For Quick Alerts
ALLOW NOTIFICATIONS  
For Daily Alerts

LIC Jeevan Pragati Policy : ದಿನಕ್ಕೆ 200 ರೂ ಹೂಡಿಕೆ ಮಾಡಿ 28 ಲಕ್ಷ ರೂ ಪಡೆಯುವುದು ಹೇಗೆ?

|

ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಯಾವುದು ಸುರಕ್ಷಿತ ಹೂಡಿಕೆ ಎಂದು ನೋಡುತ್ತೇವೆ. ಹಾಗೆಯೇ ಈ ಹೂಡಿಕೆಯಿಂದ ನಮಗೆ ಏನೆಲ್ಲ ಪ್ರಯೋಜನವಿದೆ, ಎಷ್ಟು ರಿಟರ್ನ್ ಲಭ್ಯವಾಗುತ್ತದೆ ಎಂದು ಕೂಡಾ ನೋಡುತ್ತೇವೆ. ಹಾಗೆ ನೋಡಿದಾಗ ನಮಗೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪಾಲಿಸಿಗಳು ಅತೀ ಉತ್ತಮವಾಗಿದೆ. ಜೀವ ಸುರಕ್ಷತೆಯು ಇದೆ, ಉಳಿತಾಯವೂ ಇದೆ, ಉತ್ತಮ ರಿಟರ್ನ್ ಕೂಡಾ ಇದೆ.

ಹಲವಾರು ದಶಕಗಳು ಕಳೆದರೂ ಕೂಡಾ ಎಲ್‌ಐಸಿ ಷೇರು ಮೌಲ್ಯಕ್ಕಿಂತ ಅಧಿಕ ಷೇರು ಮೌಲ್ಯವನ್ನು ಯಾವುದೇ ಖಾಸಗಿ ವಿಮಾ ಸಂಸ್ಥೆಗಳು ಹೊಂದಿಲ್ಲ. ಎಲ್‌ಐಸಿ ಷೇರುಗಳು ನಿರಂತರವಾಗಿ ಏರಿಳಿತ ಕಾಣುತ್ತಿದ್ದರೂ ಕೂಡಾ ಎಲ್‌ಐಸಿಯ ಪಾಲಿಸಿಗಳು ಉತ್ತಮವಾಗಿದೆ. ಯಾವುದೇ ರಿಸ್ಕ್ ಇಲ್ಲದ ಪಾಲಿಸಿಗಳು ಆಗಿದೆ.

Year Ender 2022: 2023ರಲ್ಲಿ ಹೂಡಿಕೆ ಮಾಡಬಹುದಾದ ಬೆಸ್ಟ್‌ ಎಲ್‌ಐಸಿ ಪಾಲಿಸಿಗಳುYear Ender 2022: 2023ರಲ್ಲಿ ಹೂಡಿಕೆ ಮಾಡಬಹುದಾದ ಬೆಸ್ಟ್‌ ಎಲ್‌ಐಸಿ ಪಾಲಿಸಿಗಳು

ಎಲ್‌ಐಸಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಪ್ರಗತಿ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ನಾವು ಹೂಡಿಕೆಯಲ್ಲಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ನಾವು ಪ್ರತಿ ದಿನ 200 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 28 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗಲಿದೆ. ಈ ಪಾಲಿಸಿ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

 ದಿನಕ್ಕೆ 200 ರೂ ಹೂಡಿಕೆ ಮಾಡಿ 28 ಲಕ್ಷ ರೂ ಪಡೆಯುವುದು ಹೇಗೆ?

ಜೀವನ ಪ್ರಗತಿ ಯೋಜನೆ ಬಗ್ಗೆ ಮಾಹಿತಿ

ಎಲ್‌ಐಸಿಯ ಕಡಿಮೆ ಅವಧಿಯ ಪಾಲಿಸಿಗಳಲ್ಲಿ ಅಥವಾ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಪ್ರಗತಿ ಯೋಜನೆ ಕೂಡಾ ಒಂದಾಗಿದೆ. ಈ ಪಾಲಿಸಿಯಲ್ಲಿ ನಾವು ಅತೀ ಉತ್ತಮ ಹಾಗೂ ಹೆಚ್ಚು ವಿಮೆ ಸುರಕ್ಷತೆಯನ್ನು ಪಡೆಯಲು ಸಾಧ್ಯವಾಗುವುದು ಮಾತ್ರವಲ್ಲ, ಮೆಚ್ಯೂರಿಟಿ ವೇಳೆ ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ. ನಾವು ಕೆಲವೇ ವರ್ಷಗಳಲ್ಲಿ ಈ ಪಾಲಿಸಿಯಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಸ

ಎಲ್‌ಐಸಿ ಜೀವನ ಪ್ರಗತಿ ಭಿಮಾ ಯೋಜನೆಯಲ್ಲಿ ನೀವು 12ರಿಂದ 20 ವರ್ಷದ ಅವಧಿಯ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಪ್ರತಿ ದಿನ 200 ರೂಪಾಯಿ ಹೂಡಿಕೆಯನ್ನು ಮಾಡಿದರೆ, ಮಾಸಿಕವಾಗಿ ಆರು ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಒಟ್ಟಾಗಿ ಅಂದರೆ ವಾರ್ಷಿಕವಾಗಿ 72 ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ನೀವು 20 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.

Year Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳುYear Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳು

ಜೀವನ ಸುರಕ್ಷಾ ಯೋಜನೆ ಕೂಡಾ ಹೌದು

ಈ ಯೋಜನೆಯು ಉತ್ತಮ ರಿಟರ್ನ್ ನೀಡುವುದು ಮಾತ್ರವಲ್ಲ ಜೀವನ ಸುರಕ್ಷ ಯೋಜನೆ ಕೂಡಾ ಹೌದಾಗಿದೆ. ವಿಮೆಯು ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತದೆ. ವಿಮಾದಾರರ ಮರಣದ ಬಳಿಕ ನಾಮಿನಿಗೆ ವಿಮಾ ಮೊತ್ತ ಲಭ್ಯವಾಗುತ್ತದೆ. ಅಮದರೆ ಡೆತ್ ಬೆನಿಫಿಟ್ ಇದೆ.

ಈ ಯೋಜನೆ ಅಡಿಯಲ್ಲಿ ನಾವು 4 ಲಕ್ಷ ರೂಪಾಯಿ ವಿಮೆಯನ್ನು ಖರೀದಿ ಮಾಡಿದರೆ, ಐದು ವರ್ಷದಲ್ಲಿ ವಿಮಾ ಮೊತ್ತವು ಐದು ಲಕ್ಷ ರೂಪಾಯಿ ಆಗಲಿದೆ. 10ರಿಂದ 15 ವರ್ಷದಲ್ಲಿ ವಿಮಾ ಮೊತ್ತವು ಆರು ಲಕ್ಷ ರೂಪಾಯಿ ಆಗಲಿದೆ. 20 ವರ್ಷದಲ್ಲಿ ವಿಮಾ ಮೊತ್ತ 7 ಲಕ್ಷ ರೂಪಾಯಿ ಆಗಲಿದೆ. 12 ವರ್ಷದಿಂದ 45 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಮೊತ್ತ 1.5 ಲಕ್ಷ ರೂಪಾಯಿ ಆಗಿದೆ. ಅಧಿಕ ಮೊತ್ತದ ಮಿತಿಯಿಲ್ಲ.

English summary

LIC Jeevan Pragati policy: Invest Rs 200 Per Day, Get Rs 28 Lakh, Details in Kannada

LIC Jeevan Pragati policy: The Life Insurance Corporation of India keeps bringing to you insurance policies that provide both live cover and hefty returns. Invest Rs 200 Per Day, Get Rs 28 Lakh, Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X