ಸಾಮಾನ್ಯವಾಗಿ ನಾವು ಹೂಡಿಕೆಯ ವಿಚಾರಕ್ಕೆ ಬಂದಾಗ ಎಲ್ಲಿ ಹೂಡಿಕೆ ಮಾಡಿದರೆ ಸುರಕ್ಷಿತ ಹಾಗೂ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಹಾಗೆ ನೋಡುವಾಗ ನಮ್ಮ ಮುಂದಿರುವ ಉತ್ತಮ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಗಳು ಮತ್ತು ಅಂಚೆ ಕಚೇರಿ ಯೋಜನೆಗಳು ಆಗಿದೆ. ಎರಡು ಸಂಸ್ಥೆಗಳ ಯೋಜನೆಗಳು ಸುರಕ್ಷಿತವಾಗಿದೆ, ಹಾಗೆಯೇ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗುವ ಯೋಜನೆಗಳು ಕೂಡಾ ಇದೆ.
ಇಂತಹ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಸರಳ ಯೋಜನೆ ಕೂಡಾ ಒಂದಾಗಿದೆ. ಭಾರತೀಯ ಜೀವ ವಿಮಾ ನಿಗಮದ ಪ್ರಖ್ಯಾತ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಸರಳ ಯೋಜನೆಯೂ ಒಂದು. ಸುರಕ್ಷತೆಯ ಜೊತೆಗೆ ಪಾಲಿಸಿದಾರರು ಹಣವನ್ನು ಉಳಿತಾಯ ಮಾಡಲೂ ಸಾಧ್ಯವಾಗುವಂತಹ ಯೋಜನೆ ಇದಾಗಿದೆ. ಓರ್ವ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ಈ ಯೋಜನೆ ನೀಡುತ್ತದೆ.
ಈ ಮೇಲೆ ಹೇಳಿದಂತೆ ಈ ಯೋಜನೆಯ ಪ್ರಮುಖ ಪ್ರಯೋಜನ, ಪಾಲಿಸಿದಾರರೂ ಹಾಗೂ ಕುಟುಂಬಕ್ಕೆ ಹಣಕಾಸು ಸುರಕ್ಷತೆ ನೀಡುವುದಾಗಿದೆ. ಪಾಲಿಸಿದಾರರು ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ ಕುಟುಂಬಸ್ಥರಿಗೆ ಡೆತ್ ಬೆನಿಫಿಟ್ ಲಭ್ಯವಾಗಲಿದೆ. ಭರವಸೆ ನೀಡಿದ ಮೊತ್ತ ಮತ್ತು ಬೋನಸ್‌ಗಳು ಸೇರ್ಪಡೆಯಾಗಿ ಡೆತ್ ಬೆನಿಫಿಟ್ ನೀಡಲಾಗುತ್ತದೆ. ಪಾಲಿಸಿದಾರರ ಕುಟುಂಬವು, ಪಾಲಿಸಿದಾರರು ಜೀವಂತವಾಗಿಲ್ಲದ ಸಂದರ್ಭದಲ್ಲಿ ಆರ್ಥಿಕವಾಗಿ ಸುರಕ್ಷಿತರಾಗಿರಬೇಕೆಂಬುವುದು ಇದರ ಉದ್ದೇಶವಾಗಿದೆ. ಯೋಜನೆ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಯೋಜನೆಯ ಪ್ರಯೋಜನಗಳು
ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ನಾವು ಡೆತ್ ಬೆನಿಫಿಟ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಅದರೊಂದಿಗೆ ಇತರೆ ಪ್ರಯೋಜನಗಳು ಕೂಡಾ ಈ ಯೋಜನೆಯಲ್ಲಿದೆ. ಪ್ರೀಮಿಯಂ ಪಾವತಿ ಅವಧಿಯಲ್ಲಿ ಬೇರೆ ಬೇರೆ ಆಯ್ಕೆಗಳು ನಮಗೆ ಲಭ್ಯವಿದೆ. ಪ್ರೀಮಿಯಂ ಪಾವತಿಯನ್ನು ವಾರ್ಷಿಕವಾಗಿ, ಅರ್ಧವಾರ್ಷಿಕವಾಗಿ, ತ್ರೈಮಾಸಿಕವಾಗಿ, ಮಾಸಿಕವಾಗಿ ಪಾವತಿ ಮಾಡುವ ಆಯ್ಕೆಯಲ್ಲಿ ಪಾಲಿಸಿದಾರರೇ ಬೇಕಾದ ಆಯ್ಕೆಯನ್ನು ಮಾಡಬಹುದು. ಹಾಗೆಯೇ ಎಲೆಕ್ಟ್ರಾನಿಕ್ ವಿಧಾನದಲ್ಲಿ ಪ್ರೀಮಿಯಂ ಪಾವತಿ ಅವಕಾಶವಿದೆ. ಅಂದರೆ ಇ-ವಹಿವಾಟಾಗಿದೆ. ಪ್ರೀಮಿಯಂ ಪಾವತಿ ಸರಳಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಸುರಕ್ಷತೆಯೊಂದಿಗೆ ಉಳಿತಾಯ
ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ನೀವು ಜೀವ ವಿಮೆ ಸುರಕ್ಷತೆಯನ್ನು ಪಡೆದುಕೊಳ್ಳುವುದರೊಂದಿಗೆ ಉಳಿತಾಯವನ್ನು ಕೂಡಾ ಮಾಡಲು ಸಾಧ್ಯವಾಗುತ್ತದೆ. ಎರಡೂ ಆಯ್ಕೆಯನ್ನು ನೀಡುವ ಎಲ್‌ಐಸಿ ಜನಪ್ರಿಯ ಯೋಜನೆಗಳಲ್ಲಿ ಇದು ಒಂದಾಗಿದೆ. ಯಾರು ಜೀವ ವಿಮೆಯೊಂದಿಗೆ ದೀರ್ಘಾವಧಿ ಹೂಡಿಕೆ ಆಯ್ಕೆಯನ್ನು ಮಾಡಲು ಬಯಸುತ್ತಾರೋ ಅವರಿಗೆ ಈ ಎಲ್‌ಐಸಿ ಸರಳ ಯೋಜನೆ ಉತ್ತಮ ಆಯ್ಕೆಯಾಗಿದೆ. ಹಾಗೆಯೇ ಪ್ರೀಮಿಯಂ ಪಾವತಿ ಅವಧಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆ ಇದಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿದೆ?
ವ್ಯಕ್ತಿಯು ತಮ್ಮ ಸಮೀಪದ ಎಲ್‌ಐಸಿ ಬ್ರಾಂಚ್‌ಗೆ ಭೇಟಿ ನೀಡಿ ಎಲ್‌ಐಸಿಯ ಈ ಜೀವನ ಸರಳ ಯೋಜನೆಯ ಚಂದಾದಾರಿಕೆಯನ್ನು ಮಾಡಿಕೊಳ್ಳಬಹುದು. ಎಲ್‌ಐಸಿ ಏಜೆಂಟ್‌ಗಳ ಮೂಲಕವು ಈ ಯೋಜನೆಯನ್ನು ನೀವು ಖರೀದಿ ಮಾಡಲು ಸಾಧ್ಯವಾಗಲಿದೆ. ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೂ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ ಮತ್ತು ಪಾರದರ್ಶಕವಾಗಿದೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಪಾಲಿಸಿದಾರರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣಕಾಸು ಮಾಹಿತಿಯನ್ನು ನೀಡಬೇಕಾಗುತ್ತದೆ.
182 ರೂ ಹೂಡಿಕೆ ಮಾಡಿ, 15.5 ಲಕ್ಷ ರೂ ರಿಟರ್ನ್
ಎಲ್‌ಐಸಿ ಜೀವನ ಸರಳ ಯೋಜನೆ ಉದಾಹರಣೆ: 30 ವರ್ಷ ಪ್ರಾಯದ ರವಿ ಎಂಬ ವ್ಯಕ್ತಿ ಎಲ್‌ಐಸಿ ಜೀವನ ಸರಳ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಯೋಜನೆಯ ಮೊತ್ತ 10 ಲಕ್ಷ ರೂಪಾಯಿ ಆಗಿದ್ದು, ಪ್ರೀಮಿಯಂ ಪಾವತಿ ಅವಧಿ 15 ವರ್ಷವಾಗಿದೆ. ಪಾಲಿಸಿ ಅವಧಿ 20 ವರ್ಷ ಎಂದು ರವಿ ಆಯ್ಕೆ ಮಾಡಿದ್ದಾರೆ. 15 ವರ್ಷದ ಬಳಿಕ ರವಿಗೆ ಮೆಚ್ಯೂರಿಟಿ ಮೊತ್ತ 15.5 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದ 10 ಲಕ್ಷ ಹಾಗೂ ಬೋನಸ್ ರೂಪದಲ್ಲಿ 5.5 ಲಕ್ಷ ರೂಪಾಯಿ ಸೇರಿದೆ. ಒಂದು ವೇಳೆ ರವಿ ಮೆಚ್ಯೂರಿಟಿಗೂ ಮುನ್ನ ಸಾವನ್ನಪ್ಪಿದರೆ, ನಾಮಿನಿಗೆ 15.5 ಲಕ್ಷ ರೂಪಾಯಿ ಡೆತ್ ಬೆನಿಫಿಟ್ ಲಭ್ಯವಾಗಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications