ಭಾರತೀಯ ಜೀವ ವಿಮಾ ನಿಗಮವು , ಭಾರತದಲ್ಲಿ ಅತೀ ದೊಡ್ಡ ವಿಮಾ ಸಂಸ್ಥೆಯಾಗಿದ್ದು, ಈ ಸಂಸ್ಥೆ ವಿಮೆ ಮಾರುಕಟ್ಟೆಯಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿ ನಿಂತಿದೆ. ಸಮಾಜದ ಎಲ್ಲಾ ವರ್ಗದ ಮತ್ತು ಎಲ್ಲಾ ವಯಸ್ಸಿನ ಬೇಡಿಕೆಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುವುದರಿಂದ ಎಲ್ಐಸಿಯೂ ವಿಮಾ ಮಾರುಕಟ್ಟೆಯಲ್ಲಿ ಇಂದಿಗೂ ತನ್ನ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿದೆ.
ಎಲ್ಐಸಿಯೂ ಚಿಕ್ಕ ಮಕ್ಕಳ ಪೋಷಕರಿಗಾಗಿ ವಿನೂತನ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಹೆಸರು "ಎಲ್ಐಸಿ ಜೀವನ್ ತರುಣ್ ಪಾಲಿಸಿ." ಈ ಯೋಜನೆಯಲ್ಲಿ ನೀವು ದಿನಕ್ಕೆ 150 ರೂ.ಗಳಂತೆ ಹೂಡಿಕೆ ಮಾಡಿದರೆ ನಿಮ್ಮ ಮಕ್ಕಳ ಜೀವನಕ್ಕೆ ಭದ್ರತೆ ಒದಗಿಸಬಹುದು.
ಈ ಯೋಜನೆಯ ವಿವರ ಇಲ್ಲಿದೆ
ನೀವು ದಿನಕ್ಕೆ 150 ರೂ.ಗಳಂತೆ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ 54,000 ರೂ. ಉಳಿಸಿದಂತೆ ಆಗುತ್ತದೆ. ಇದನ್ನು ನೀವು ಎಲ್ಐಸಿ ಜೀವನ್ ತರುಣ್ ಪಾಲಿಸಿಯ ಪ್ರೀಮಿಯಂನ ಮೊತ್ತವಾಗಿ ಪಾವತಿಸಿದರೆ ಸಣ್ಣ ಮೊತ್ತಕ್ಕೆ, ಮುಂದೆ ಒಟ್ಟು ಮೊತ್ತವನ್ನು ಪಡೆಯಬಹುದಾಗಿದೆ.

ಈ ಪಾಲಿಸಿಯಲ್ಲಿ ಮಗುವಿನ ಕನಿಷ್ಟ ವಯಸ್ಸು 3ತಿಂಗಳಾಗಿದ್ದು ಗರಿಷ್ಟ ವಯೋಮಿತಿ 12 ವರ್ಷವಾಗಿದೆ. ಮಗುವಿಗೆ 20 ವರ್ಷ ತುಂಬುವವರೆಗೆ ಪ್ರೀಮಿಯಂನ್ನು ಪಾವತಿಸುತ್ತಿರಬೇಕಾಗುತ್ತದೆ. ಆ ಬಳಿಕ 5 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ನಿಮ್ಮ ಮಗುವಿಗೆ 25 ವರ್ಷ ಪೂರ್ಣವಾದಾಗ ಆಕೆ/ಆತನು ಶಿಕ್ಷಣದ ಶುಲ್ಕ, ಮದುವೆಯ ಖರ್ಚು ಭರಿಸಲು ಇದು ಸಹಾಯವಾಗುತ್ತದೆ.
ಈ ಪಾಲಿಸಿಯಲ್ಲಿ ಖಚಿತಪಡಿಸಲಾದ ಕನಿಷ್ಟ ವಿಮಾ ಮೊತ್ತ 75000ರೂ. ಆಗಿರುತ್ತದೆ. ಹಾಗೆಯೇ ಗರಿಷ್ಟ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ಒಂದು ವೇಳೆ ಮಗುವಿನ 12 ವರ್ಷವಾಗಿದ್ದರೆ ಪಾಲಿಸಿಯೂ 13 ವರ್ಷಗಳ ಅವಧಿಯದ್ದಾಗಿರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಖಚಿತಪಡಿಸಲಾದ ಕನಿಷ್ಟ ವಿಮಾ ಮೊತ್ತ 5 ಲಕ್ಷ ರೂ. ಆಗಿರುತ್ತದೆ.
ನಿಮ್ಮ ಮಗುವಿಗೆ 12 ವರ್ಷ ಆಗಿದ್ದರೆ, ನೀವು ವಾರ್ಷಿಕ ಪ್ರೀಮಿಯಂ 54000 ರೂ. ಪಾವತಿಸುತ್ತಿದ್ದರೆ ನೀವು ಎಂಟು ವರ್ಷಗಳ ಕಾಲ 4,32,000 ರೂ. ಹೂಡಿಕೆ ಮಾಡಿದಂತೆ ಆಗುತ್ತದೆ. "ಲಾಕ್ - ಇನ್" ಪಿರಿಯಡ್ ಮುಕ್ತಾಯವಾದ ನಂತರ 2,47,000 ರೂ. ಹಾಗೂ ಲಾಯಲ್ಟಿ ಬೋನಸ್ 97,000 ರೂ ಸೇರಿ ನಿಮಗೆ ಒಟ್ಟಾರೆ ಮೊತ್ತ 8,44,500 ರೂ. ದೊರಕುತ್ತದೆ. ಒಂದು ವೇಳೆ ನಿಮ್ಮ ಮಗುವಿನ ವಯಸ್ಸು 2 ವರ್ಷವಾಗಿದ್ದರೆ, ದಿನಕ್ಕೆ 171 ರೂ. ಗಳಂತೆ ಮುಂದಿನ 18 ವರ್ಷ 10,89,196 ರೂ. ಹೂಡಿಕೆ ಮಾಡಿದರೆ , 23 ವರ್ಷದ ಬಳಿಕ 28,24,800 ರೂ. ದೊರಕುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications