ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಜನವರಿ 2023ರಂದು ಎಲ್‌ಐಸಿ ಜೀವನ್ ಅಜಾದ್ ಪಾಲಿಸಿಯನ್ನು ಆರಂಭ ಮಾಡಿದೆ. ಈ ಪಾಲಿಸಿಯನ್ನು ಆರಂಭ ಮಾಡಿದ 10-15 ದಿನಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಚಂದಾದಾರಿಕೆ ನಡೆದಿದೆ. ಹೊಸ ಪಾಲಿಸಿಯನ್ನು 10-15 ದಿನಗಳಲ್ಲಿ 50,000 ಮಂದಿ ಖರೀದಿ ಮಾಡಿದ್ದಾರೆ. ಹಾಗಾದರೆ ಏನಿದು ಪಾಲಿಸಿ ಎಂಬ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಬಹುದು.
ಏನಿದು ಎಲ್‌ಐಸಿ ಜೀವನ್ ಅಜಾದ್ ಪಾಲಿಸಿ?: ಎಲ್‌ಐಸಿ ಜೀವನ್ ಅಜಾದ್ ಯೋಜನೆಯು ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ, ಹಣ ಉಳಿತಾಯ ಮಾಡಲಾಗುವ ಜೀವ ವಿಮೆ ಯೋಜನೆಯಾಗಿದೆ. ಹಾಗೆಯೇ ಕನಿಷ್ಠ ಪ್ರೀಮಿಯಂ ಅನ್ನು ಹೊಂದಿದೆ. ಇದು ನಿಗದಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ.

20 ವರ್ಷದ ಪಾಲಿಸಿಗೆ 12 ವರ್ಷ ಪ್ರೀಮಿಯಂ ಪಾವತಿಸಿ!
ಪ್ರೀಮಿಯಂ ಪಾವತಿ ಅವಧಿಯು 8 ವರ್ಷಕ್ಕಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್‌ಗಿಂತ ಕಡಿಮೆ ಅವಧಿ ಇದಾಗಿದೆ. ಅಂದರೆ ನೀವು 20 ವರ್ಷಗಳ ಪಾಲಿಸಿಯನ್ನು ಖರೀದಿ ಮಾಡಿದರೆ, ನೀವು 12 ವರ್ಷ ಮಾತ್ರ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ 18 ವರ್ಷದ ಪಾಲಿಸಿಯನ್ನು ಖರೀದಿ ಮಾಡಿದರೆ, ಬರೀ 12 ವರ್ಷದ ಪ್ರೀಮಿಯಂ ಅನ್ನು ಮಾತ್ರ ಪಾವತಿ ಮಾಡಬೇಕಾಗುತ್ತದೆ. ವಿಮಾದಾರರಿಗೆ ಮೆಚ್ಯೂರಿಟಿ ದಿನಾಂಕದಂದು ಖಾತರಿಪಡಿಸಿದ ಮೂಲ ಮೊತ್ತ-ವಿಮೆಯ ಮೊತ್ತವನ್ನು ಒದಗಿಸುತ್ತದೆ.
ಈ ಯೋಜನೆಯು ಗುಣಮಟ್ಟದ ಆರೋಗ್ಯಕರ ಜೀವನವನ್ನು ನಡೆಸುತ್ತಿರುವ ಯಾವುದೇ ವೈದ್ಯಕೀಯ ಪರೀಕ್ಷೆಯಿಲ್ಲದೆ ಕನಿಷ್ಠ 3 ಲಕ್ಷ ರೂಪಾಯಿಗಳಿಂದ ಗರಿಷ್ಠ 5 ಲಕ್ಷ ರೂಪಾಯಿಗಳವರೆಗಿನ ಲಭ್ಯವಾಗುತ್ತದೆ. 10 ವರ್ಷಗಳವರೆಗೆ 12,083 ರೂ ಪಾವತಿಸುವ 30 ವರ್ಷದ ವ್ಯಕ್ತಿಗೆ, ಪಾಲಿಸಿಯ ಮೆಚ್ಯೂರಿಟಿ ವ್ಯಾಲ್ಯೂ 18 ವರ್ಷಗಳ ನಂತರ 2 ಲಕ್ಷ ರೂಪಾಯಿ ಆಗಿರುತ್ತದೆ. ಬಡ್ಡಿದರ ಶೇಕಡ 4-5 ಆಗಿದೆ.
ಎಲ್‌ಐಸಿ ಜೀವನ್ ಅಜಾದ್ ಪ್ಲ್ಯಾನ್
* ಎಲ್‌ಐಸಿ ಜೀವನ್ ಅಜಾದ್ ಯೋಜನೆಯು ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ, ಉಳಿತಾಯ ಮಾಡಲಾಗುವ ಜೀವ ವಿಮೆ ಯೋಜನೆಯಾಗಿದೆ. ಹಾಗೆಯೇ ಕನಿಷ್ಠ ಪ್ರೀಮಿಯಂ ಅನ್ನು ಹೊಂದಿದೆ.
* ಇದು ನಿಗದಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ. ಪ್ರೀಮಿಯಂ ಪಾವತಿ ಅವಧಿಯು 8 ವರ್ಷಕ್ಕಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್‌ಗಿಂತ ಕಡಿಮೆ ಅವಧಿ ಇದಾಗಿದೆ.
* ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಹಣಕಾಸು ಸಹಾಯವನ್ನು ಯೋಜನೆಯು ನೀಡುತ್ತದೆ.
* ಮೆಚ್ಯೂರಿಟಿ ವೇಳೆ ಅಧಿಕ ಮೊತ್ತ ನಿಮಗೆ ಲಭ್ಯವಾಗಲಿದೆ.
* ಸಾವನ್ನಪ್ಪಿದರೆ ಅಥವಾ ಅಪಘಾತದಲ್ಲಿ ಅಂಗವೂನತೆ ಉಂಟಾದರೆ ನಿಮ್ಮ ಕುಟುಂಬಕ್ಕೆ ಅಥವಾ ನಾಮಿನಿಗೆ ಬೆನಿಫಿಟ್ ಲಭ್ಯವಾಗಲಿದೆ.
* 3 ಲಕ್ಷ ರೂಪಾಯಿವರೆಗೆ ವಿಮೆ ಪಾಲಿಸಿ ಇದೆ.
ಅರ್ಹತೆ, ಷರತ್ತುಗಳು
* ಕನಿಷ್ಠ ಮೂಲ ಮೊತ್ತ 200,000 ಲಕ್ಷ ರೂಪಾಯಿ
* ಗರಿಷ್ಠ ಮೂಲ ಮೊತ್ತ 5,00,000 ಲಕ್ಷ ರೂಪಾಯಿ
* ಮೂಲ ಮೊತ್ತ 25,000 ರೂಪಾಯಿಯ ಗುಣಾಕಾರವಾಗಿರಬೇಕು
* ಕನಿಷ್ಠ 90 ದಿನಗಳ ವಯೋಮಿತಿ ಇದೆ. ಆನ್‌ಲೈನ್, ಬ್ರ್ಯಾಂಚ್ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
* ಪಾಲಿಸಿ ಖರೀದಿಗೆ ಗರಿಷ್ಠ ವಯಸ್ಸು 50 ವರ್ಷಗಳು (ಜನ್ಮ ದಿನಕ್ಕೆ ಸಮೀಪವಾಗಿರಬೇಕು)
* ಪಾಲಿಸಿ ಖರೀದಿಗೆ ಕನಿಷ್ಠ ಮೆಚ್ಯೂರಿಟಿ ವಯಸ್ಸು 18 ವರ್ಷಗಳು (ಪೂರ್ಣಗೊಂಡಿರಬೇಕು)
* ಪಾಲಿಸಿ ಗರಿಷ್ಠ ಮೆಚ್ಯೂರಿಟಿ ವಯಸ್ಸು 70 ವರ್ಷಗಳು (ಜನ್ಮ ದಿನಕ್ಕೆ ಸಮೀಪವಾಗಿರಬೇಕು)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications