ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇತ್ತೀಚೆಗೆ ಹೊಸ ಪಾಲಿಸಿಯನ್ನು ಆರಂಭ ಮಾಡಿದೆ. ಅದು ಎಲ್‌ಐಸಿ ಜೀವನ್ ಅಜಾದ್ ಪಾಲಿಸಿಯಾಗಿದೆ. ಇದು ನಾನ್-ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದೆ. ಈ ಹೊಸ ಪಾಲಿಸಿಯು ಕಳೆದ 10-15 ದಿನಗಳಲ್ಲಿ 50,000 ಮಾರಾಟವಾಗಿದೆ ಎಂದು ಸಂಸ್ಥೆಯು ಹೇಳಿದೆ. ಈ ಪಾಲಿಸಿಯು ಜನವರಿ 2023ರಲ್ಲಿ ಆರಂಭವಾಗಿದೆ ಎಂದು ಎಲ್‌ಐಸಿ ಚೇರ್‌ಮನ್ ಎಂ ಆರ್ ಕುಮಾರ್ ತಿಳಿಸಿದ್ದಾರೆ. '
ಎಲ್‌ಐಸಿ ಅಜಾದ್ ಉಳಿತಾಯದೊಂದಿಗೆ ಜೀವ ವಿಮೆಯನ್ನು ನೀಡುವ ಯೋಜನೆಯಾಗಿದೆ. ಹಾಗೆಯೇ ಮೆಚ್ಯೂರಿಟಿ ವೇಳೆ ನಿಗದಿತ ಭಾರೀ ಮೊತ್ತವನ್ನು ನೀಡುತ್ತದೆ. ಈ ಪಾಲಿಸಿ ಪ್ರೀಮಿಯಂ ಅವಧಿಯು ಪಾಲಿಸಿ ಟರ್ಮ್‌ನಿಂದ 8 ವರ್ಷವನ್ನು ಕಳೆದಾಗ ಬರುವ ಅವಧಿಯಾಗಿದೆ. ಆದ್ದರಿಂದಾಗಿ 18 ವರ್ಷದ ವಿಮೆಯನ್ನು ಆಯ್ಕೆ ಮಾಡಿದರೆ, 10 ವರ್ಷದ ಪ್ರೀಮಿಯಂ ಅನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಪಾಲಿಸಿಯು 15 ವರ್ಷದಿಂದ 20 ವರ್ಷದ ಪಾಲಿಸಿ ಅವಧಿಯನ್ನು ಹೊಂದಿದೆ. ಕನಿಷ್ಠ ಮೊತ್ತವು 2 ಲಕ್ಷ ರೂಪಾಯಿ ಆಗಿದ್ದು, ಗರಿಷ್ಠ ಮೊತ್ತ 5 ಲಕ್ಷ ರೂಪಾಯಿ ಆಗಿದೆ. ಈ ಪಾಲಿಸಿ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

ಪಾಲಿಸಿಯ ಬಗ್ಗೆ ಮಾಹಿತಿ
ಎಲ್‌ಐಸಿ ಜೀವನ್ ಅಜಾದ್ ಯೋಜನೆಯು ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ, ಉಳಿತಾಯ ಮಾಡಲಾಗುವ ಜೀವ ವಿಮೆ ಯೋಜನೆಯಾಗಿದೆ. ಹಾಗೆಯೇ ಕನಿಷ್ಠ ಪ್ರೀಮಿಯಂ ಅನ್ನು ಹೊಂದಿದೆ. ಇದು ನಿಗದಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದೆ. ಪ್ರೀಮಿಯಂ ಪಾವತಿ ಅವಧಿಯು 8 ವರ್ಷಕ್ಕಿಂತ ಕಡಿಮೆಯಾಗಿದೆ. ಪಾಲಿಸಿ ಟರ್ಮ್‌ಗಿಂತ ಕಡಿಮೆ ಅವಧಿ ಇದಾಗಿದೆ.
ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಹಣಕಾಸು ಸಹಾಯವನ್ನು ಯೋಜನೆಯು ನೀಡುತ್ತದೆ. ಮೆಚ್ಯೂರಿಟಿ ವೇಳೆ ಅಧಿಕ ಮೊತ್ತ ನಿಮಗೆ ಲಭ್ಯವಾಗಲಿದೆ. ಸಾವನ್ನಪ್ಪಿದರೆ ಅಥವಾ ಅಪಘಾತದಲ್ಲಿ ಅಂಗವೂನತೆ ಉಂಟಾದರೆ ನಿಮ್ಮ ಕುಟುಂಬಕ್ಕೆ ಅಥವಾ ನಾಮಿನಿಗೆ ಬೆನಿಫಿಟ್ ಲಭ್ಯವಾಗಲಿದೆ. 3 ಲಕ್ಷ ರೂಪಾಯಿವರೆಗೆ ವಿಮೆ ಪಾಲಿಸಿ ಇದೆ.
ಎಲ್‌ಐಸಿ ಜೀವನ ಅಜಾದ್ ಯೋಜನೆಯ ಅತೀ ಕಡಿಮೆ ಮೊತ್ತ 2 ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ಅಧಿಕ ಮೊತ್ತದ ಹೂಡಿಕೆಯನ್ನು ಕೂಡಾ ಮಾಡಬಹುದು. 15ರಿಂದ 20 ವರ್ಷ ಪಾಲಿಸಿ ಅವಧಿಯಾಗಿದೆ. ಈ ಯೋಜನೆಯಲ್ಲಿ ವಯೋಮಿತಿ ಕೂಡಾ ಇದೆ. 90 ದಿನದ ಮಗುವಿನಿಂದ ಹಿಡಿದು 50 ವರ್ಷಗಳವರೆಗಿನ ವಯಸ್ಸಿನವರು ಹೂಡಿಕೆಯನ್ನು ಮಾಡಬಹುದು. ಪ್ರೀಮಿಯಂ ಅನ್ನು ವಾರ್ಷಿಕವಾಗಿ, ಅರ್ಧವಾರ್ಷಿಕ, ತ್ರೈಮಾಸಿಕವಾಗಿ, ಮಾಸಿಕವಾಗಿ ಹೂಡಿಕೆಯನ್ನು ಮಾಡಬಹುದು. ಪಾಲಿಸಿಯನ್ನು 2 ವರ್ಷದಲ್ಲಿ ಸರೆಂಡರ್ ಮಾಡಬಹುದು. ಅಥವಾ ಎರಡು ಬಾರಿ ಪ್ರೀಮಿಯಂ ಪಾವತಿಸಿ ಸರಂಡರ್ ಮಾಡಬಹುದು. ಹಾಗೆಯೇ ಈ ವಿಮೆ ಅಡಿಯಲ್ಲಿ ಸಾಲವನ್ನು ಕೂಡಾ ಪಡೆಯಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications