For Quick Alerts
ALLOW NOTIFICATIONS  
For Daily Alerts

LIC New Jeevan Shanti Plan 858: ಮಾಸಿಕ 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

|

ನಾವು ಸಾಮಾನ್ಯವಾಗಿ ಹೂಡಿಕೆ ಮಾಡುವಾಗ ಅತೀ ಅಧಿಕ ರಿಟರ್ನ್ ಅನ್ನು ಪಡೆಯಲು ಎಲ್ಲಿ ಸಾಧ್ಯ ಎಂದು ನೋಡುತ್ತೇವೆ. ಹಾಗೆಯೇ ಹೆಚ್ಚು ರಿಟರ್ನ್ ಜೊತೆ ಸುರಕ್ಷತೆಯನ್ನು ಕೂಡಾ ನೋಡುತ್ತೇವೆ. ನಾವು ಹೂಡಿಕೆ ಮಾಡಿದ ಹಣವು ಸುರಕ್ಷಿತವಾಗಿರಲಾರದು ಎಂದಾದಾಗ ಹೂಡಿಕೆಗೆ ಹಿಂಜರಿಯುವುದು ಸಹಜವಲ್ಲವೇ. ನಮಗೆ ಅಧಿಕ ರಿಟರ್ನ್ ಹಾಗೂ ಸುರಕ್ಷತೆ ಎರಡೂ ಬೇಕೆಂದಾಗ ಭಾರತೀಯ ಜೀವ ವಿಮಾ ಸಂಸ್ಥೆ (ಎಲ್‌ಐಸಿ) ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಎಲ್‌ಐಸಿಯ ಹಲವಾರು ಯೋಜನೆಗಳ ಪೈಕಿ ಇತ್ತೀಚೆಗೆ ಅಪ್‌ಡೇಟ್ ಆದ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಉತ್ತಮ ರಿಟರ್ನ್ ನೀಡುವ ಯೋಜನೆಯಾಗಿದೆ. ಅಧಿಕ ಆನ್ಯೂಟಿ ರೇಟ್ ಹೊಂದಿರುವ ಯೋಜನೆ ಇದಾಗಿದೆ. ಇದು ಪಿಂಚಣಿ ಯೋಜನೆಯಾಗಿದೆ. ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆಯಲು ಬಯಸುವವರಿಗೆ ಇದು ಉತ್ತಮವಾಗಿದೆ.

Aadhaar Shila: 58 ರೂ ಹೂಡಿಕೆ ಮಾಡಿ 8 ಲಕ್ಷ ರೂ ಪಡೆಯಿರಿAadhaar Shila: 58 ರೂ ಹೂಡಿಕೆ ಮಾಡಿ 8 ಲಕ್ಷ ರೂ ಪಡೆಯಿರಿ

ಯಾರು ತಾನು ನಿವೃತ್ತಿ ಪಡೆದಾಗ ಮಾಸಿಕವಾಗಿ, ತ್ರೈಮಾಸಿಕವಾಗಿ, ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಕೊಂಚ ಅಧಿಕ ಮೊತ್ತದ ಹಣ ಲಭ್ಯವಾಗಬೇಕು ಎಂದು ಬಯಸುತ್ತಾರೋ ಅವರಿಗೆ ಈ ಯೋಜನೆ ಉತ್ತಮವಾಗಿದೆ. ನೀವು ಹೂಡಿಕೆ ಆರಂಭಿಸಿ ಅದರ ಮೆಚ್ಯೂರಿಟಿಗಾಗಿ ಕಾಯಬೇಕಾಗುತ್ತದೆ. ಇದರ ಅವಧಿ 1ರಿಂದ 12 ವರ್ಷಗಳಾಗಿದೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

 ಯೋಜನೆಯ ಬಗ್ಗೆ ಮಾಹಿತಿ

ಯೋಜನೆಯ ಬಗ್ಗೆ ಮಾಹಿತಿ

ಎಲ್‌ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ಗರಿಷ್ಠ ಖರೀದಿ ಮಿತಿ ಇಲ್ಲ. ಅಧಿಕ ಖರೀದಿ ಮಾಡುವ ಅವಕಾಶ ಇರುವ ಕಾರಣ ಅಧಿಕ ಅನ್ಯೂಟಿ ಈ ಯೋಜನೆಯಲ್ಲಿದೆ. ಎಲ್‌ಐಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಲ್ಕುಲೇಟರ್ ಇರಲಿದ್ದು ಅದರ ಸಹಾಯದಿಂದ ನೀವು ಅನ್ಯೂಟಿಯ ಲೆಕ್ಕಾಚಾರವನ್ನು ಯೋಜನೆಯನ್ನು ಖರೀದಿ ಮಾಡುವ ಸಂದರ್ಭದಲ್ಲೇ ಲೆಕ್ಕ ಹಾಕಿಕೊಳ್ಳಬಹುದು.

 1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

1 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

ಎಲ್‌ಐಸಿ ವೆಬ್‌ಸೈಟ್‌ ಕಾಲ್ಕುಲೇಟರ್ ಪ್ರಕಾರ ನೀವು ಎಲ್‌ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ಮಾಸಿಕವಾಗಿ ಒಂದು ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆಯಬೇಕಾದರೆ, ಒಂದು ಕೋಟಿ ರೂಪಾಯಿಯ ವಿಮೆಯನ್ನು ಖರೀದಿ ಮಾಡಬೇಕಾಗುತ್ತದೆ. ನೀವು ಒಂದು ಕೋಟಿ ರೂಪಾಯಿಯ ವಿಮೆಯನ್ನು ಖರೀದಿ ಮಾಡಿದರೆ ನಿಮಗೆ 12 ವರ್ಷದ ಅವಧಿಯ ಬಳಿಕ ಮಾಸಿಕವಾಗಿ 1.06 ಲಕ್ಷ ರೂಪಾಯಿಯ ಪಿಂಚಣಿಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಹತ್ತು ವರ್ಷಗಳ ಅವಧಿಗೆ ಹೂಡಿಕೆಯನ್ನು ಮಾಡಿದರೆ 94,840 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.

 50 ಸಾವಿರ ಪಿಂಚಣಿಯನ್ನು ಪಡೆಯವುದು ಹೇಗೆ?

50 ಸಾವಿರ ಪಿಂಚಣಿಯನ್ನು ಪಡೆಯವುದು ಹೇಗೆ?

ಎಲ್‌ಐಸಿಯ ಹೊಸ ಜೀವನ ಶಾಂತಿ (ಪ್ಲ್ಯಾನ್ ನಂಬರ್ 858) ಯೋಜನೆಯಲ್ಲಿ ನೀವು ಮಾಸಿಕವಾಗಿ 50 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಬೇಕಾದರೆ 50 ಲಕ್ಷ ರೂಪಾಯಿಗೆ ಪ್ಲ್ಯಾನ್ ಅನ್ನು ಖರೀದಿಸಬೇಕಾಗುತ್ತದೆ. 50 ಲಕ್ಷ ರೂಪಾಯಿಗೆ ಮಾಸಿಕ ಪಿಂಚಣಿಯನ್ನು ಖರೀದಿಸಿದರೆ, 12 ವರ್ಷ ಅವಧಿಯ ಬಳಿಕ ಮಾಸಿಕವಾಗಿ 53,460 ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಹತ್ತು ವರ್ಷಗಳ ಅವಧಿಗೆ ಹೂಡಿಕೆಯನ್ನು ಮಾಡಿದರೆ, ಮಾಸಿಕವಾಗಿ 47,420 ರೂಪಾಯಿ ಪಿಂಚಣಿ ಪಡೆಯಬಹುದು.

English summary

LIC New Jeevan Shanti Plan 858 Calculator, Know How to get 1 lakh per month pension

The Life Insurance Corporation (LIC) of India recently updated the New Jeevan Shanti (Plan No. 858) with a higher annuity rate and enhanced purchase-price-based incentives. Know How to get 1 lakh per month pension.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X