For Quick Alerts
ALLOW NOTIFICATIONS  
For Daily Alerts

LIC Jeevan Akshay Policy : ಮಾಸಿಕ 36,000 ರೂ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

|

ನಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗಬಾರದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ. ಅಧಿಕ ರಿಟರ್ನ್ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ನಿವೃತ್ತಿ ಜೀವನದಲ್ಲಿ ಸಹಾಯವಾಗಲಿದೆ. ಅದರಲ್ಲೂ ಮುಖ್ಯವಾಗಿ ನಮಗೆ ಪಿಂಚಣಿ ಯೋಜನೆ ಇದ್ದರೆ ಒಳಿತು. ಮಾಸಿಕವಾಗಿ ಮೊತ್ತ ಲಭ್ಯವಾಗುವುದರಿಂದಾಗಿ ನಾವು ನಮ್ಮ ಉಳಿತಾಯವನ್ನು ಮಿತವಾಗಿ ಬಳಕೆ ಮಾಡಿದಂತೆ ಆಗುತ್ತದೆ.

 

ಇನ್ನು ನಾವು ಹೂಡಿಕೆಯ ವಿಚಾರಕ್ಕೆ ಬಂದಾಗ ಸುರಕ್ಷತೆಗೆ ಆದ್ಯತೆ ನೀಡುತ್ತೇವೋ ಅದಕ್ಕಿಂತ ಹೆಚ್ಚು ರಿಟರ್ನ್ ಎಷ್ಟಿದೆ ಎಂಬ ಕಡೆ ಗಮನಹರಿಸುತ್ತೇವೆ. ರಿಸ್ಕ್ ಇರುವ ಮಾರುಕಟ್ಟಯಲ್ಲಿ ಹೂಡಿಕೆ ಮಾಡುವ ಅದೆಷ್ಟೋ ಹೂಡಿಕೆದಾರರು ಇದ್ದಾರೆ. ಈ ನಡುವೆ ಎಲ್‌ಐಸಿಯ ಈ ಒಂದು ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ವೃದ್ಧಾಪ್ಯದಲ್ಲಿ ಮಾಸಿಕ 36,000 ರೂ ಪಡೆಯಲು ಸಾಧ್ಯವಾಗುತ್ತದೆ.

ಹೌದು ನೀವು ಜೀವ ವಿಮಾ ನಿಗಮದ ಎಲ್‌ಐಸಿ ಜೀವನ ಅಕ್ಷಯ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ. ನೀವು ಮಾಸಿಕವಾಗಿ ಸರಿಸುಮಾರು 36 ಸಾವಿರ ರೂಪಾಯಿ ಪಿಂಚಣಿ ರೂಪದಲ್ಲಿ ಪಡೆಯಬಹುದು. ಹಾಗಾದರೆ ಈ ಇದರಲ್ಲಿ ನಾವೆಷ್ಟು ಹೂಡಿಕೆ ಮಾಡಬೇಕು, ಈ ಪಾಲಿಸಿಯ ಪ್ರಮುಖ ಅಂಶಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಎಲ್‌ಐಸಿಯ ಜೀವನ ಅಕ್ಷಯ ಪಾಲಿಸಿ

ಎಲ್‌ಐಸಿಯ ಜೀವನ ಅಕ್ಷಯ ಪಾಲಿಸಿ

ಎಲ್‌ಐಸಿಯು ತನ್ನ ಎಲ್‌ಐಸಿ ಜೀವನ ಅಕ್ಷಯ ಪಾಲಿಸಿ ಯೋಜನೆಯಲ್ಲಿ ಮತ್ತೆ ಆರಂಭ ಮಾಡಿದೆ. ಈ ಯೋಜನೆಯಲ್ಲಿ ನೀವು ಒಂದು ಬಾರಿ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ. ನೀವು ಒಂದು ಬಾರಿ ಮಾಡಿದ ಹೂಡಿಕೆಯಿಂದ ಜೀವನ ಪೂರ್ತಿ ಹಲವಾರು ಪ್ರಯೋಜನವನ್ನು ಪಡೆಯಬಹುದು. ಜೀವನ ಅಕ್ಷಯ ಪಾಲಿಸಿ ವೈಯಕ್ತಿಕ, ಸಿಂಗಲ್ ಪ್ರೀಮಿಯಂ, ನಾನ್‌ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ವಾರ್ಷಿಕ ಯೋಜನೆಯಾಗಿದೆ.

 ಮಾಸಿಕ 36 ಸಾವಿರ ಪಡೆಯುವುದು ಹೇಗೆ?

ಮಾಸಿಕ 36 ಸಾವಿರ ಪಡೆಯುವುದು ಹೇಗೆ?

ಈ ಯೋಜನೆಯಲ್ಲಿ ನಿಮಗೆ ಮಾಸಿಕವಾಗಿ ಪಿಂಚಣಿ ಲಭ್ಯವಾಗಲಿದೆ. ನೀವು ಮಾಸಿಕವಾಗಿ ಪಿಂಚಣಿ ರೂಪದಲ್ಲಿ 36 ಸಾವಿರ ರೂಪಾಯಿ ಪಡೆಯಬೇಕಾದರೆ, ನೀವು ವಾರ್ಷಿಕ ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ. ನೀವು 45 ವರ್ಷದವರಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಅಧಿಕ ಮೊತ್ತವನ್ನು ಪ್ರೀಮಿಯಂ ರೂಪದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನೀವು 70 ಲಕ್ಷದ ಹೂಡಿಕೆ ಆಯ್ಕೆ ಮಾಡಿಕೊಂಡು 71,26,000 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ನಿಮಗೆ ನಿವೃತ್ತಿಯಾದ ಬಳಿಕ ಮಾಸಿಕವಾಗಿ 36429 ಪಿಂಚಣಿ ಲಭ್ಯವಾಗಲಿದೆ. ವ್ಯಕ್ತಿಯು ಮೃತರಾದರೆ ಪಿಂಚಣಿ ಬರುವುದು ಸ್ಥಗಿತವಾಗಲಿದೆ.

 ಯೋಜನೆಯಲ್ಲಿ ವಯಸ್ಸಿನ ಮಿತಿ ಎಷ್ಟಿದೆ?
 

ಯೋಜನೆಯಲ್ಲಿ ವಯಸ್ಸಿನ ಮಿತಿ ಎಷ್ಟಿದೆ?

ಎಲ್‌ಐಸಿಯ ಜೀವನ ಅಕ್ಷಯ ಪಾಲಿಸಿ ಯೋಜನೆಯಲ್ಲಿ 35 ವರ್ಷದಿಂದ 85 ವರ್ಷದವರಿಗೆ ಮಾತ್ರ ಲಭ್ಯವಾಗಲಿದೆ. ಇನ್ನು ವಿಶೇಷ ಚೇತನರು ಕೂಡಾ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಪಿಂಚಣಿಯನ್ನು ಪಡೆಯಲು ಸುಮಾರು 10 ಆಯ್ಕೆಗಳನ್ನು ಹೊಂದಿದ್ದೀರಿ.

 ಮಾಸಿಕ ಪಿಂಚಣಿ ಬಗ್ಗೆ ವಿವರ

ಮಾಸಿಕ ಪಿಂಚಣಿ ಬಗ್ಗೆ ವಿವರ

ನೀವು 75 ವರ್ಷದವರು ಎಂದುಕೊಳ್ಳಿ. ಹಾಗಾದಾಗ ನೀವು 610800 ರೂಪಾಯಿ ಏಕಕಾಲದ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಆರು ಲಕ್ಷ ರೂಪಾಯಿ ನಿಮ್ಮ ಹೂಡಿಕೆ ಎಂದು ಪರಿಗಣನೆಯಾಗುತ್ತದೆ. ಇದರಲ್ಲಿ ವಾರ್ಷಿಕವಾಗಿ ನೀವು 76,650 ರೂಪಾಯಿ ಪಿಂಚಣಿ ಪಡೆಯಬಹುದು. ಅರ್ಧವಾರ್ಷಿಕವಾಗಿ 37-35 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ತ್ರೈಮಾಸಿಕವಾಗಿ 18,225 ರೂಪಾಯಿ ಪಿಂಚಣಿ ಪಡೆಯಬಹುದು. ಪ್ರತಿ ತಿಂಗಳು 6,000 ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ವಾರ್ಷಿಕವಾಗಿ 12000 ರೂಪಾಯಿ ಪಿಂಚಣಿ ಪಡೆಯುವ ಆಯ್ಕೆ ಕೂಡಾ ಇದೆ.

 ಕಡಿಮೆ ಹೂಡಿಕೆಯ ಆಯ್ಕೆಯೂ ಇದೆ

ಕಡಿಮೆ ಹೂಡಿಕೆಯ ಆಯ್ಕೆಯೂ ಇದೆ

ನೀವು ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಕೂಡಾ ಹೂಡಿಕೆ ಮಾಡಬಹುದು. ಸಣ್ಣ ಮೊತ್ತ ಹೂಡಿಕೆಯ ಆಯ್ಕೆ ಕೂಡಾ ಇದೆ. ಅದುವೇ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಆಯ್ಕೆ. ಅಧಿಕ ಹಣವಿದ್ದರೆ ಬೇರೆ ಆಯ್ಕೆಯನ್ನು ಕೂಡಾ ಮಾಡಬಹುದು. ನೀವು ಬರೀ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ ಒಂದು ಸಾವಿರ ರೂಪಾಯಿ ಪಿಂಚಣಿಯಂತೆ ವಾರ್ಷಿಕ 12 ಸಾವಿರ ಪಡೆಯಬಹುದು. ಇನ್ನು ಇಲ್ಲಿ ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.

English summary

LIC Jeevan Akshay Policy: Know Plan Features & Benefits, Premium Details in Kannada

LIC Jeevan Akshay Policy: You can invest in this Life Insurance Corporation of India plan if you want a substantial income after retirement. Know Plan Features & Benefits, Premium Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X