For Quick Alerts
ALLOW NOTIFICATIONS  
For Daily Alerts

LIC Jeevan Anand: 45 ರೂ ಹೂಡಿಕೆ ಮಾಡಿ 25 ಲಕ್ಷ ರೂ ಪಡೆಯಿರಿ!

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂದು ನೋಡುತ್ತೇವೆ. ನಾವು ಮಾಡಿದ ಹೂಡಿಕೆಯಿಂದ ನಮಗೆ ಎಷ್ಟು ಅಧಿಕ ರಿಟರ್ನ್ ಪಡೆಯಲು ಸಾಧ್ಯ, ಎಲ್ಲಿ ನಾವು ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಪಡೆಯಬಹುದು, ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ ಎಂದು ನಾವು ನೋಡುತ್ತೇವೆ.

ಹೀಗೆ ಅಧಿಕ ಹೂಡಿಕೆಯ ವಿಚಾರಕ್ಕ ಬಂದಾಗ ನಮ್ಮ ಮುಂದೆ ಬರುವ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಆಗಿದೆ. ಎಲ್‌ಐಸಿ ಭಾರತದ ಅತೀ ಹಳೆಯ ಮತ್ತು ಅತೀ ದೊಡ್ಡ ವಿಮಾ ಸಂಸ್ಥೆಯಾಗಿದೆ. ಇಲ್ಲಿ ನಾವು ಮಾಡಿದ ಹೂಡಿಕೆಯಿಂದ ಅಧಿಕ ರಿಟರ್ನ್ ಅನ್ನು ಕೂಡಾ ಪಡೆಯಬಹುದು ಮತ್ತು ನಮ್ಮ ಹೂಡಿಕೆ ಸುರಕ್ಷಿತ ಕೂಡಾ ಹೌದು.

LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿLIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ

ಎಲ್‌ಐಸಿ ಹಲವಾರು ಯೋಜನೆಗಳನ್ನು ಹೊಂದಿದೆ. ಜೀವನ ಆನಂದ್ ಪಾಲಿಸಿಯು ಎಲ್‌ಐಸಿಯ ಪಾಲಿಸಿಯಾಗಿದೆ. ಈ ಪಾಲಿಸಿಯು ದುಪ್ಪಟ್ಟು ಲಾಭವನ್ನು ನೀಡುತ್ತದೆ. ಈ ಯೋಜನೆಯಲ್ಲಿ ನಿರ್ದಿಷ್ಟ ಸಮಯದವರೆಗೆ ಹೂಡಿಕೆ ಮಾಡಿದರೆ ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಪ್ರತಿ ದಿನ 45 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ವೇಳೆ 25 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.

 45 ರೂ ಹೂಡಿಕೆ ಮಾಡಿ, 25 ಲಕ್ಷ ರೂ ಪಡೆಯಿರಿ!

45 ರೂ ಹೂಡಿಕೆ ಮಾಡಿ, 25 ಲಕ್ಷ ರೂ ಪಡೆಯಿರಿ!

ಜೀವನ ಆನಂದ ಪಾಲಿಸಿಯಲ್ಲಿ ನೀವು 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, 25 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ರೂಪಾಯಿಯನ್ನು ಪಡೆಯಬೇಕಾದರೆ ನೀವು 35 ವರ್ಷದವರೆ ಹೂಡಿಕೆ ಮಾಡಬೇಕಾಗುತ್ತದೆ. ನೀವು ಪ್ರತಿ ದಿನ 45 ರೂಪಾಯಿಯಂತೆ ಮಾಸಿಕವಾಗಿ 1,358 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ, ವಾರ್ಷಿಕವಾಗಿ 16,300 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ.

 ಈ ಯೋಜನೆಹಗೆ ಬೇಕಾದ ದಾಖಲೆಗೆಳು?

ಈ ಯೋಜನೆಹಗೆ ಬೇಕಾದ ದಾಖಲೆಗೆಳು?

ಜೀವನ ಆನಂದ ಪಾಲಿಸಿಯ ಲಾಭವನ್ನು ನೀವು ಪಡೆಯಬೇಕಾದರೆ ನಿಮ್ಮ ಬಳಿ ಕೆಲವು ದಾಖಲೆಗಳು ಇರುವುದು ಮುಖ್ಯವಾಗುತ್ತದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ, ಮೊಬೈಲ್ ನಂಬರ್, ಪ್ಯಾನ್ ಕಾರ್ಡ್ ಇರಬೇಕಾಗುತ್ತದೆ.

 ಡೆತ್‌ ಬೆನಿಫಿಟ್, ಇತರೆ ಲಾಭ

ಡೆತ್‌ ಬೆನಿಫಿಟ್, ಇತರೆ ಲಾಭ

ಜೀವನ ಆನಂದ್ ಪಾಲಿಸಿಯು ಡೆತ್ ಬೆನಿಫಿಟ್ ಅನ್ನು ನೀಡುತ್ತದೆ ಮತ್ತು ರೈಡರ್ ಬೆನಿಫಿಟ್ ಕೂಡಾ ಇದೆ. ಮೆಚ್ಯೂರಿಟಿಗೂ ಮುನ್ನ ಪಾಲಿಸಿದಾರರು ಸಾವನ್ನಪ್ಪಿದರೆ, ಪಾಲಿಸಿಯ ನಾಮಿನಿದಾರರು ಯೋಜನೆಯ ಲಾಭವನ್ನು ಪಡೆಯುತ್ತಾರೆ. ಡೆತ್ ಬೆನಿಫಿಟ್ ಅನ್ನು ಶೇಕಡ 125ರವರೆಗೆ ಪಡೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ ಮೊತ್ತ 1 ಲಕ್ಷ ರೂಪಾಯಿ ಆಗಿದೆ. ಯಾವುದೇ ಗರಿಷ್ಠ ಮಿತಿ ಇಲ್ಲ. ಪಾಲಿಸಿದಾರರು ಅಂಗವೂನತೆಗೆ ಒಳಗಾದರೂ ಕೂಡಾ ರೈಡರ್ ಬೆನಿಫಿಟ್ ಲಭ್ಯವಾಗಲಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಇಲ್ಲ ಎಂಬುವುದು ತಿಳಿದಿರಲಿ.

English summary

LIC Jeevan Anand: Invest Rs 45 Per day, get up to Rs 25 lakh at maturity, Here's details

LIC scheme: LIC Jeevan Anand: Invest Rs 45 Per day, get up to Rs 25 lakh at maturity, Here's details. read on.
Story first published: Thursday, February 2, 2023, 17:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X