ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಗ್ರಾಹಕರಿಗೆ ನೂತನ ಮತ್ತು ಲಾಭದಾಯಕ ಪಾಲಿಸಿಗಳನ್ನು ಪರಿಚಯಿಸುವಲ್ಲಿ ಹೆಸರುವಾಸಿಯಾಗಿದೆ. "ಎಲ್ಐಸಿ ಜೀವನ್ ಸರಳ್" ಯೋಜನೆ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳು ಈಗಾಗಲೇ ಗ್ರಾಹಕರ ಮನಗೆದ್ದಿದೆ. ಇಂತಹ ಯೋಜನೆಗಳು ಗ್ರಾಹಕರ ಮತ್ತು ಅವರ ಕುಟುಂಬಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ಹಲವು ಪ್ರಯೋಜನೆಗಳನ್ನು ನೀಡುತ್ತದೆ. ಹಾಗಿದ್ರೆ "ಎಲ್ಐಸಿ ಜೀವನ್ ಸರಳ್ ಯೋಜನೆ"ಯ ವಿವರಗಳನ್ನು ತಿಳಿಯೋಣ.
ಜೀವನ್ ಸರಳ್ ಯೋಜನೆಯಲ್ಲಿ ಉಳಿತಾಯ ಮತ್ತು ಜೀವ ರಕ್ಷಣೆಯ ಎರಡು ಉದ್ದೇಶಗಳನ್ನು ಹೊಂದಿದ್ದು, ಆಕಾಲಿಕ ಮೃತ್ಯುವಿನ ಸಂದರ್ಭದಲ್ಲಿ ಇದು ಪಾಲಿಸಿದಾರನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ಈ ಪಾಲಿಸಿಯ ಮುಖ್ಯವಾದ ಬೆನಿಫಿಟ್ ಆಗಿದೆ. ವಿಮಾ ಮೊತ್ತದ ಜೊತೆಗೆ ಅನ್ವಯವಾಗುವ ಯಾವುದೇ ಟರ್ಮಿನಲ್ ಬೋನಸ್‌ಗಳು ಮತ್ತು ರಿವರ್ಷನರಿ ಬೋನಸ್ ಗಳು ಇದ್ದರೂ ಇದು ಡೆತ್ ಬೆನಿಫಿಟ್‌ಗೆ ಸೇರ್ಪಡೆಗೊಳ್ಳುತ್ತದೆ. ಇದರಿಂದಾಗಿ ಪಾಲಿಸಿದಾರರ ಅನುಪಸ್ಥಿತಿಯಲ್ಲೂಅವರ ಕುಟುಂಬ ಆರ್ಥಿಕ ಭದ್ರತೆಯನ್ನು ಹೊಂದಿರುತ್ತದೆ.

ಪ್ರೀಮಿಯಂ ಪಾವತಿಗಳನ್ನು ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಬಹುದಾಗಿದ್ದು, ಹೀಗಾಗಿ ಇದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಪಾಲಿಸಿದಾರರು ತಮ್ಮ ಅನುಕೂಲತೆಗೆ ತಕ್ಕಂತೆ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪ್ರೀಮಿಯಂ ಪಾವತಿಗಳನ್ನು ಆರಿಸಿಕೊಳ್ಳಬಹುದಾಗಿದೆ. ಎಲ್ಐಸಿ ಜೀವನ್ ಸರಳ್ ಯೋಜನೆಯೂ ನಿಮಗೆ ಸ್ಥಿರ ಆದಾಯವನ್ನು ನೀಡುತ್ತದೆ. ಈ ಯೋಜನೆಯ ಮೂಲಕ ನೀವು ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕವಾಗಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಇದರಲ್ಲಿ ಹಲವು ವಿಧದ ಪಾವತಿ ಆಯ್ಕೆಗಳು ಹೊಂದಿದ್ದು 40 ರಿಂದ 80ರ ನಡುವಿನ ವಯೋಮಿತಿಯ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಪ್ರೀಮಿಯಂನ್ನು ಒಂದು ದೊಡ್ಡ ಮೊತ್ತದಲ್ಲಿ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ಒಂದು ವೇಳೆ ಓರ್ವ ವ್ಯಕ್ತಿ 20 ಲಕ್ಷ ರೂಪಾಯಿಗಳನ್ನು ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ ಆಕೆ/ಆತ ವಾರ್ಷಿಕವಾಗಿ 1,24,000 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಹೀಗಾಗಿ ಯಾವುದೇ ವ್ಯಕ್ತಿ ಮಾಸಿಕವಾಗಿ 12,000 ರೂಪಾಯಿವರೆಗೆ ಪಿಂಚಣಿ ಪಡೆಯಬಹುದಾಗಿದೆ. ಎಲ್ಐಸಿ ಜೀವನ್ ಸರಳ್ ಯೋಜನೆಯಲ್ಲಿ ಕನಿಷ್ಟ 1,000 ರೂಪಾಯಿ ಪಿಂಚಣಿ ಪಡೆದುಕೊಳ್ಳುವುದು ಅವಶ್ಯಕವಾಗಿದೆ
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications