ಭಾರತೀಯ ಜೀವ ವಿಮಾ ನಿಗಮದ "ನೂತನ ಎಂಡೋಮೆಂಟ್ ಯೋಜನೆ"ಯೂ ಜನಪ್ರಿಯ ಪಾಲಿಸಿಯಾಗಿದ್ದು ಇದು, ಜೀವ ರಕ್ಷಣೆ ಜೊತೆಗೆ ಉಳಿತಾಯದ ಪ್ರಯೋಜನಗಳನ್ನು ವಿಮೆದಾರರಿಗೆ ನೀಡುತ್ತದೆ. ಈ ಯೋಜನೆಯೂ ಸಾಂಪ್ರದಾಯಿಕ ಎಂಡೋಮೆಂಟ್ ಪಾಲಿಸಿಯಾಗಿದ್ದು, ಖಚಿತವಾದ ಬೋನಸ್ ಮತ್ತು ವಿಮಾ ಮೊತ್ತವನ್ನು ಕೊಡುಗೆಯಾಗಿ ನೀಡುತ್ತದೆ. ಮಾತ್ರವಲ್ಲದೆ ಭವಿಷ್ಯದ ಹಣಕಾಸು ಅಗತ್ಯಗಳನ್ನು ಭದ್ರಪಡಿಸಿಕೊಳ್ಳುವವರಿಗೆ ಇದೊಂದು ಆಕರ್ಷಕ ಹೂಡಿಕೆಯ ಆಯ್ಕೆಯಾಗಿದೆ.
ಈ ಹೊಸ ಎಂಡೋಮೆಂಟ್ ಪ್ಲ್ಯಾನ್‌ನಲ್ಲಿ 12 ಮತ್ತು 35 ವರ್ಷಗಳ ನಡುವಿನ ಅವಧಿಯ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದ್ದು, ಇದರೊಂದಿಗೆ ಲೈಫ್ ಕವರ್ ಮತ್ತು ಉಳಿತಾಯದ ಪ್ರಯೋಜನವನ್ನು ನೀಡುತ್ತದೆ.
ಈ ಯೋಜನೆಯಡಿ ಕನಿಷ್ಟ ವಿಮಾ ಮೊತ್ತ 1 ಲಕ್ಷ ರೂ. ಆಗಿದ್ದು ಗರಿಷ್ಟ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ನಿಯಮಿತವಾಗಿ ಮತ್ತು ಸೀಮಿತವಾಗಿ ಮಾಡುವಂತಹ ಪ್ರೀಮಿಯಂ ಪಾವತಿಗಳ ಆಯ್ಕೆ ಇದರಲ್ಲಿರಲಿದ್ದು, ಪಾಲಿಸಿದಾರರ ಆದಾಯ, ಅನುಕೂಲತೆಗೆ ಹೊಂದಿಕೊಳ್ಳುವಂತಹ ಪಾವತಿಯ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
ಹೊಸ ಎಂಡೋಮೆಂಟ್ ಪ್ಲ್ಯಾನ್ ಪ್ರಯೋಜನಗಳು
"ಹೊಸ ಎಂಡೋಮೆಂಟ್ ಪ್ಲ್ಯಾನ್"ನಲ್ಲಿ ಮತ್ತೊಂದು ಗಮನಾರ್ಹವಾದ ಪ್ರಯೋಜನವೆಂದರೆ, ವಿಮೆದಾರರಿಗೆ ಇದು ಟ್ಯಾಕ್ಸ್ ಬೆನಿಫಿಟ್ಸ್ ಅನ್ನು ನೀಡುತ್ತದೆ. ಆದಾಯ ತೆರಿಗೆಯ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ, ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗಳು 1.5ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿರುತ್ತದೆ. ಇದರೊಂದಿಗೆ ಪಾಲಿಸಿಯಲ್ಲಿ ಪಡೆದ ಮೆಚ್ಯುರಿಟಿ ಮೊತ್ತ ಮತ್ತು ಡೆತ್ ಬೆನಿಫಿಟ್ಸ್‌ಗಳು ಕೂಡಾ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(10D)ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳುತ್ತದೆ.
ಯೋಜನೆಯಲ್ಲಿ ಬೋನಸ್ ಲಭ್ಯ
ಈ ಪಾಲಿಸಿಯಲ್ಲಿ ಇನ್ನೊಂದು ಪ್ರಮುಖವಾದ ಪ್ರಯೋಜನವೆಂದರೆ ಪ್ರತಿ ವರ್ಷ ಘೋಷಿಸಲಾಗುವ ಬೋನಸ್‌ನ್ನು ವಿಮೆದಾರರಿಗೆ ಕೊಡುಗೆಯಾಗಿ ನೀಡುತ್ತದೆ. ಈ ಬೋನಸ್‌ಗಳನ್ನು ಪಾಲಿಸಿಯ ಅವಧಿಯ ಮೇಲೆ ಸಂಗ್ರಹಿಸಿ ಅದನ್ನು ವಿಮಾ ಮೊತ್ತಕ್ಕೆ ಸೇರಿಸಲಾಗುವುದು. ಹೀಗಾಗಿ ಇದು ಹೆಚ್ಚಿನ ಆದಾಯವನ್ನು ಒದಗಿಸಿಕೊಡುತ್ತದೆ. ಇಷ್ಟು ಮಾತ್ರವಲ್ಲ ಪಾಲಿಸಿದಾರರು ಪಾಲಿಸಿಯನ್ನು ಮೆಚ್ಯೂರಿಟಿ ಅವಧಿಯವರೆಗೆ ಮುಂದುವರಿಸಿದರೆ ಹೆಚ್ಚುವರಿಯಾಗಿ ಅವರಿಗೆ ಟರ್ಮಿನಲ್ ಬೋನಸ್ ದೊರಕುತ್ತದೆ. ಇದು ಇತರ ಪ್ರಯೋಜನಗಳ ಜೊತೆಗೆ ನೀಡುವ ದೊಡ್ಡ ಮೊತ್ತದ ಪಾವತಿಯಾಗಿರುತ್ತದೆ.
ಪಾಲಿಸಿ ಖರೀದಿಸುವುದು ಹೇಗೆ?
ಹೊಸ ಎಂಡೋಮೆಂಟ್ ಪ್ಲ್ಯಾನ್ 8 ರಿಂದ 50 ವರ್ಷದ ನಡುವಿನ ಎಲ್ಲರಿಗೂ ಮುಕ್ತವಾಗಿದೆ. ಇನ್ನು ಇದರ ಗರಿಷ್ಟ ಮೆಚ್ಯೂರಿಟಿ ಅವಧಿಯೂ 75 ವರ್ಷಗಳಾಗಿದೆ. ಈ ಪಾಲಿಸಿಯ ಪ್ರಯೋಜನವನ್ನು ಎನ್‌ಆರ್‌ಐಗಳು ಹಾಗೂ ಭಾರತದಲ್ಲಿ ವಾಸವಾಗಿರುವ ವಿದೇಶಿಯರೂ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪಾಲಿಸಿಯನ್ನು ಮಾಡಲು ಅರ್ಜಿದಾರರು, ಅಪ್ಲಿಕೇಷನ್ ಫಾರ್ಮ್ ಜೊತೆಗೆ ಐಡಿ ಪ್ರೊಫ್, ವಯಸ್ಸಿನ ಪುರಾವೆ, ಅಡ್ರೆಸ್ ಪ್ರೊಫ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಹೊಸ ಎಂಡೋಮೆಂಟ್ ಪ್ಲ್ಯಾನ್ ಗಾಗಿ ಆನ್ ಲೈನ್ ಅಥವಾ ನೇರವಾಗಿಯೂ ಅರ್ಜಿ ಸಲ್ಲಿಸಬಹುದುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿದಾರರು ಎಲ್‌ಐಸಿಯ ವೆಬ್‌ಸೈಟ್ ತೆರೆದು ಅಲ್ಲಿ "ಬೈ ಪಾಲಿಸಿ ಆನ್ ಲೈನ್ " ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆ ಬಳಿಕ ವೆಬ್ ಸೈಟ್ ನಲ್ಲಿ ಮಾರ್ಗದರ್ಶನ ನೀಡಿದಂತೆ ಮಾಹಿತಿಗಳನ್ನು ಅರ್ಜಿದಾರರು ತುಂಬಬೇಕಾಗುತ್ತದೆ. ಕೊನೆಗೆ ಖರೀದಿಯ ಹಣ ಪಾವತಿಸಿದ ಬಳಿಕ ಪಾಲಿಸಿ ನೀಡಲಾಗುತ್ತದೆ.
ಉದಾಹರಣೆಯೊಂದಿಗೆ ಮಾಹಿತಿ
ಉದಾಹರಣೆಗೆ 30 ವರ್ಷದ ವ್ಯಕ್ತಿಯೊಬ್ಬ ತನ್ನ ಆರ್ಥಿಕ ಭವಿಷದ ಭದ್ರತೆಗಾಗಿ ಹೊಸ ಎಂಡೋಮೆಂಟ್ ಪ್ಲ್ಯಾನ್ ನಲ್ಲಿ ಹೂಡಿಕೆ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಆತ 10 ಲಕ್ಷ ರೂ. ವಿಮಾ ಮೊತ್ತ ದೊರಕುವ 20 ವರ್ಷ ಮೆಚ್ಯೂರಿಟಿ ಅವಧಿಯನ್ನು ಆಯ್ಕೆ ಮಾಡಿಕೊಂಡು ವಾರ್ಷಿಕ ಪ್ರೀಮಿಯಂ 50,000 ರೂ. ಪಾವತಿಸುತ್ತಾ ಹೋದರೆ, ಆತನಿಗೆ 10 ಲಕ್ಷ ರೂ. ಖಚಿತಪಡಿಸಲಾದ ವಿಮಾ ಮೊತ್ತದ ಜೊತೆಗೆ ಬೋನಸ್ ಮೊತ್ತವೂ ದೊರಕುತ್ತದೆ. ಶೇ. 4ರಷ್ಟು ಬೋನಸ್ ದೊರಕುತ್ತದೆ ಎಂದು ಊಹಿಸಿಕೊಂಡರೂ ಪಾಲಿಸಿಯಲ್ಲಿ ಸಿಗುವ 1.5 ಲಕ್ಷ ರೂ ಟರ್ಮಿನಲ್ ಬೋನಸ್ ಜೊತೆಗೆ 17.2 ಲಕ್ಷ ರೂ. ಮೆಚ್ಯೂರಿಟಿ ಮೊತ್ತ ಲಾಭವಾಗಿ ದೊರಕುತ್ತದೆ. ಇದಲ್ಲದೆ ಒಂದು ವೇಳೆ ಪಾಲಿಸಿದಾರರು ಪಾಲಿಸಿಯ ಅವಧಿಯಲ್ಲಿ ಮೃತಪಟ್ಟರೆ , ಆತನ ನಾಮಿನಿದಾರು ವಿಮಾ ಮೊತ್ತದ ಜೊತೆಗೆ ಸಂಗ್ರಹಿಲ್ಪಟ್ಟ ಬೋನಸ್ ಗಳನ್ನು ಡೆತ್ ಬೆನಿಫಿಟ್ ನಲ್ಲಿ ಪಡೆಯುತ್ತಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications