ಕುಟುಂಬದ ಭವಿಷ್ಯದ ರಕ್ಷಣೆಗಾಗಿ ವಿಮೆ ಪಾಲಿಸಿಯನ್ನು ಖರೀದಿಸುವುದು ಜಾಣ ನಡೆಯಾಗಿದೆ. ಹೀಗಾಗಿ ಲಭ್ಯವಿರುವ ವಿವಿಧ ಎಲ್‌ಐಸಿ ಪಾಲಿಸಿಗಳ ಪೈಕಿ ಸೂಕ್ತವಾಗಿರುವ ವಿಮೆಯ ಆಯ್ಕೆ ಮಾಡಿಕೊಂಡರೆ ಯಾವುದೇ ಚಿಂತೆ ಹಾಗೂ ರಿಸ್ಕ್ ಇಲ್ಲದೆ ಹೂಡಿಕೆ ಮಾಡಬಹುದಾಗಿದೆ. ಇದಕ್ಕಾಗಿ ಎಲ್‌ಐಸಿ ಪಾಲಿಸಿ ಧನ ವರ್ಷ ಪ್ಲಾನ್ ನಂ. 866 ಉತ್ತಮ ವಿಮೆಯಾಗಿದೆ. ಕೇವಲ 10 ಲಕ್ಷ ರೂಪಾಯಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ರಿಟರ್ನ್ ಪಡೆಯಬಹುದು. ಈ ಪಾಲಿಸಿಯ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ, ಮುಂದೆ ಓದಿ...
ಧನ ವರ್ಷ ಪಾಲಿಸಿಯ ಡೆತ್ ಬೆನಿಫಿಟ್ಸ್
ವಿಮೆದಾರರು/ ಪಾಲಿಸಿದಾರರು, ಪಾಲಿಸಿ ಅವಧಿಯಲ್ಲಿ ಮೃತಪಟ್ಟರೆ ಅಂದರೆ ಪಾಲಿಸಿಯಲ್ಲಿ (ರಿಸ್ಕ್ ದಿನಾಂಕ) ಪ್ರಾರಂಭವಾದ ಮತ್ತು ಅವಧಿ (ಅವಧಿ ಪೂರ್ಣವಾಗುವ ಮುನ್ನ ) ಮುಕ್ತಾಯದ ದಿನಾಂಕದ ನಡುವಿನ ಅವಧಿಯಲ್ಲಿ ಆಕಸ್ಮಾತ್ ಸಾವು ಸಂಭವಿಸಿದರೆ, ಕುಟುಂಬದ ರಕ್ಷಣೆಗಾಗಿ "ಸಾವಿನ ಮೇಲಿನ ವಿಮಾ ಮೊತ್ತ (ಜೀವ ವಿಮೆ) " ಯೋಜನೆ ಮರುಪಾವತಿಯ ಖಾತರಿಯನ್ನು ಯೋಜನೆಯಲ್ಲಿ ನೀಡಲಾಗುತ್ತದೆ.
ಪಾಲಿಸಿದಾರರು "ಡೆತ್ ಬೆನಿಫಿಟ್ " ಈ ಪ್ರಕಾರ ಆಯ್ಕೆ ಮಾಡಬಹುದು. ಅವುಗಳು ಹೀಗಿವೆ:
ಆಯ್ಕೆ 1: ಪಾಲಿಸಿಯಲ್ಲಿ ಆಯ್ಕೆ ಮಾಡಿದ ಮೂಲ ಮೊತ್ತದ ಟಬ್ಯುಲರ್ ಪ್ರೀಮಿಯಂನ 1.25 ಪಟ್ಟು
ಆಯ್ಕೆ 2: ವಿಮಾ ಮೊತ್ತದ ಟಬ್ಯುಲರ್ ಪ್ರೀಮಿಯಂನ 10 ಪಟ್ಟು
ಲೆಕ್ಕಾಚಾರ ಪರಿಶೀಲನೆ ಮಾಡಿ:
ಒಂದು ವೇಳೆ ಗ್ರಾಹಕ ಮೊದಲ ಆಯ್ಕೆಯನ್ನು ಆರಿಸಿಕೊಂಡರೆ ಗ್ರಾಹಕ ಠೇವಣಿ ಮಾಡಿದ ಮೊತ್ತದ 1.25 ಪಟ್ಟು ಹೆಚ್ಚು ವಿಮಾ ಮೊತ್ತ ಪಡೆಯುತ್ತಾನೆ.
10 ಲಕ್ಷದ ಏಕ ಪ್ರೀಮಿಯಂ ಪಾವತಿಸಿದ ವ್ಯಕ್ತಿಯೂ ದುರಾದೃಷ್ಟವಶಾತ್ ಸಾವನ್ನಪ್ಪಿದರೆ, ಇಂತಹ ಸಂದರ್ಭದಲ್ಲಿ ಪಾಲಿಸಿಯ ನಾಮಿನಿದಾರರು ನಿಗದಿಪಡಿಸಲಾದ ಮೊತ್ತದ ಜೊತೆ ಹೆಚ್ಚಿನ ಬೋನಸ್ ಆಗಿ 12.5 ಲಕ್ಷವನ್ನು ಪರಿಹಾರ ಮೊತ್ತವನ್ನು ಪಡೆಯುತ್ತಾರೆ .
ಇನ್ನು ಒಂದು ವೇಳೆ ಗ್ರಾಹಕ ಎರಡನೆಯ ಆಯ್ಕೆಯನ್ನು ಅರಿಸಿಕೊಂಡರೆ, ಠೇವಣಿ ಮಾಡಿದ ಪ್ರೀಮಿಯಂನ 10 ಪಟ್ಟು ಹೆಚ್ಚು ರಿಸ್ಕ್ ಕವರೇಜ್ ಮೊತ್ತ ದೊರೆಯುತ್ತದೆ.
ಅಂದರೆ, ಗ್ರಾಹಕರು 10 ಲಕ್ಷದ ಒಂದೇ ಪ್ರೀಮಿಯಂ ಅನ್ನು ಪಾವತಿಸಿದ್ದರೆ, ಅಕಾಲಿದ ಮರಣ ಸಂದರ್ಭದಲ್ಲಿ ಪಾಲಿಸಿಯ ನಾಮಿನಿಯೂ ಖಚಿತವಾದ ಬೋನಸ್ ಜೊತೆಗೆ ಒಂದು ಕೋಟಿ ರೂ. ಮೊತ್ತ ಪಡೆಯುತ್ತಾನೆ.
ಆಯ್ಕೆ 1 ಮತ್ತು ಆಯ್ಕೆ 2 ರಲ್ಲಿ ರಿಟರ್ನ್ ಲೆಕ್ಕಾಚಾರ ಇಲ್ಲಿದೆ:
ಆಯ್ಕೆ ಒಂದರಲ್ಲಿ 30 ವರ್ಷದ ವ್ಯಕ್ತಿಯೂ ಏಕ ಕಂತಿನ ಪ್ರೀಮಿಯಂ 8,86,750 (ಜಿಎಸ್ ಟಿ ಸೇರಿದಂತೆ 9,26,654 ರೂ. ) ಪಾವತಿ ಮಾಡಿದರೆ ಖಚಿತವಾದ ವಿಮಾ ಮೊತ್ತ 11,08,750 ರೂ. ಆಗಿರಲಿದೆ.
15 ವರ್ಷಗಳ ಅವಧಿಯ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿದರೆ ಮೆಚ್ಯೂರಿಟಿ ಸಮಯದಲ್ಲಿ ಅವರಿಗೆ 21,25,000 ರೂ. ಮೊತ್ತ ದೊರೆಯಲಿದೆ. ಒಂದು ವೇಳೆ ಪ್ರಥಮ ವರ್ಷದಲ್ಲೇ , ವ್ಯಕ್ತಿಯೂ ದುರಾದೃಷ್ಟವಶಾತ್ ಅಕಾಲಿಕ ಮರಣವನ್ನಪ್ಪಿದರೆ ನಾಮಿನಿಗೆ 11,83,438 ಮೊತ್ತ ದೊರೆಯಲಿದೆ. ಕೊನೆಯ ಅವಧಿ ಅಂದರೆ 15 ನೇ ವರ್ಷದಲ್ಲಿ ಮೃತಪಟ್ಟರೆ 22,33,438 ರೂ. ಮೊತ್ತ ದೊರಕಲಿದೆ.
ಇನ್ನು ಎರಡನೆಯ ಆಯ್ಕೆಯನ್ನು ಆರಿಸಿಕೊಂಡು, 8,34,642 ಹೂಡಿಕೆ ಮಾಡಿದರೆ, ಮೂಲ ವಿಮಾ ಮೊತ್ತ ಮತ್ತು ಸಾವಿನ ವಿಮಾ ಮೊತ್ತವು ಕ್ರಮವಾಗಿ 10,00,000 ಮತ್ತು 79,87,000 ದೊರಕಲಿದೆ.
ಅರ್ಹತೆ ಮತ್ತು ಇತರ ನಿರ್ಬಂಧಗಳು ಇಂತಿವೆ:
1. 15 ವರ್ಷದ ಪಾಲಿಸಿ ಪಡೆಯಲು ಪಾಲಿಸಿದಾರನ ಕನಿಷ್ಟ ವಯೋಮಿತಿ ಮೂರು ವರ್ಷ (ಪೂರ್ಣಗೊಂಡಿರಬೇಕು). 10 ವರ್ಷದ ಪಾಲಿಸಿ ಅವಧಿಗೆ ಪಾಲಿಸಿದಾರನ ಕನಿಷ್ಟ ವಯೋಮಿತಿ 8 ವರ್ಷ ಪೂರ್ಣಗೊಂಡಿರಬೇಕು.
2. ಆಯ್ಕೆ 1ರಲ್ಲಿ ಪಾಲಿಸಿ ಖರೀದಿಯ ಗರಿಷ್ಠ ವಯೋಮಿತಿ 60 ವರ್ಷವಾಗಿದೆ (ಜನ್ಮದಿನಕ್ಕೆ ಸಮೀಪವಾಗುವಂತೆ) ಮತ್ತು ಆಯ್ಕೆ 2ರಲ್ಲಿ 10 ವರ್ಷದ ಪಾಲಿಸಿಯ ಗರಿಷ್ಠ ವಯೋಮಿತಿ (ಜನ್ಮದಿನದ ನಂತರ ವರ್ಷ ಲೆಕ್ಕಾಚಾರ) 40 ವರ್ಷವಾಗಿದೆ ಮತ್ತು 15 ವರ್ಷದ ಪಾಲಿಸಿ ಖರೀದಿಯ ಗರಿಷ್ಠ ವಯೋಮಿತಿ 35 ವರ್ಷವಾಗಿದೆ.
3. ಮೆಚ್ಯೂರಿಟಿಗೆ ಕನಿಷ್ಟ 18 ವರ್ಷಗಳು ಪೂರ್ಣಗೊಂಡಿರಬೇಕು
4. ಆಯ್ಕೆ 1ರಂತೆ ಗರಿಷ್ಠ ಮೆಚ್ಯೂರಿಟಿ ಅವಧಿ 75 ವರ್ಷ (ಜನ್ಮದಿನದ ಲೆಕ್ಕಾಚಾರದಲ್ಲಿ), ಆಯ್ಕೆ 2ರ ಪ್ರಕಾರ ಗರಿಷ್ಠ 50 ವರ್ಷವಾಗಿದೆ.
5. ಹತ್ತು ಮತ್ತು 15 ವರ್ಷಗಳವರೆಗೆ ಪಾಲಿಸಿಯ ಅವಧಿಯೂ ಲಭ್ಯವಿದೆ.
6. ಪ್ರೀಮಿಯಂ ಪಾವತಿಯೂ ವಿಧಾನವು ಒಂದೇ ಬಾರಿ ಪಾವತಿಸುವ ಪ್ರೀಮಿಯಂ ಆಗಿದೆ.
7. ಬೇಸಿಕ್ ವಿಮಾ ಮೊತ್ತವೂ 1,25,000ರೂ ಆಗಿರುತ್ತದೆ.
8. ಗರಿಷ್ಟ ಬೇಸಿಕ್ ವಿಮಾ ಮೊತ್ತದ ಮೇಲೆ ಯಾವುದೇ ಮಿತಿ ಇರುವುದಿಲ್ಲ.


Click it and Unblock the Notifications