For Quick Alerts
ALLOW NOTIFICATIONS  
For Daily Alerts

LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!

|

ನಾವು ಸಾಮಾನ್ಯವಾಗಿ ಹೂಡಿಕೆಯ ವಿಚಾರಕ್ಕೆ ಬಂದಾಗ ಎಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ನೋಡುತ್ತೇವೆ. ಹಾಗೆಯೇ ಎಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯ ಎಂಬುವುದನ್ನು ನಾವು ನೋಡುತ್ತೇವೆ. ಕಡಿಮೆ ಹೂಡಿಕೆ ಅಧಿಕ ರಿಟರ್ನ್ ಅನ್ನು ಪಡೆಯಲು ಎಲ್ಲಿ ಸಾಧ್ಯ ಹಾಗೂ ಎಲ್ಲಿ ಹೂಡಿಕೆ ಸುರಕ್ಷಿತ ಎಂದು ನಾವು ನೋಡಿದಾಗ ನಮ್ಮ ಮುಂದೆ ಬರುವ ಆಯ್ಕೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಆಗಿದೆ.

 

ಭಾರತೀಯ ಜೀವ ವಿಮಾ ನಿಗಮ/ ಎಲ್‌ಐಸಿಯಲ್ಲಿ ಹಲವಾರು ಯೋಜನೆಗಳು ಇದೆ. ಆ ಪೈಕಿ ಎಲ್‌ಐಸಿಯ ಹೊಸ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲ್ಯಾನ್ ಕೂಡಾ ಒಂದಾಗಿದೆ. ಮಕ್ಕಳಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದು ತೆರಿಗೆ ವಿನಾಯಿತಿ ನೀಡುವ ಯೋಜನೆಯಾಗಿದೆ.

LIC New Endowment Plan : ಮಾಸಿಕ ₹2,130 ರೂ. ಹೂಡಿ ₹48.5 ಲಕ್ಷ ಪಡೆಯಿರಿ, ಪೂರ್ಣ ಮಾಹಿತಿ ಇಲ್ಲಿದೆLIC New Endowment Plan : ಮಾಸಿಕ ₹2,130 ರೂ. ಹೂಡಿ ₹48.5 ಲಕ್ಷ ಪಡೆಯಿರಿ, ಪೂರ್ಣ ಮಾಹಿತಿ ಇಲ್ಲಿದೆ

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಮಕ್ಕಳ ಭವಿಷ್ಯದಲ್ಲಿ ಸುರಕ್ಷತೆಗಾಗಿ ಮಾಡುವ ಹೂಡಿಕೆಯಾಗಿದೆ. ಈ ಯೋಜನೆಯಲ್ಲಿ ಹಲವಾರು ಪ್ರಯೋಜನಗಳು ಇದೆ, ಜೀವ ವಿಮೆಯನ್ನು ಕೂಡಾ ನೀಡುತ್ತದೆ. ಹಾಗೆಯೇ ನಿಯಮಿತವಾಗಿ ಆದಾಯವನ್ನು ಕೂಡಾ ನೀಡುತ್ತದೆ, ಹಾಗೆಯೇ ವಿಮೆದಾರರಾಗಿರುವ ಮಗು ಸಾವನ್ನಪ್ಪಿದರೆ ಹಣವನ್ನು ಮಗುವಿನ ಕುಟುಂಬಕ್ಕೆ ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಎಲ್‌ಐಸಿ ಯೋಜನೆಯ ಮಾಹಿತಿ

ಎಲ್‌ಐಸಿ ಯೋಜನೆಯ ಮಾಹಿತಿ

ಎಲ್‌ಐಸಿಯ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲ್ಯಾನ್ ಮಗುವಿನ ಭವಿಷ್ಯಕ್ಕೆ ಸುರಕ್ಷತೆಯನ್ನು ನೀಡುತ್ತದೆ. ಈ ಯೋಜನೆಯು ಮಗುವಿಗೆ ಜೀವ ವಿಮೆಯನ್ನು ಒದಗಿಸುತ್ತದೆ. ಜೊತೆಗೆ ಮಗು ಅನಿರೀಕ್ಷಿತವಾಗಿ ಸಾವನ್ನಪ್ಪಿದರೆ ಮಗುವಿನ ಕುಟುಂಬಕ್ಕೆ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಮಗುವಿಗಾಗಿ ನಿಯಮಿತವಾಗಿ ಆದಾಯ ಲಭ್ಯವಾಗುತ್ತದೆ. ಮಗುವಿನ ಶಿಕ್ಷಣ ಹಾಗೂ ಮೂಲಭೂತ ವಸ್ತುಗಳ ಖರೀದಿಗಾಗಿ ನಿಗದಿತ ಸಂದರ್ಭದಲ್ಲಿ ಹಣ ಲಭ್ಯವಾಗಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಮತ್ತು 10(10D) ಅಡಿಯಡಿಯಲ್ಲಿ ಪ್ರೀಮಿಯಂ, ಮೆಚ್ಯೂರಿಟಿ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ವಿಮೆಯ ಅವಧಿ, ಪ್ರೀಮಿಯಂ ಪಾವತಿಗೆ ವಿವಿಧ ಆಯ್ಕೆಗಳಿದೆ. ಹುಟ್ಟಿದ ಮಗುವಿನಿಂದ ಹಿಡಿದು 12 ವರ್ಷದವರೆಗಿನ ಮಗು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

 ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

1. ಈ ಯೋಜನೆಯನ್ನು ನಾವು ಎಲ್‌ಐಸಿ ಏಜೆಂಟ್ ಮತ್ತು ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಖರೀದಿ ಮಾಡಬಹುದು.
2. ಪಾಲಿಸಿದಾರರು ಮಗುವಿನ ವಯಸ್ಸು, ಗುರುತು ಹಾಗೂ ಪೋಷಕರ ಮಾಹಿತಿಯನ್ನು ನೀಡಬೇಕಾಗುತ್ತದೆ.
3. ಹಾಗೆಯೇ ಪ್ರೀಮಿಯಂ ಪಾವತಿ, ಪಾಲಿಸಿ ಅವಧಿಯನ್ನು ಕೂಡಾ ಪಾಲಿಸಿದಾರರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

 ಈ ಯೋಜನೆಯ ಉದಾಹರಣೆ
 

ಈ ಯೋಜನೆಯ ಉದಾಹರಣೆ

ಈ ಯೋಜನೆಯನ್ನು ನಾವು ಉದಾಹರಣೆ ಮೂಲಕ ತಿಳಿಯೋಣ. ಶರ್ಮಾ ಎಂಬ ವ್ಯಕ್ತಿ ತನ್ನ ಪುತ್ರನಿಗೆ ಈ ಯೋಜನೆಯನ್ನು ಖರೀದಿ ಮಾಡಲು ನಿರ್ಧಾರ ಮಾಡಿದ್ದಾರೆ ಎಂದುಕೊಳ್ಳಿ. ಪಾಲಿಸಿ ಅವಧಿಯನ್ನು 20 ವರ್ಷಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ, ಪ್ರೀಮಿಯಂ ಅವಧಿಯಲ್ಲಿ ವಾರ್ಷಿಕ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಅದರಿಂದಾಗಿ ವಾರ್ಷಿಕವಾಗಿ ಶರ್ಮಾ 30 ಸಾವಿರ ರೂಪಾಯಿ ಈ ಯೋಜನೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. 20 ವರ್ಷದ ಬಳಿಕ ಮೆಚ್ಯೂರಿಟಿ ವೇಳೆ ಬಡ್ಡಿದರ ಸೇರ್ಪಡೆಯಾಗಿ ಶರ್ಮಾರಿಗೆ ಒಟ್ಟು 10 ಲಕ್ಷ ರೂಪಾಯಿ ಲಭ್ಯವಾಗಲಿದೆ. ಶರ್ಮಾರ ಪುತ್ರನಿಗೆ 18,20 ಮತ್ತು 22 ವರ್ಷವಾದಾಗ ಮನಿ ಬ್ಯಾಕ್ ಆಗಿ 2,00,000 ರೂಪಾಯಿ ಲಭ್ಯವಾಗುತ್ತದೆ. ಶರ್ಮಾ ಮಗು ಅನಿರೀಕ್ಷಿತವಾಗಿ ಸಾವನ್ನಪ್ಪಿದರೆ ನಾಮಿನಿಗೆ 10 ಲಕ್ಷ ರೂಪಾಯಿ ಲಭ್ಯವಾಗುತ್ತದೆ.

English summary

LIC Plan: Invest as low as Rs 83 Per day, get Rs 10,00,000 at maturity, Here's details

LIC New Children's Money Back Plan: Invest as low as Rs 83 Per day, get Rs 10,00,000 at maturity, Here's details in kannada. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X