ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ನೋಡುತ್ತೇವೆ. ಹಾಗೆಯೇ ಯಾವ ಹೂಡಿಕೆಯಿಂದ ಅಧಿಕ ರಿಟರ್ನ್ ಪಡೆಯಲು ಸಾಧ್ಯ ಎಂದು ಕೂಡಾ ನೋಡುತ್ತೇವೆ. ಆ ಸಂದರ್ಭದಲ್ಲಿ ನಮ್ಮ ಮುಂದಿರುವ ಉತ್ತಮ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಆಗಿದೆ.
ಎಲ್ಐಸಿ ಹಲವಾರು ಯೋಜನೆಗಳನ್ನು ಹೊಂದಿದೆ. ಜಿಂದಗಿ ಕೆ ಸಾಥ್ ಬಿ, ಜಿಂದಗಿ ಕೆ ಬಾದ್ ಬಿ ಎಂಬ ಘೋಷಣೆಯನ್ನು ಎಲ್‌ಐಸಿ ಹೊಂದಿದೆ. ಎಲ್‌ಐಸಿ ಧನ ವರ್ಷ ಯೋಜನೆಯು ಎಲ್‌ಐಸಿ ಇತರೆ ಯೋಜನೆಗಳಂತೆ ಒಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯಬಹುದು, ಜೊತೆಗೆ ವಿಮಾ ಸುರಕ್ಷತೆಯನ್ನು ಕೂಡಾ ಪಡೆಯಬಹುದು.
ಈ ಪಾಲಿಸಿಯು ಯಾರು ಉತ್ತಮ ರಿಟರ್ನ್ ಅನ್ನು ಪಡೆಯಲು ಬಯಸುತ್ತಾರೆ, ಜೊತೆಗೆ ತಮ್ಮ ಕುಟುಂಬದ ಸುರಕ್ಷತೆಯನ್ನು ಬಯಸುತ್ತಾರೆ ಅವರಿಗೆ ಉತ್ತಮವಾಗಿದೆ. ಎಲ್‌ಐಸಿ ಧನ ವರ್ಷ ಯೋಜನೆಯಡಿಯಲ್ಲಿ ನೀವು ಹೂಡಿಕೆ ಮೇಲೆ ನೀವು 10 ಪಟ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಯಾರು ಒಂದೇ ಬಾರಿಗೆ ಅಧಿಕ ಹೂಡಿಕೆಯನ್ನು ಮಾಡುತ್ತಾರೆ, ಅವರಿಗೆ ಈ ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ....
ಎಲ್‌ಐಸಿ ಧನ ವರ್ಷ ಯೋಜನೆಯ ಮಾಹಿತಿ
ತಮ್ಮ ಹಣವು ತಮಗೆ ಸಹಾಯಕವಾಗಬೇಕು ಎಂದು ಬಯಸುವವರು ಎಲ್‌ಐಸಿ ಧನ ವರ್ಷ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ ಈ ಹೂಡಿಕೆಯು ಯಾವುದೇ ಅಪಾಯವಿಲ್ಲದ ಹೂಡಿಕೆಯಾಗಿದೆ. ಎಲ್‌ಐಸಿ ಧನ ವರ್ಷವು ತನ್ನ ಹೂಡಿಕೆದಾರರಿಗೆ ಎರಡು ಪಾಲಿಸಿ ಟರ್ಮ್‌ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಪಾಲಿಸಿದಾರರು ಸುರಕ್ಷತೆಯ ಜೊತೆಗೆ ಹೂಡಿಕೆಯಿಂದ ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆದಾರರು ಒಂದು ಬಾರಿ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ವ್ಯಕ್ತಿಯು ಸಾವನ್ನಪ್ಪಿದರೆ, ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ. ಮೆಚ್ಯೂರಿಟಿ ವೇಳೆ ಯೋಜನೆಯಿಂದ ಅಧಿಕ ಮೊತ್ತ ಪಡೆಯಲು ಸಾಧ್ಯವಾಗುತ್ತದೆ. ನೀವು ವಯಸ್ಕರಿರುವಾಗಲೇ ಹೂಡಿಕೆಯನ್ನು ಮಾಡಿದರೆ ನಿಮಗೆ ಅಧಿಕ ರಿಟರ್ನ್ ಲಭ್ಯವಾಗಲಿದೆ.
ಯೋಜನೆಯಲ್ಲಿ ಎರಡು ಆಯ್ಕೆ
ಎಲ್‌ಐಸಿ ಧನ ವರ್ಷ ನಾನ್-ಪಾರ್ಟಿಸಿಪೇಟಿಂಗ್, ಪರ್ಸನಲ್ ಮತ್ತು ಸಿಂಗಲ್ ಪ್ರೀಮಿಯಂ ಪ್ಲ್ಯಾನ್ ಆಗಿದೆ. ನೀವು ಈ ಪ್ಲ್ಯಾನ್ ಅನ್ನು ಆನ್‌ಲೈನ್ ಮೂಲಕ ಖರೀದಿಸಲು ಸಾಧ್ಯವಿಲ್ಲ. ನೀವು ನಿಮ್ಮ ಏಜೆಂಟ್‌ಗೆ ಕರೆ ಮಾಡಿ ಅಥವಾ ಎಲ್‌ಐಸಿ ಕಚೇರಿಗೆ ಭೇಟಿ ನೀಡಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್‌ಸ್ಟಾಲ್‌ಮೆಂಟ್‌ನಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಕೂಡಾ ಈ ಯೋಜನೆ ನೀಡುತ್ತದೆ. ಎಲ್‌ಐಸಿ ಧನ ವರ್ಷ ಯೋಜನೆ ಎರಡು ಆಯ್ಕೆಯನ್ನು ಹೊಂದಿದೆ. ನೀವು ಮೊದಲ ಆಯ್ಕೆಯನ್ನು ಮಾಡಿದರೆ, ನಿಮಗೆ 1.25 ಪಟ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ 10 ಲಕ್ಷ ರೂಪಾಯಿ ಸಿಂಘಲ್ ಪ್ರೀಮಿಯಂ ಮೂಲಕ ಪಾವತಿಸಿದರೆ, ವ್ಯಕ್ತಿ ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ , 12.5 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಬೇರೆ ಆಯ್ಕೆ ಮಾಡಿದರೆ, ಡೆತ್ ಬೆನಿಫಿಟ್ 10 ಪಟ್ಟು ಅಧಿಕ ಲಭ್ಯವಾಗುತ್ತದೆ.
ಎಷ್ಟು ರಿಟರ್ನ್ ಲಭ್ಯವಾಗಲಿದೆ ನೋಡಿ
35 ವರ್ಷ ವಯಸ್ಸಿನ ವ್ಯಕ್ತಿ 10 ಲಕ್ಷ ರೂಪಾಯಿಯ ಪಾಲಿಸಿಯನ್ನು 15 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಬಹುದು. ಗ್ಯಾರಂಟಿ ರಿಟರ್ನ್ ಪ್ರತಿ 1000 ರೂಪಾಯಿಗೆ 40 ರೂಪಾಯಿ ಆಗಲಿದೆ. 10ನೇ ಪಾಲಿಸಿ ವರ್ಷದಲ್ಲಿ ಸಾವನ್ನಪ್ಪಿದರೆ, 91,49,5000 ರೂಪಾಯಿ ಲಭ್ಯವಾಗುತ್ತದೆ. 15ನೇ ಪಾಲಿಸಿ ಅವಧಿಯಲ್ಲಿ ಸಾವನ್ನಪ್ಪಿದರೆ, 93,49,500 ರೂಪಾಯಿ ರಿಟರ್ನ್ ಲಭ್ಯವಾಗಲಿದೆ. ಸಂಪೂರ್ಣ ಮೆಚ್ಯೂರಿಟಿ ಅವಧಿವರೆಗೂ ವ್ಯಕ್ತಿ ಬದುಕುಳಿದಿದ್ದರೆ, ಒಟ್ಟಾಗಿ 16 ಲಕ್ಷ ರೂಪಾಯಿ ಲಭ್ಯವಾಗಲಿದೆ.


Click it and Unblock the Notifications