ಎಲ್‌ಐಸಿ ಬಿಮಾ ರತ್ನ ಯೋಜನೆಯು ಭಾರತೀಯ ಜೀವ ವಿಮಾ ನಿಗಮವು ನೀಡುವ ಉಳಿತಾಯ ಜೀವ ವಿಮಾ ಯೋಜನೆಯಾಗಿದೆ. ಇದು ಲಿಂಕ್ ಮಾಡದ ಕಾರ್ಪೊರೇಟ್ ಏಜೆಂಟ್‌ಗಳು, ಬ್ರೋಕರ್‌ಗಳು ವಿಮಾ ಮಾರ್ಕೆಟಿಂಗ್ ಫರ್ಮ್‌ಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಪಡೆಯಬಹುದಾದ ವೈಯಕ್ತಿಕ ಪ್ಲ್ಯಾನ್ ಆಗಿದೆ. ಈ ಯೋಜನೆಯು ನಿಯತಕಾಲಿಕ ಪಾವತಿಗಳ ಮೂಲಕ ನಾನಾ ರೀತಿಯ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಜತೆಗೆ ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರು ಮೃತಪಟ್ಟರೆ ಆಗ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ಒದಗಿಸುತ್ತದೆ. ಎಲ್‌ಐಸಿ ಬಿಮಾ ರತ್ನ ಯೋಜನೆಯ ಪ್ರೀಮಿಯಂ ಅನ್ನು ಮಾಸಿಕವಾಗಿ(ಎನ್‌ಎಸಿಎಚ್ ಮೂಲಕ ಮಾತ್ರ)ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಾವತಿಸಬಹುದು. ಮೊದಲು ಪಾವತಿಸದ ಪ್ರೀಮಿಯಂಗೆ ವಾರ್ಷಿಕ, ಅರ್ಧ ವಾರ್ಷಿಕ ಅಥವಾ ತ್ರೈಮಾಸಿಕ ಪ್ರೀಮಿಯಂಗೆ 30 ದಿನಗಳ ಗ್ರೇಸ್ ಅವಧಿ ಇರುತ್ತದೆ. ಹಾಗೆಯೇ ಮಾಸಿಕ ಪ್ರೀಮಿಯಂಗೆ 15 ದಿನಗಳ ಗ್ರೇಸ್ ಅವಧಿ ಇರುತ್ತದೆ.
ಯೋಜನೆಯ ಬಗ್ಗೆ ಅಧಿಕ ಮಾಹಿತಿ
ವಾರ್ಷಿಕ ಹಾಗೂ ಅರ್ಧ ವಾರ್ಷಿಕ ಮೋಡ್‌ಗಾಗಿ ಟಾಬುಲರ್ ಪ್ರೀಮಿಯಂನಲ್ಲಿ ರಿಬೆಟ್ ನೀಡಲಾಗುತ್ತದೆ. ಇನ್ನು ಮೂಲ ವಿಮಾ ಮೊತ್ತದ ಖಾತ್ರಿ ಮೇಲೆ ಹೆಚ್ಚಿನ ಮೊತ್ತದ ರಿಬೆಟ್ ನೀಡಲಾಗುತ್ತದೆ. ಲ್ಯಾಪ್ಸ್ ಆದ ಪಾಲಿಸಿಯನ್ನು ಮೊದಲ ಪ್ರೀಮಿಯಂ ಪಾವತಿಯ ದಿನಾಂಕದಿಂದ ಸತತ ಐದು ವರ್ಷದೊಳಗೆ ಮೆಚ್ಯುರಿಟಿಯಾಗುವ ಮೊದಲು ಮರುಜೀವಗೊಳಿಸಬಹುದು. ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಪ್ರೀಮಿಯಂ ಅನ್ನು ಪಾವತಿಸಿದ್ದರೆ ಆಗ ಆ ಪಾಲಿಸಿಯನ್ನು ಸಂಪೂರ್ಣ ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ.
ಆದರೆ, ಕನಿಷ್ಠ ಎರಡು ಪೂರ್ಣ ವರ್ಷಗಳ ಪ್ರೀಮಿಯಂ ಅನ್ನು ಪಾವತಿಸಿದ್ದರೆ ಆಗ ಅದು ಪಾಸಿಲಿಯ ಅವಧಿಯ ಅಂತ್ಯದವರೆಗೆ ಪಾವತಿಸಿದ ಪಾಲಿಸಿಯಾಗಿ ಉಳಿಯುತ್ತದೆ. ಜತೆಗೆ ಎರಡು ಪೂರ್ಣ ವರ್ಷಗಳು ಪ್ರೀಮಿಯಂ ಪಾವತಿಯ ನಂತರ ಪಾಲಿಸಿಯನ್ನು ಸರೆಂಡರ್ ಮಾಡಬಹುದು ಮತ್ತು ವಿಶೇಷ ಸರೆಂಡರ್ ಮೌಲ್ಯ ಅಥವಾ ಖಾತರಿಯ ಸರೆಂಡರ್ ಮೌಲ್ಯಕ್ಕೆ ಸಮನಾದ ಸರೆಂಡರ್ ಮೌಲ್ಯವನ್ನು ಎಲ್‌ಐಸಿ ಪಾವತಿಸುತ್ತದೆ.
ಸಾಲವನ್ನು ಪಡೆಯುವ ಆಯ್ಕೆ
ಇನ್ನೊದೆಡೆ, ಕನಿಷ್ಠ ಎರಡು ವರ್ಷಗಳ ಪ್ರೀಮಿಯಂ ಪಾವತಿ ನಂತರ ಸಾಲವನ್ನು ಪಡೆಯಬಹುದು. ಇದು ಇನ್-ಫೋರ್ಸ್ ಪಾಲಿಸಿಗಳಿಗೆ ಸರೆಂಡರ್ ಮೌಲ್ಯದ ಶೇ.90ರವರೆಗೆ ಹಾಗೂ ಪೈಡ್ ಅಪ್ ಪಾಲಿಸಿಗಳಿಗೆ ಸರೆಂಡರ್ ಮೌಲ್ಯದ ಶೇ.80ರವರೆಗೆ ಮಂಜೂರು ಮಾಡಲಾಗುತ್ತದೆ. ಎಲ್‌ಐಸಿ ಬಿಮಾ ರತ್ನ ಯೋಜನೆಯು ಪಾಲಿಸಿದಾರರಿಗೆ ಮರಣದ ಪ್ರಯೋಜನ, ಮೆಚುರಿಟಿ ಪ್ರಯೋಜನ ಹಾಗೂ ಖಾತ್ರಿಯ ಸೇರ್ಪಡೆಯಂತಹ ಅನುಕೂಲಗಳನ್ನು ನೀಡುತ್ತದೆ.
ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರ ಮೃತಪಟ್ಟರೆ ಮರಣ ಪ್ರಯೋಜನವನ್ನು ಪಾವತಿಸಲಾಗುತ್ತದೆ ಹಾಗೂ ಖಾತ್ರಿಯ ಸೇರ್ಪಡೆಯೊಂದಿಗೆ ಸಾವಿನ ವಿಮಾ ಮೊತ್ತವನ್ನೂ ಒಳಗೊಂಡಿರುತ್ತದೆ. ಇದು ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಅಥವಾ ಮೂಲ ಖಾತ್ರಿ ವಿಮಾ ಮೊತ್ತದ ಶೇ.125ಕ್ಕಿಂತಲೂ ಜಾಸ್ತಿಯಿರುತ್ತದೆ.
ಸರ್ವೈವಲ್ ಬೆನಿಫಿಟ್ ಕೂಡಾ ಲಭ್ಯ
ಬದುಕುಳಿಯುವ ಪ್ರಯೋಜನವು 15 ವರ್ಷಗಳ ಅವಧಿ ಪಾಲಿಸಿಗೆ ಪ್ರತಿ 13 ಹಾಗೂ 14ನೇ ವರ್ಷದ ಕೊನೆಯಲ್ಲಿ, 20 ವರ್ಷಗಳ ಅವಧಿಗೆ ಪಾಲಿಸಿಗೆ ಪ್ರತಿ ಪ್ರತಿ 18 ಹಾಗೂ 19ನೇ ವರ್ಷದಲ್ಲಿ ಮತ್ತು ಹಾಗೂ 25 ವರ್ಷಗಳ ಅವಧಿ ಪಾಲಿಸಿಗೆ ಪ್ರತಿ 23 ಹಾಗೂ 24ನೇ ವರ್ಷದಲ್ಲಿ ನಿಗದಿತ ಮೂಲ ಖಾತ್ರಿ ಮೊತ್ತವನ್ನು ಪಾವತಿಸಲಾಗುತ್ತದೆ. ಹಾಗೆಯೇ ಮೆಚುರಿಟಿ ಬೆನಿಫಿಟ್ಸ್ ಮೆಚುರಿಟಿ ಮೇಲಿನ ಖಾತ್ರಿ ಮೊತ್ತವನ್ನು ಒಳಗೊಂಡಿದ್ದು, ಇದು ಸಂಚಿತ ಗ್ಯಾರಂಟಿಡ್ ಸೇರ್ಪಡೆ ಜತೆಗೆ ಮೂಲ ವಿಮಾ ಮೊತ್ತದ ಶೇ.50ಕ್ಕೆ ಸಮಾನವಾಗಿರುತ್ತದೆ.
ಪಾಲಿಸಿದಾರರು ಕೆಲವೊಂದು ಮಾನದಂಡಗಳನ್ನು ಪೂರೈಸಿದರೆ ಎಲ್‌ಐಸಿ ಬಿಮಾ ರತ್ನ ಯೋಜನೆಗೆ ಅರ್ಹರಾಗಿರುತ್ತಾರೆ. ಮೂಲ ವಿಮಾ ಮೊತ್ತವು ಕನಿಷ್ಠ 5 ಲಕ್ಷ ರೂ. ಆಗಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ಈ ಪಾಲಿಸಿ ಅವಧಿಯು 15 ವರ್ಷ, 20 ವರ್ಷ ಅಥವಾ 25 ವರ್ಷಗಳಾಗಿದ್ದು, ಪಾಲಿಸಿ ಅವಧಿಗೆ ಹೊಂದಿಕೊಂಡಂತೆ ಪ್ರೀಮಿಯಂ ಪಾವತಿ ಅವಧಿಯು ವ್ಯತ್ಯಾಸವಾಗುತ್ತದೆ.
ಇನ್ನು ಈ ವಿಮೆ ಪ್ರಾರಂಭಿಸಲು 15 ವರ್ಷದ ಅವಧಿ ಪಾಲಿಸಿಗೆ ಕನಿಷ್ಠ 5ವರ್ಷ ಹಾಗೂ 25 ವರ್ಷದ ಅವಧಿ ಪಾಲಿಸಿಗೆ ಗರಿಷ್ಠ 55 ವರ್ಷ ವಯಸ್ಸಾಗಿರಬೇಕು. ಅಲ್ಲದೆ, ಈ ಪಾಲಿಸಿ ಮೆಚ್ಯುರಿಟಿಗೆ ವಯೋಮಿತಿಯು 70 ವರ್ಷ ವಯಸ್ಸಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications