For Quick Alerts
ALLOW NOTIFICATIONS  
For Daily Alerts

LIC Jeevan Azad Plan 868 : 25,000 ರೂ ಹೂಡಿಕೆ ಮಾಡಿ 5 ಲಕ್ಷ ರೂ ಪಡೆಯಿರಿ

|

ಈ ಹಣದುಬ್ಬರ ಸಂದರ್ಭದಲ್ಲಿ ಜನರು ತಾವು ದುಡಿದ ಆದಾಯವನ್ನು ಹೇಗೆ ಉಳಿತಾಯ ಮಾಡುವುದು ಎಂದು ಯೋಚನೆ ಮಾಡುತ್ತಿರುತ್ತಾರೆ. ಹೀಗಿರುವಾಗ ತಾವು ಹೂಡಿಕೆ ಮಾಡಿದ ಮೊತ್ತಕ್ಕೆ ಅಧಿಕ ರಿಟರ್ನ್ ಲಭ್ಯವಾಗುವುದಾದರೆ ಬೇಡ ಎನ್ನುವವರು ಯಾರು ಹೇಳಿ. ಇಂತಹ ಅಧಿಕ ರಿಟರ್ನ್ ಲಭ್ಯವಾಗುವ ಯೋಜನೆಗಳನ್ನು ಹೆಚ್ಚಾಗಿ ಎಲ್‌ಐಸಿ ಹೊಂದಿರುತ್ತದೆ.

 

ಇನ್ನು ನಾವು ಮಾಡಿದ ಹೂಡಿಕೆಗೆ ಅಧಿಕ ರಿಟರ್ನ್ ಲಭ್ಯವಾಗುತ್ತದೆಯೇ ಎಂದು ನೋಡುವುದರ ಜೊತೆಗೆ ನಾವು ಮಾಡಿದ ಹೂಡಿಕೆ ಎಷ್ಟು ಸುರಕ್ಷಿತ ಎಂದು ಕೂಡಾ ನಾವು ನೋಡುತ್ತೇವೆ. ಹಾಗೆ ನೋಡುವಾಗಲೂ ನಮಗೆ ಎಲ್‌ಐಸಿ ಯೋಜನೆಯೇ ಉತ್ತಮವಾಗಿದೆ. ಎಲ್‌ಐಸಿ ಯೋಜನೆಗಳಲ್ಲಿ ಒಂದು ಉತ್ತಮ ಯೋಜನೆಯಾದ ಎಲ್‌ಐಸಿ ಜೀವನ ಅಜಾದ್ ಯೋಜನೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

LIC New Jeevan Shanti Plan 858: ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?LIC New Jeevan Shanti Plan 858: ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೊಸ ಯೋಜನೆ ಎಲ್‌ಐಸಿ ಜೀವನ್ ಅಜಾದ್ 868 ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯು ಉಳಿತಾಯದೊಂದಿಗೆ, ಜೀವ ವಿಮೆಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು 25 ಸಾವಿರ ರೂಪಾಯಿ ಹೂಡಿಕೆಯನ್ನು ಮಾಡಿ, ಸುಮಾರು 5 ಲಕ್ಷ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ಪಡೆಯಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಎಲ್‌ಐಸಿ ಜೀವನ್ ಅಜಾದ್ ಪ್ಲ್ಯಾನ್

ಎಲ್‌ಐಸಿ ಜೀವನ್ ಅಜಾದ್ ಪ್ಲ್ಯಾನ್

* ಎಲ್‌ಐಸಿ ಜೀವನ್ ಅಜಾದ್ ಯೋಜನೆಯು ನಾನ್‌-ಪಾರ್ಟಿಸಿಪೇಟಿಂಗ್, ನಾನ್‌-ಲಿಂಕ್ಡ್, ವೈಯಕ್ತಿಕ, ಉಳಿತಾಯ ಮಾಡಲಾಗುವ ಜೀವ ವಿಮೆ ಯೋಜನೆಯಾಗಿದೆ. ಹಾಗೆಯೇ ಕನಿಷ್ಠ ಪ್ರೀಮಿಯಂ ಅನ್ನು ಹೊಂದಿದೆ.
* ಇದು ನಿಗದಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ. ಪ್ರೀಮಿಯಂ ಪಾವತಿ ಅವಧಿಯು 8 ವರ್ಷಕ್ಕಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್‌ಗಿಂತ ಕಡಿಮೆ ಅವಧಿ ಇದಾಗಿದೆ.
* ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಹಣಕಾಸು ಸಹಾಯವನ್ನು ಯೋಜನೆಯು ನೀಡುತ್ತದೆ.
* ಮೆಚ್ಯೂರಿಟಿ ವೇಳೆ ಅಧಿಕ ಮೊತ್ತ ನಿಮಗೆ ಲಭ್ಯವಾಗಲಿದೆ.
* ಸಾವನ್ನಪ್ಪಿದರೆ ಅಥವಾ ಅಪಘಾತದಲ್ಲಿ ಅಂಗವೂನತೆ ಉಂಟಾದರೆ ನಿಮ್ಮ ಕುಟುಂಬಕ್ಕೆ ಅಥವಾ ನಾಮಿನಿಗೆ ಬೆನಿಫಿಟ್ ಲಭ್ಯವಾಗಲಿದೆ.
* 3 ಲಕ್ಷ ರೂಪಾಯಿವರೆಗೆ ವಿಮೆ ಪಾಲಿಸಿ ಇದೆ.

 

 

 ಎಲ್‌ಐಸಿ ಜೀವನ್ ಅಜಾದ ಯೋಜನೆ ಹೂಡಿಕೆ

ಎಲ್‌ಐಸಿ ಜೀವನ್ ಅಜಾದ ಯೋಜನೆ ಹೂಡಿಕೆ

ಎಲ್‌ಐಸಿ ಜೀವನ ಅಜಾದ್ ಯೋಜನೆಯ ಅತೀ ಕಡಿಮೆ ಮೊತ್ತ 2 ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ಅಧಿಕ ಮೊತ್ತದ ಹೂಡಿಕೆಯನ್ನು ಕೂಡಾ ಮಾಡಬಹುದು. 15ರಿಂದ 20 ವರ್ಷ ಪಾಲಿಸಿ ಅವಧಿಯಾಗಿದೆ. ಈ ಯೋಜನೆಯಲ್ಲಿ ವಯೋಮಿತಿ ಕೂಡಾ ಇದೆ. 90 ದಿನದ ಮಗುವಿನಿಂದ ಹಿಡಿದು 50 ವರ್ಷಗಳವರೆಗಿನ ವಯಸ್ಸಿನವರು ಹೂಡಿಕೆಯನ್ನು ಮಾಡಬಹುದು. ಪ್ರೀಮಿಯಂ ಅನ್ನು ವಾರ್ಷಿಕವಾಗಿ, ಅರ್ಧವಾರ್ಷಿಕ, ತ್ರೈಮಾಸಿಕವಾಗಿ, ಮಾಸಿಕವಾಗಿ ಹೂಡಿಕೆಯನ್ನು ಮಾಡಬಹುದು. ಪಾಲಿಸಿಯನ್ನು 2 ವರ್ಷದಲ್ಲಿ ಸರೆಂಡರ್ ಮಾಡಬಹುದು. ಅಥವಾ ಎರಡು ಬಾರಿ ಪ್ರೀಮಿಯಂ ಪಾವತಿಸಿ ಸರಂಡರ್ ಮಾಡಬಹುದು. ಹಾಗೆಯೇ ಈ ವಿಮೆ ಅಡಿಯಲ್ಲಿ ಸಾಲವನ್ನು ಕೂಡಾ ಪಡೆಯಬಹುದು.

 25 ಸಾವಿರ ಹೂಡಿಕೆ ಮಾಡಿ 50 ಲಕ್ಷ ಪಡೆಯಿರಿ
 

25 ಸಾವಿರ ಹೂಡಿಕೆ ಮಾಡಿ 50 ಲಕ್ಷ ಪಡೆಯಿರಿ

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವನ್ ಅಜಾದ್ 868 ಯೋಜನೆಯಡಿಯಲ್ಲಿ ನೀವು 25 ಸಾವಿರ ರೂಪಾಯಿ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 50 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಮೊದಲ ವರ್ಷ ನೀವು 25,120 ರೂಪಾಯಿ ಪ್ರೀಮಿಯಂ ಅನ್ನು ಪಾವತಿಸಿದರೆ, ಎರಡನೇ ವರ್ಷದಿಂದ 12 ವರ್ಷಗಳ ಕಾಲ 24,578 ರೂಪಾಯಿಯನ್ನು ಪ್ರತಿ ವರ್ಷ ಪಾವತಿ ಮಾಡಬೇಕಾಗುತ್ತದೆ. ಪಾಲಿಸಿ ಟರ್ಮ್ ಕೊನೆಯಾಗುವಷ್ಟರಲ್ಲಿ ನೀವು 2,95,478 ಲಕ್ಷ ರೂಪಾಯಿ ಪ್ರೀಮಿಯಂ ಅನ್ನು ಪಾವತಿಸಿದಂತೆ ಆಗಲಿದೆ. ಮೆಚ್ಯೂರಿಟಿ ವೇಳೆ ನಿಮಗೆ 5 ಲಕ್ಷ ರೂಪಾಯಿ ಲಭ್ಯವಾಗಲಿದೆ.

English summary

LIC Jeevan Azad Plan 868: Invest Rs 25,000, Get Rs 5,00,000 at maturity, Details Here

LIC Jeevan Azad Plan 868: The Life insurance Corporation of India has announced the launch of a new plan named Jeevan Azad which aims at individual savings and life insurance. Invest Rs 25,000, Get Rs 5,00,000 at maturity, Details Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X