ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಸಮಾಜದ ಎಲ್ಲಾ ವರ್ಗಗಳಿಗೂ ಸರಿ ಹೊಂದುವ ಹಲವು ಯೋಜನೆಗಳನ್ನು ಹೊಂದಿದೆ. ಎಲ್ಐಸಿ ಪಾಲಿಸಿ ನಿಮ್ಮ ಎಲ್ಲಾ ಅಗತ್ಯ ಗಳನ್ನು ಪೂರೈಸುತ್ತದೆ ಎಂದರೆ ತಪ್ಪಾಗಲಾರದು.
ಇವುಗಳಲ್ಲಿ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವ ಪಾಲಿಸಿಗಳಿದ್ದು, ಇದರಿಂದಲೇ ಎಲ್‌ಐಸಿ ಪಾಲಿಸಿಗಳು ಜನಪ್ರಿಯವಾಗಿದೆ. ಮಕ್ಕಳ ವಿದ್ಯಾಭ್ಯಾಸ, ವಿವಾಹಕ್ಕಾಗಿಯೇ ವಿನ್ಯಾಸಗೊಳಿಸಿರುವಂತಹ ಹಲವು ಪಾಲಿಸಿಗಳಿವೆ. ಇಂತಹ ಪಾಲಿಸಿಗಳ ಪೈಕಿ "ಎಲ್ಐಸಿ ಕನ್ಯಾದಾನ" ಪಾಲಿಸಿಯೂ ಒಂದು.
ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೆ ಇರುತ್ತದೆ. ಆದರೆ "ಎಲ್ಐಸಿ ಕನ್ಯಾದಾನ" ಪಾಲಿಸಿ ಮಾಡಿದರೆ, ವಿವಾಹದ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳುವುದು ಬಿಟ್ಟು ನಿಶ್ಚಿಂತರಾಗಬಹುದು. ಯಾಕೆಂದರೆ ಈ ಪಾಲಿಸಿ ನಿಮ್ಮ ಮಗಳ ಶಿಕ್ಷಣದ ಜೊತೆಜೊತೆಗೆ ವಿವಾಹದ ಖರ್ಚು ಭರಿಸುತ್ತದೆ. ಎಲ್ಐಸಿ ಕನ್ಯಾದಾನ ಪಾಲಿಸಿಯ ಮೂಲಕ ನೀವು ಹೇಗೆ 27 ಲಕ್ಷ ರೂ. ಗಳಿಸಬಹುದೆಂಬ ಮಾಹಿತಿ ಇಲ್ಲಿದೆ.

121 ರೂ. ಪಾವತಿಸಿ, 27 ಲಕ್ಷ ರೂ ಪಡೆಯುವುದು ಹೇಗೆ?
ಎಲ್ಐಸಿ ಕನ್ಯಾದಾನ ಪಾಲಿಸಿಯ ಅವಧಿ 25 ವರ್ಷಗಳಾಗಿರುತ್ತದೆ. ದಿನವೊಂದಕ್ಕೆ ನೀವು 121 ರೂ.ಗಳಂತೆ, ತಿಂಗಳಿಗೆ 3600 ರೂಪಾಯಿಗಳನ್ನು 22 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಇದಾದ ಬಳಿಕ ಮೂರು ವರ್ಷಗಳ ಲಾಕ್ ಇನ್ ಪಿರಿಯಡ್ ಇರುತ್ತದೆ. 25 ವರ್ಷಗಳ ನಂತರ 27ಲಕ್ಷ ರೂ. ಪಾಲಿಸಿದಾರರಿಗೆ ಹಸ್ತಾಂತರವಾಗುತ್ತದೆ. ಈ ವಿಮೆಯ ಕನಿಷ್ಟ ಅವಧಿ 13 ವರ್ಷಗಳಾಗಿದ್ದು, ಗರಿಷ್ಟ ಅವಧಿ 25 ವರ್ಷಗಳಾಗಿವೆ. ಕನಿಷ್ಟ ವಿಮಾ ಮೊತ್ತ 1 ಲಕ್ಷ ರೂ. ಆಗಿರುತ್ತದೆ.
ಈ ವಿಮೆ ಮಾಡಿಸುವ ಮಗುವಿನ ತಂದೆಯ ವಯಸ್ಸು 18 ಮತ್ತು 50ರ ನಡುವೆ ಇರಬೇಕಾಗುತ್ತದೆ. ಪುತ್ರಿಗೆ ಕನಿಷ್ಟ ಒಂದು ವರ್ಷ ಆಗಿರಬೇಕು. ನಿಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ನೀವು ಪಾಲಿಸಿ ಅವಧಿಯನ್ನುಆಯ್ಕೆ ಮಾಡಿಕೊಳ್ಳಬಹುದು. ಮಗಳಿಗೆ 25 ವರ್ಷ ಪೂರ್ಣಗೊಂಡಾಗ ನಗದನ್ನು ಹಸ್ತಾಂತರಿಸಲಾಗುತ್ತದೆ. ಹೀಗಾಗಿ ಈ ಹಣವನ್ನು ಮದುವೆಯ ಜೊತೆ ಜೊತೆಗೆ ಆಕೆಯ ಉನ್ನತ ವ್ಯಾಸಂಗಕ್ಕೂ ಉಪಯೋಗಿಸಿಕೊಳ್ಳಬಹುದಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications