ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಲವಾರು ಪಾಲಿಸಿಗಳನ್ನು ಹೊಂದಿದೆ. ನಾವು ನಿವೃತ್ತಿಗಾಗಿ, ಶಿಕ್ಷಣಕ್ಕಾಗಿ, ವಿವಾಹಕ್ಕಾಗಿ, ಮೊದಲಾದವುಗಳಿಗಾಗಿ ಎಲ್‌ಐಸಿಯಲ್ಲಿ ವಿಶೇಷ ಪಾಲಿಸಿಗಳು ಇದೆ. ಇನ್ನು ಎಲ್‌ಐಸಿ ಪಾಲಿಸಿಯಲ್ಲಿ ನಾವು ಉಳಿತಾಯ ಮಾಡುವುದು ಮಾತ್ರವಲ್ಲದೆ ಪಾಲಿಸಿಯ ಮೂಲಕ ಜೀವ ವಿಮೆಯನ್ನು ಕೂಡಾ ಪಡೆಯಬಹುದು. ಹಾಗೆಯೇ ನಿರ್ದಿಷ್ಟವಾಗಿ ಒಂದು ಕಾರಣಕ್ಕಾಗಿಯೇ ಹಣವನ್ನು ಉಳಿತಾಯ ಮಾಡಲು ಕೂಡಾ ಸಾಧ್ಯವಾಗುತ್ತದೆ.
ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಅದುವೆ ಎಲ್‌ಐಸಿಯ ಕನ್ಯಾದಾನ ಪಾಲಿಸಿ ಅಗಿದೆ. ಎಲ್ಐಸಿ ಕನ್ಯಾದಾನ ಪಾಲಿಸಿಯು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ವೆಚ್ಚಗಳಿಗೆ ಹಣಕಾಸಿನ ಉಳಿತಾಯ ಮಾಡಲು ಸಹಾಯ ಮಾಡುವ ಯೋಜನೆಯಾಗಿದೆ. ಎಲ್ಐಸಿ ಕನ್ಯಾದಾನ ಉಳಿತಾಯ ಯೋಜನೆಯನ್ನು ಹೆಣ್ಣು ಮಗುವಿನ ಪೋಷಕರು ನಿರ್ವಹಣೆ ಮಾಡಬಹುದಾದ ಯೋಜನೆಯಾಗಿದೆ. ಹೆಣ್ಣು ಮಗುವಿಗೆ ಈ ಯೋಜನೆಯ ನಿರ್ವಹಣೆಯ ಆಯ್ಕೆಯಿಲ್ಲ.

ಯೋಜನೆಯು ತಂದೆಯ ಮರಣದ ನಂತರ ಪ್ರಯೋಜನವನ್ನು ಮಗಳಿಗೆ ನೀಡುತ್ತದೆ. ಇದು ಕುಟುಂಬಕ್ಕೆ ಮತ್ತು ವಿಶೇಷವಾಗಿ ಹೆಣ್ಣು ಮಗುವಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು 25 ವರ್ಷಗಳ ಅವಧಿಯನ್ನು ಹೊಂದಿದೆ. ವಿಮೆಯ ಕನಿಷ್ಠ ಅವಧಿ 13 ವರ್ಷಗಳು, ಗರಿಷ್ಠ 25 ವರ್ಷಗಳು ಆಗಿದೆ. ಹೆಣ್ಣು ಮಗುವಿನ ತಂದೆಯ ವಯಸ್ಸು 18 ರಿಂದ 50 ರ ನಡುವೆ ಇರಬೇಕು.
ಎಲ್‌ಐಸಿ ಕನ್ಯಾದಾನ ಯೋಜನೆ ಫೀಚರ್
1. ತಂದೆಯ ಮರಣವಾದರೆ ಯಾವುದೇ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗಿಲ್ಲ.
2. ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ತಕ್ಷಣ 10 ಲಕ್ಷ ರೂಪಾಯಿ ಲಭ್ಯವಾಗುತ್ತದೆ.
3. ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ತಕ್ಷಣವೇ 5 ಲಕ್ಷ ರೂಪಾಯಿ ಲಭ್ಯವಾಗುತ್ತದೆ.
4. ಮೆಚ್ಯೂರಿಟಿವರೆಗೆ ಪ್ರತಿ ವರ್ಷ 50000 ರೂಪಾಯಿ ಪಡೆಯಬಹುದು.
5. ಪ್ರತಿ ದಿನ 75 ರೂಪಾಯಿ ಹೂಡಿಕೆ ಮಾಡಿ, ವಿವಾಹದ ಸಂದರ್ಭದಲ್ಲಿ 14.5 ಲಕ್ಷ ರೂಪಾಯಿ ಪಡೆಯಿರಿ.
6. ದಿನಕ್ಕೆ 151 ರೂಪಾಯಿ ಉಳಿತಾಯ ಮಾಡಿದರೆ, ನೀವು ವಿವಾಹದ ಸಂದರ್ಭದಲ್ಲಿ 31 ಲಕ್ಷ ರೂಪಾಯಿ ಪಡೆಯಬಹುದಾಗಿದೆ.
ಹೆಣ್ಣು ಮಕ್ಕಳಿಗಾಗಿ ಇರುವ ಇತರೆ ಯೋಜನೆ
ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳು ಇದೆ. ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದಾಗಿದೆ. ಎನ್‌ಆರ್‌ಐಗಳು ಸೇರಿದಂತೆ ಯಾವುದೇ ನಾಗರಿಕರು ಈ ಯೋಜನೆಯ ಮೂಲಕ ತಮ್ಮ ಮಗಳ ಮದುವೆಗೆ ಹೂಡಿಕೆ ಮಾಡಬಹುದಾಗಿದೆ. ಯಾವುದೇ ಅಂಚೆ ಕಚೇರಿಗಳು ಅಥವಾ ಬ್ಯಾಂಕ್ ಶಾಖೆಗಳಲ್ಲಿ ಖಾತೆಯನ್ನು ತೆರೆಯಬಹುದು. ಒಂದೇ ಹೆಣ್ಣು ಮಗುವಿಗೆ ಎರಡು ಖಾತೆ ತೆರೆಯಲಾಗುವುದಿಲ್ಲ. 18 ವರ್ಷ ವಯಸ್ಸಿನ ನಂತರ, ಹೆಣ್ಣು ಮಗುವಿನ ವ್ಯಾಸಂಗಕ್ಕೆ ಗರಿಷ್ಠ ಶೇಕಡ 50ರಷ್ಟು ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು.
10 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಜನನ ಪ್ರಮಾಣಪತ್ರ, ಹುಡುಗಿ ಮತ್ತು ಪೋಷಕರ ವಿಳಾಸ, ಗುರುತಿನ ಪುರಾವೆಗಳಂತಹ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅವುಗಳನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಸಲ್ಲಿಸಬೇಕು. ಕನಿಷ್ಠ 250 ರೂಪಾಯಿ ಹೂಡಿಕೆ ಮಾಡಿ ಖಾತೆ ತೆರೆಯಬಹುದು. ಪ್ರತಿದಿನ 75 ರೂಪಾಯಿ ಹೂಡಿಕೆಯನ್ನು ಮಾಡಿ, ಮಾಸಿಕ ಪ್ರೀಮಿಯಂ ಪಾವತಿಸಿದ 25 ವರ್ಷಗಳ ನಂತರ ನಿಮ್ಮ ಮಗಳ ಮದುವೆಗೆ 14 ಲಕ್ಷ ರೂಪಾಯಿ ಲಭ್ಯವಾಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ದೇಶದ (ಭಾರತ) ಒಳಗೆ ಎಲ್ಲಿ ಬೇಕಾದರೂ ವರ್ಗಾಯಿಸಬಹುದು. ಹೆಣ್ಣು ಮಗುವಿನ ಸಾವು ಸಂಭವಿಸಿದರೆ, ಮರಣ ಪ್ರಮಾಣಪತ್ರವನ್ನು ತೋರಿಸಿ ಖಾತೆಯನ್ನು ಮುಚ್ಚಬಹುದು. ಹೂಡಿಕೆ ಮಾಡಿದ ಮೊತ್ತವನ್ನು ಬಡ್ಡಿಯೊಂದಿಗೆ ಪೋಷಕರು ಪಡೆಯಬಹುದಾಗಿದೆ. ಯಾವುದೇ ಮಾರಣಾಂತಿಕ ಖಾಯಿಲೆ ಇದ್ದರೆ, ಖಾತೆಯನ್ನು 5 ವರ್ಷಗಳಲ್ಲಿ ಮುಚ್ಚಬಹುದು. ಈ ಯೋಜನೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

New Income Tax: ತೆರಿಗೆ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

India Post: ಅಂಚೆ ಕಚೇರಿಯಲ್ಲಿ ಇಂದಿನಿಂದ ಹೊಸ ಸೇವೆ ಆರಂಭ; ಇನ್ಮೇಲೆ ಮತ್ತಷ್ಟು ಸುಲಭ

Tumkur Railway: ತುಮಕೂರಿನ ಈ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ಕಾಮಗಾರಿ; ಸುಮಾರು 25 ರೈಲುಗಳ ಸಂಚಾರ ವ್ಯತ್ಯಯ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications