎಲ್ಐಸಿ ಆಧಾರ್ ಶಿಲಾ ಯೋಜನೆ" ಪಾಲಿಸಿಗಳನ್ನು ಗರಿಷ್ಠ 3 ಲಕ್ಷ ರೂ. ಗಳವರೆಗೆ ಮಾತ್ರ ಖರೀದಿಸಬಹುದು. ಇದರ ಪಾವತಿಗಾಗಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂಗಳ ಆಯ್ಕೆಗಳಿವೆ.
ಉದಾಹರಣೆಗೆ ದಿನಂಪ್ರತಿ 29 ರೂ. ಉಳಿತಾಯಕ್ಕೆ ಮೀಸಲಿಟ್ಟು ಒಂದು ವರ್ಷದ ಅವಧಿಯಲ್ಲಿ "ಎಲ್ಐಸಿ ಆಧಾರ್ ಶಿಲಾ ಯೋಜನೆ" ಯಲ್ಲಿ 10,959ರೂ. ಹೂಡಿಕೆ ಮಾಡುತ್ತೀರಿ ಎಂದಿಟ್ಟುಕೊಳ್ಳಿ. 15ನೇ ವರ್ಷವಿದ್ದಾಗ ಈ ಯೋಜನೆಯನ್ನು ಪ್ರಾರಂಭಿಸಿ 10 ವರ್ಷಗಳ ಕಾಲ ಮುಂದುವರಿಸಿದಿರಿ ಎಂದು ಭಾವಿಸಿದರೆ ಈ 10 ವರ್ಷಗಳ ಅವಧಿಯಲ್ಲಿ 2,14,696 ರೂ. ಮೀಸಲಿಟ್ಟಂತೆ ಆಗುತ್ತದೆ. ಈ ಹೂಡಿಕೆ ಮೆಚ್ಯೂರ್ ಆದಾಗ 3,97,000 ರೂಪಾಯಿ ನೀವು ಗಳಿಸುತ್ತೀರಿ. ಹಾಗೆಯೇ ನೀವು ಪ್ರತಿ ದಿನ 87 ರೂಪಾಯಿಯಂತೆ ಪಾವತಿ ಮಾಡಿದರೆ ಮಾಸಿಕವಾಗಿ 2,610 ರೂಪಾಯಿ ಹೂಡಿಕೆ ಮಾಡಿದಂತಾಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ನೀವು 11 ಲಕ್ಷ ರೂಪಾಯಿ ಗಳಿಸಲು ಸಾಧ್ಯವಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications