ಭಾರತದಲ್ಲಿ ಇಂದು ತಮ್ಮ ಹೂಡಿಕೆಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅನೇಕ ರೀತಿಯ ಹೂಡಿಕೆ ಲಭ್ಯವಿದೆ. ಆದರೂ ಹೆಚ್ಚಿನ ಜನರು ಇನ್ನೂ ಕೂಡಾ ಪೋಸ್ಟ್ ಆಫೀಸ್ ಯೋಜನೆಗಳು, ಜೀವ ವಿಮಾ ನಿಗಮದ ಯೋಜನೆ ಇತ್ಯಾದಿಗಳಲ್ಲಿ ಇನ್ವೆಸ್ಟ್ ಮಾಡಲು ಒಲವು ತೋರುತ್ತಾರೆ. ಭಾರತೀಯ ಜೀವ ವಿಮಾ ನಿಗಮವು, ಭಾರತದಲ್ಲಿ ಅತೀ ದೊಡ್ಡ ಮತ್ತು ಹಳೆಯ ವಿಮಾ ಸಂಸ್ಥೆಯಾಗಿದೆ.
ಈ ಸಂಸ್ಥೆ ವಿಮೆ ಮಾರುಕಟ್ಟೆಯಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದೆ. ಇದು ದೇಶದಾದ್ಯಂತ ಇಂದು ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಎಲ್ಐಸಿ ಪ್ರತಿಯೊಂದು ಪ್ರದೇಶಕ್ಕೂ ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸುತ್ತದೆ. ಇದಲ್ಲದೇ ಹಲವು ಯೋಜನೆಗಳನ್ನು ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ (LIC Policy for Children).

ನಿಮ್ಮ ಮಕ್ಕಳ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಚಿಂತೆಯನ್ನು ನಿವಾರಿಸಬಹುದಾದ ಒಂದು ಪಾಲಿಸಿಯ ಬಗೆಗಿನ ವಿವರಗಳು ಇಲ್ಲಿದೆ. ಈ ಯೋಜನೆಯನ್ನು "ಎಲ್ಐಸಿ ಜೀವನ್ ತರುಣ್ ಪಾಲಿಸಿ" ಎಂದು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ನೀವು ದಿನಕ್ಕೆ 150 ರೂ.ಗಳಂತೆ ಹೂಡಿಕೆ ಮಾಡಿದರೆ ನಿಮ್ಮ ಮಕ್ಕಳ ಜೀವನಕ್ಕೆ ಭದ್ರತೆ ಒದಗಿಸಬಹುದು.
ಎಲ್ಐಸಿ ಜೀವನ್ ತರುಣ್ ಪಾಲಿಸಿ ಕುರಿತ ಮಾಹಿತಿ:
ಎಲ್ಐಸಿ ಜೀವನ್ ತರುಣ್ ಪ್ಲಾನ್ ನಾನ್-ಲಿಂಕ್ಡ್ ಸೀಮಿತ ಪ್ರೀಮಿಯಂ ಪಾವತಿ ಯೋಜನೆಯಾಗಿದೆ. ಇದು ಮನಿ-ಬ್ಯಾಕ್ ಪ್ಲಾನ್ ನೊಂದಿಗೆ ಮಕ್ಕಳಿಗೆ, ಸುರಕ್ಷತೆ ಮತ್ತು ಉಳಿತಾಯ ಪ್ರಯೋಜನಗಳ ಆಕರ್ಷಕ ಮಿಶ್ರ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯನ್ನು ವಿಶೇಷವಾಗಿ, ಮಕ್ಕಳ ಹೆಚ್ಚುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಅಗತ್ಯಗಳ ಕಾಳಜಿಗಾಗಿ ರಚಿಸಲಾಗಿದೆ.
ಜೀವನ್ ತರುಣ್: ಅರ್ಹತೆ ಮತ್ತು ಹಣ ಯಾವಾಗ ಕ್ಲೈಮ್ ಮಾಡಬಹುದು: ಈ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಮಗುವಿನ ಕನಿಷ್ಟ ವಯಸ್ಸು 3 ತಿಂಗಳಾಗಿದ್ದು ಗರಿಷ್ಟ 12 ವರ್ಷ ವಯೋಮಿತಿಯಾಗಿದೆ. ಮಗುವಿಗೆ 20 ವರ್ಷ ತುಂಬುವವರೆಗೆ ಸಂಪೂರ್ಣ ಹೂಡಿಕೆಯನ್ನು ಈ ಪಾಲಿಸಿಯಡಿಯಲ್ಲಿ ಮಾಡಬೇಕಾಗುತ್ತದೆ.
ಆ ಬಳಿಕ 5 ವರ್ಷಗಳ ಲಾಕ್ - ಇನ್ ಅವಧಿ ಇರುತ್ತದೆ. ನಿಮ್ಮ ಮಗುವಿಗೆ 25 ವರ್ಷ ಪೂರ್ಣವಾದಾಗ ಒಟ್ಟು ಮೊತ್ತವನ್ನು ಕ್ಲೈಮ್ ಮಾಡಬಹುದು. ಇದು ಆಕೆ/ ಆತನ ಶಿಕ್ಷಣದ ಶುಲ್ಕ, ಮದುವೆಯ ಖರ್ಚು ವೆಚ್ಚದ ಒತ್ತಡವನ್ನು ಭರಿಸಲು ಇದು ಸಹಾಯವಾಗುತ್ತದೆ.
ಖಾತ್ರಿಪಡಿಸಲಾದ ಕನಿಷ್ಠ ಮೊತ್ತ ಎಷ್ಟು?
ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ನಿಸ್ಸಂದೇಹವಾಗಿ ಕನಿಷ್ಟ ಪಕ್ಷ ರೂ. 75,000 ವಿಮಾ ಮೊತ್ತ ಪಡೆಯುತ್ತೀರಿ. ಆದರೂ ಈ ಒಟ್ಟು ಮೊತ್ತಕ್ಕೆ ಯಾವುದೇ ಗರಿಷ್ಟ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಈ ಯೋಜನೆಯಡಿ ನೀವು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂಗಳನ್ನು ಠೇವಣಿ ಮಾಡಬಹುದು.
ಯೋಜನೆಯ ಅವಧಿ ಮುಗಿದ ಬಳಿಕ ಯಾವ ಮೊತ್ತ ಪಾವತಿಸಲಾಗುತ್ತದೆ?
ನಿಮ್ಮ ಮಗುವಿನ 12 ನೇ ವಯಸ್ಸಿನಲ್ಲಿ ಪಾಲಿಸಿ ಖರೀದಿಸಿ ಪ್ರತಿ ದಿನ 150 ರೂಪಾಯಿಗಳ ಸಣ್ಣ ಪಾವತಿಯನ್ನು ಮಾಡಿದರೆ ಇದು ವಾರ್ಷಿಕ ಪ್ರೀಮಿಯಂ 54,000 ರೂ.ಆಗಿರುತ್ತದೆ. ಈ ಸಂದರ್ಭದಲ್ಲಿ 8 ವರ್ಷಗಳ ಅವಧಿಯಲ್ಲಿ 4.32 ಲಕ್ಷ ರೂ. ಹೂಡಿಕೆ ಮಾಡಿದಂತಾಗುತ್ತದೆ. ಇದಕ್ಕೆ 2.47 ಲಕ್ಷ ರೂ.ವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತದೆ. ಮಗು ಬೆಳೆದು 25 ವರ್ಷವಾದಾಗ ಆಕೆ / ಆತ ಸುಮಾರು 7 ಲಕ್ಷ ರೂ.ಗಳ ಒಡೆಯನಾಗುತ್ತಾನೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications