ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಸುರಕ್ಷಿತ ಹೂಡಿಕೆಗೆ ಹೆಚ್ಚು ಆದ್ಯತೆ ನೀಡುತ್ತೇವೆ ಹಾಗಿರುವಾಗ ಸುರಕ್ಷಿತ ಹೂಡಿಕೆಯಲ್ಲಿಯೇ ನಮಗೆ ಅಧಿಕ ಲಾಭ ಲಭಿಸಿದರೆ ಅದು ನಮ್ಮ ಗಮನ ಕುಕ್ಕದೆ ಇರುತ್ತದೆಯೇ?. ಇಲ್ಲಿದೆ ಈ ಬಗ್ಗೆ ಮಾಹಿತಿ ಮುಂದೆ ಓದಿ...
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಈ ಯೋಜನೆಯು ಮೆಚ್ಯೂರಿಟಿಯ ವೇಳೆ ಅಧಿಕ ಮೊತ್ತ ನಮಗೆ ಲಭ್ಯವಾಗಿಸುತ್ತದೆ. ನೀವು ನೂರು ರೂಪಾಯಿಗೂ ಕಡಿಮೆ ದೈನಂದಿನ ಹೂಡಿಕೆ ಮಾಡಿ ಸಾವಿರಾರು ರೂಪಾಯಿ ನಿಮ್ಮದಾಗಿಸಿಕೊಳ್ಳಬಹುದು. ಈ ಯೋಜನೆಯನ್ನು ಎಲ್ಐಸಿ ಜೀವನ್ ಉಮಂಗ್ ಪಾಲಿಸಿ ಎಂದು ಕರೆಯಲಾಗುತ್ತದೆ.
ತುರ್ತು ಪರಿಸ್ಥಿತಿಗಳು ಅಥವಾ ವೃದ್ಧಾಪ್ಯ ಮತ್ತು ನಿವೃತ್ತಿ ಸಂದರ್ಭದಲ್ಲಿ ನಾವು ಆರ್ಥಿಕವಾಗಿ ಸುರಕ್ಷಿತವಾಗಿರಿಸಲು, ಎಲ್‌ಐಸಿ ನೀಡುವ ಇತರ ಕನಿಷ್ಠ ಅಪಾಯದ ಯೋಜನೆಗಳಂತೆ, ಜೀವನ್ ಉಮಂಗ್ ಪಾಲಿಸಿಯು ಕೂಡಾ ಒಂದಾಗಿದೆ. ಈ ಪಾಲಿಸಿಯು ಸಣ್ಣ ಹೂಡಿಕೆಗೆ ಉತ್ತಮ ರಿಟರ್ನ್ ನೀಡುತ್ತದೆ. ಈ ಪಾಲಿಸಿಗೆ 90 ದಿನಗಳಿಂದ 55 ವರ್ಷ ವಯಸ್ಸಿನವರು ಸೇರ್ಪಡೆಗೊಳ್ಳಬಹುದು. ಪಾಲಿಸಿಯು 15, 20, 25 ಮತ್ತು 30 ವರ್ಷಗಳ ಪ್ರೀಮಿಯಂ ಪಾವತಿ ಅವಧಿಯ ಆಯ್ಕೆಗಳನ್ನು ನೀಡುತ್ತದೆ.

ಎಲ್ಐಸಿ ಜೀವನ್ ಉಮಂಗ್ ಪಾಲಿಸಿ ವಿವರ
ಈ ಯೋಜನೆಯು ಪಾಲಿಸಿದಾರರಿಗೆ ಪಾವತಿಯೊಂದಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಹಾಗೆಯೇ ಪಾಲಿಸಿದಾರರಿಗೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಪಾಲಿಸಿದಾರರು ಪ್ರೀಮಿಯಂ ಪಾವತಿಯ ಅವಧಿಯು ಮುಕ್ತಾಯಗೊಳ್ಳುವವರೆಗೆ ವಾರ್ಷಿಕ ಸರ್ವೈವಲ್ ಬೆನಿಫಿಟ್‌ಗೆ ಅರ್ಹರಾಗಿರುತ್ತಾರೆ. ಮೆಚ್ಯೂರಿಟಿ ವೇಳೆ ಒಂದು ದೊಡ್ಡವನ್ನು ಪಾವತಿಸಲಾಗುತ್ತದೆ. ಇದು ನಾನ್-ಲಿಂಕ್ಡ್ ಸ್ಕೀಮ್ ಆಗಿದ್ದು, ಇದು ಸುರಕ್ಷಿತ ಹೂಡಿಕೆಯಾಗಿದೆ.
ದಿನಕ್ಕೆ ರೂ 45 ಪಾವತಿ ಮಾಡಿದರೆ, ತಿಂಗಳಿಗೆ ಸರಿಸುಮಾರು ರೂ 1,350 ರ ಮಾಸಿಕ ಪ್ರೀಮಿಯಂ ಪಾವತಿ ಮಾಡಿದಂತೆ ಆಗಲಿದೆ. ಈ ಮೂಲಕ ರೂ 4.5 ಲಕ್ಷ ವಿಮಾ ರಕ್ಷಣೆಯನ್ನು ಪಡೆಯಬಹುದು. 30 ವರ್ಷಗಳ ಪ್ರೀಮಿಯಂ ಪಾವತಿ ಅವಧಿಗೆ ಈ ಮೊತ್ತವು ತಿಂಗಳಿಗೆ ಸುಮಾರು 15,882 ರೂ.ನಂತೆ ಸುಮಾರು 4.76 ಲಕ್ಷ ರೂಪಾಯಿ ಆಗಲಿದೆ. ಅವಧಿಗೆ ನಿಯಮಿತವಾಗಿ ಪ್ರೀಮಿಯಂಗಳನ್ನು ಪಾವತಿಸಿದ ನಂತರ, ಪಾಲಿಸಿದಾರರು ವರ್ಷಕ್ಕೆ 36,000 ರೂ.ಗಳನ್ನು ವರ್ಷ 31ರಿಂದ ಪಡೆಯುತ್ತಾರೆ.
100 ವರ್ಷ ವಯಸ್ಸನ್ನು ತಲುಪುವ ಮೊದಲು ಪಾಲಿಸಿದಾರರ ಮರಣ ಹೊಂದಿದರೆ, ಒಟ್ಟು ಪಾವತಿ ಸೇರಿದಂತೆ ಪ್ರಯೋಜನಗಳನ್ನು ನೀಡುತ್ತದೆ. ಮೊತ್ತವನ್ನು ಕಂತುಗಳಾಗಿ ಸ್ವೀಕರಿಸಲು ಸಹ ಆಯ್ಕೆ ಮಾಡಬಹುದು. ಪಾಲಿಸಿಯಲ್ಲಿ ಆಸಕ್ತಿ ಹೊಂದಿರುವವರು ಜೀವನ್ ಉಮಂಗ್ ಪಾಲಿಸಿಯ ಅಧಿಕೃತ ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿನ ನೀಡಬಹುದು.


Click it and Unblock the Notifications