ಎಲ್ಐಸಿ ಯೋಜನೆ: ಭಾರತೀಯ ಜೀವ ವಿಮಾ ನಿಗಮವು, ಭಾರತದಲ್ಲಿಅತೀ ದೊಡ್ಡ ಹಾಗೂ ಹಳೆಯ ವಿಮಾ ಸಂಸ್ಥೆಯಾಗಿದ್ದು, ವಿಮಾ ಮಾರುಕಟ್ಟೆಯಲ್ಲಿಯೇ ಮುಂಚೂಣಿಯಲ್ಲಿದೆ. ಇದು ಸಮಾಜದ ಎಲ್ಲಾ ವರ್ಗದ ಆಧ್ಯತೆಯನ್ನು ಪೂರೈಸಲು ನಿಯಮಿತವಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ಇಂತಹ ಯೋಜನೆಗಳ ಪೈಕಿ "ಎಲ್ಐಸಿ ಬಿಮಾ ರತ್ನ" ಯೋಜನೆಯೂ ಒಂದಾಗಿದೆ. ಈ ಯೋಜನೆಯು ಮನಿಬ್ಯಾಕ್, ಗ್ಯಾರಂಟಿ ಬೋನಸ್ ಮತ್ತು ಡೆತ್ ಬೆನಿಫಿಟ್ ಎಂಬ ಪ್ರಮುಖ ಮೂರು ಪ್ರಯೋಜನಗಳನ್ನು ನೀಡುತ್ತದೆ.
ಪಾಲಿಸಿಯ 15 ವರ್ಷಗಳ ಅವಧಿಯನ್ನು ಹೊಂದಿದ್ದು, ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆರಂಭಿಕ ಠೇವಣಿಯ ಹತ್ತು ಪಟ್ಟು ಮೊತ್ತವನ್ನು ಗಳಿಸಬಹುದು. ಹೂಡಿಕೆದಾರರು 15 ವರ್ಷಗಳ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 13 ಮತ್ತು 14ನೇ ವರ್ಷದಲ್ಲಿ ಶೇಕಡ 24ರಷ್ಟು ರಿಟರ್ನ್ ಪಡೆಯಬಹುದು. ಅದೇ ರೀತಿ 20 ವರ್ಷಗಳ ಪಾಲಿಸಿ ಅವಧಿಯಲ್ಲಿ18 ಮತ್ತು 19ನೇ ವರ್ಷದಲ್ಲಿ ಹೂಡಿಕೆ ಮಾಡಿದರೆ ಶೇ. 25ರಷ್ಟು ರಿಟರ್ನ್ ಪಡೆಯಬಹುದು. ಜೊತೆಗೆ 25 ವರ್ಷಗಳ ಅವಧಿಯ ಪಾಲಿಸಿಯಲ್ಲಿ 23 ಮತ್ತು 24 ನೇ ವರ್ಷದಲ್ಲಿ ಶೇ.25ರಷ್ಟು ರಿಟರ್ನ್ ಪಡೆಯಬಹುದು.
ಬೋನಸ್ ಪಡೆಯುವ ಆಯ್ಕೆ
ಅಲ್ಲದೆ ಈ ಯೋಜನೆಯಲ್ಲಿ ಮೊದಲ 5 ವರ್ಷದಲ್ಲಿ ಪ್ರತಿ ಒಂದು ಸಾವಿರ ರೂಪಾಯಿಗಳಿಗೆ 50 ರೂಪಾಯಿ ಬೋನಸ್ ಪಡೆಯಬಹುದು. ಇದು 6 ರಿಂದ 10 ವರ್ಷಗಳಲ್ಲಿ 55 ರೂಪಾಯಿಗೆ ಏರಿಕೆಯಾಗಿ ಮೆಚ್ಯೂರಿಟಿ ವೇಳೆಗೆ ಸಾವಿರ ರೂಪಾಯಿಗೆ 60 ರೂ. ತಲುಪುತ್ತದೆ. "ಎಲ್ಐಸಿ ಬಿಮಾ ರತ್ನ ಯೋಜನೆ"ಯಲ್ಲಿ ಕನಿಷ್ಟ 90 ದಿನದ ಮಗುವಿನಿಂದ ಹಿಡಿದು ಗರಿಷ್ಟ 55 ವರ್ಷ ವಯಸ್ಸಿನವರು ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ.
ಪ್ರೀಮಿಯಂ ಪಾವತಿ ಆಯ್ಕೆ
ಹೂಡಿಕೆದಾರರು ಯೋಜನೆಯಲ್ಲಿ ಕನಿಷ್ಟ 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಹೂಡಿಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾವತಿಯನ್ನು ಮಾಡಬಹುದು. "ಎಲ್ಐಸಿ ಬಿಮಾ ರತ್ನ ಯೋಜನೆ"ಯೂ ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಒದಗಿಸುತ್ತದೆ. ಜತೆಗೆ ದೀರ್ಘಾವಧಿಯ ಬೆನಿಫಿಟ್ ಮತ್ತು ಖಾತ್ರಿ ರಿಟರ್ನ್ಸ್ ನೀಡುತ್ತದೆ. ಹೀಗಾಗಿ ಅವರಿಗೆ ಈ ಹೂಡಿಕೆಯೂ ಜೀವ ವಿಮಾ ಕವರೇಜ್‌ನೊಂದಿಗೆ ತಮ್ಮ ಆರ್ಥಿಕ ಗುರಿಯನ್ನು ಸಾಧಿಸಲು ನೆರವಾಗುತ್ತದೆ.
50 ಲಕ್ಷ ರೂಪಾಯಿ ಪಡೆಯುವುದು ಹೇಗೆ?
ಮೋಹನ್ 30 ವರ್ಷದ ಉದ್ಯೋಗಿಯಾಗಿದ್ದು, ಅವರು ಖಾತ್ರಿಯಪಡಿಸಲಾದ ರಿಟನ್ಸ್ ಹಾಗೂ ಬೆನಿಫಿಟ್ ಪಡೆಯಲು ಬಯಸುತ್ತಾರೆ. ಅವರು ವಿವಿಧ ರೀತಿಯ ಅಧ್ಯಯನಗಳನ್ನು ಮಾಡುವ ಮೂಲಕ ಮನಿ ಬ್ಯಾಕ್ ಪಾಲಿಸಿ, ಗ್ಯಾರಂಟೀಡ್ ಬೋನಸ್ ಹಾಗೂ ಡೆತ್ ಬೆನಿಫಿಟ್ ಪ್ರಯೋಜನ ನೀಡುವ "ಎಲ್ಐಸಿ ಬಿಮಾ ರತ್ನಯೋಜನೆ"ಯಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ. ಮೋಹನ್ 15 ವರ್ಷಗಳ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿ ಕನಿಷ್ಠ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಅವರು ತಮ್ಮ ಅನುಕೂಲದಂತೆ ಮಾಸಿಕ ಪಾವತಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಯೋಜನೆ ಪ್ರಕಾರ ಮೋಹನ್ ಅವರು ಪಾಲಿಸಿಯ 13 ಮತ್ತು 14ನೇ ವರ್ಷದಲ್ಲಿ ತಮ್ಮ ಹೂಡಿಕೆಯ ಶೇ.25ರಷ್ಟು ರಿಟರ್ನ್ಸ್ ಪಡೆಯುತ್ತಾರೆ. ಹೆಚ್ಚುವರಿಯಾಗಿ ಮೊದಲ 5 ವರ್ಷಗಳಲ್ಲಿ ಪ್ರತಿ ಒಂದು ಸಾವಿರ ರೂಪಾಯಿಗೆ 50 ರೂಪಾಯಿ ಬೋನಸ್ ಪಡೆಯುತ್ತಾರೆ. ಅದು 6-10 ವರ್ಷಗಳ ಮಧ್ಯದ ಅವಧಿಯಲ್ಲಿ 55ರೂ. ಹಾಗೂ ಅಂತಿಮವಾಗಿ ಮೆಚ್ಯೂರಿಟಿ ವೇಳೆಗೆ ಪ್ರತಿ ಸಾವಿರಕ್ಕೆ 60ರೂ. ಆಗುತ್ತದೆ. ಮೆಚ್ಯೂರಿಟಿ ವೇಳೆಗೆ ಆರಂಭಿಕ ಠೇವಣಿಯ 10ಪಟ್ಟು ಅಂದರೆ 50 ಲಕ್ಷ ರೂ. ನಿರೀಕ್ಷಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications