ನಾವು ನಮ್ಮ ಭವಿಷ್ಯದ ಹಣಕಾಸು ಸುರಕ್ಷತೆಗಾಗಿ ಈಗಲೇ ಹೂಡಿಕೆ ಮಾಡಲು ಆರಂಭಿಸುವುದು ಅತೀ ಮುಖ್ಯ. ಪ್ರಸ್ತುತ ಜಾಗತಿಕವಾಗಿ ಹಣಕಾಸು ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ಯಾವುದೇ ಸರಿಯಾದ ಕ್ರಮ ಕೈಗೊಳ್ಳಲಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಬಿಕ್ಕಟ್ಟು ಹೆಚ್ಚಳವಾಗಲಿದೆ. ಅದಕ್ಕೆಲ್ಲ ನಾವು ಸಿದ್ಧವಾಗಿರುವುದು ಮುಖ್ಯ. ಹಾಗೆಯೇ ನಾವು ಯುವಕರಾಗಿರುವಾಗಲೇ ನಮ್ಮ ನಿವೃತ್ತಿ ಜೀವನ ಅಥವಾ ವೃದ್ಧಾಪ್ಯ ಜೀವನಕ್ಕಾಗಿ ಹಣ ಉಳಿತಾಯ ಮಾಡುವುದು ಮುಖ್ಯ. ಅದಕ್ಕಾಗಿ ಭಾರತೀಯ ಜೀವ ವಿಮಾ ನಿಗಮ ಹಲವಾರು ಹಿರಿಯ ನಾಗರಿಕರ ಯೋಜನೆಗಳನ್ನು ಜಾರಿ ಮಾಡಿದೆ.
ಎಲ್‌ಐಸಿ ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತದೆ. ಹಿರಿಯ ನಾಗರಿಕರಿಗಾಗಿ ಎಲ್‌ಐಸಿ ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಹಿರಿಯ ನಾಗರಿಕರಿಗೆ ಬೇರೆ ಎಲ್ಲ ವರ್ಗಗಳಿಗಿಂತ ಅಧಿಕ ಹಣಕಾಸು ಬೆಂಬಲ ಮುಖ್ಯವಾಗುತ್ತದೆ. ವಯಸ್ಸಾದವರು ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ ಪಿಂಚಣಿಯನ್ನು ಪಡೆಯಲು ಸಾಧ್ಯವಿದೆ. ಹಾಗೆಯೇ ಅದರಿಂದಲೇ ತಮ್ಮ ಖರ್ಚನ್ನು ನಿಭಾಯಿಸಬಹುದಾಗಿದೆ. ಹಾಗಾದರೆ 2023ರಲ್ಲಿ ಎಲ್‌ಐಸಿ ಹಿರಿಯ ನಾಗರಿಕರಿಗೆ ಯಾವೆಲ್ಲ ಯೋಜನೆಗಳನ್ನು ಹೊಂದಿದೆ ಎಂದು ತಿಳಿಯೋಣ ಮುಂದೆ ಓದಿ...
ಪ್ರಧಾನ ಮಂತ್ರಿ ವಯ ವಂದನ ಯೋಜನೆ
ವಿಮೆಯನ್ನು ಉದ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಬಳಕೆ ಮಾಡಲಾಗುತ್ತದೆ. ಬಹುತೇಕ ಉದ್ಯೋಗಿಗಳು ವಿಮೆಯನ್ನು ಮಾಡಿಕೊಂಡಿದ್ದಾರೆ. ವಿಮೆಯು ನಮ್ಮ ತುರ್ತು ಆರೋಗ್ಯ ಸ್ಥಿತಿ ಉಂಟಾದಾಗ, ಮಕ್ಕಳ ಶಿಕ್ಷಣಕ್ಕಾಗಿ ಮತ್ತು ವಿವಾಹದ ಖರ್ಚಿಗಾಗಿ ಸಹಾಯವಾಗುತ್ತದೆ. ಅಂತಹ ಹಿರಿಯ ನಾಗರಿಕರಿಗಾಗಿ ಇರುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆ 2017ರಲ್ಲಿ ಆರಂಭವಾಗಿದೆ. ಮಾರ್ಚ್ 31, 2023ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯು ಶೇಕಡ 7.4ರಷ್ಟು ಬಡ್ಡಿದರವನ್ನು ನೀಡುತ್ತದೆ.
ಯೋಜನೆಯ ಇತರೆ ಮಾಹಿತಿ
* ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಆಧಾರದಲ್ಲಿ ಪಿಂಚಣಿ ಪಾವತಿ.
* ಪಾವತಿಗಾಗಿ ಆಧಾರ್ ಬಳಕೆ, ನೆಫ್ಟ್ (NEFT) ಮೂಲಕ ಪಾವತಿ.
* ಈ ಯೋಜನೆಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
* ಮೂರು ವರ್ಷದ ಬಳಿಕ ಈ ಯೋಜನೆಯಲ್ಲಿ ರದ್ದು ಮಾಡಬಹುದು ಅಥವಾ ಹಣ ವಿತ್‌ಡ್ರಾ ಮಾಡಬಹುದು.
* ವಿಮಾ ಖರೀದಿ ಮೊತ್ತದ ಶೇಕಡ 75ರಷ್ಟು ಮೊತ್ತವನ್ನು ವಿಮೆಯ ಆಧಾರದಲ್ಲಿ ಸಾಲವಾಗಿ ಪಡೆಯಬಹುದು. ಯೋಜನೆ ಖರೀದಿಸಿ 3 ವರ್ಷವಾದ ಬಳಿಕ ಮಾತ್ರ ಸಾಲ ಪಡೆಯಲು ಅವಕಾಶ.
* ಪಾಲಿಸಿದಾರರು ಅಥವಾ ಅವರ ಪತ್ನಿ/ಪತಿಗೆ ಅನಾರೋಗ್ಯವಾದ ವಿಮೆಯನ್ನು ವಿತ್‌ಡ್ರಾ ಮಾಡಬಹುದು. ಖರೀದಿ ಮೊತ್ತದ ಶೇಕಡ 98ರಷ್ಟು ಮರುಪಾವತಿ ಮಾಡಲಾಗುತ್ತದೆ.
* ಪಾಲಿಸಿ ಅವಧಿ ಮುಕ್ತಾಯದವರೆಗೂ ಪಾಲಿಸಿದಾರರು ಬದುಕಿದ್ದರೆ, ಒಟ್ಟು ಮೊತ್ತದೊಂದಿಗೆ ಕೊನೆಯ ಪಿಂಚಣಿಯನ್ನು ನೀಡಲಾಗುತ್ತದೆ.
* ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ, ನಾಮಿನಿಗಳಿಗೆ ಪಾಲಿಸಿ ಖರೀದಿ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
ಅರ್ಹತೆ: ಕನಿಷ್ಠ 60 ವರ್ಷವಾಗಿರಬೇಕು, ಗರಿಷ್ಠ ವಯಸ್ಸಿನ ಮಿತಿಯಿಲ್ಲ, ಹತ್ತು ವರ್ಷದ ಪಾಲಿಸಿ ಅವಧಿಗೆ 1000 ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ. ಗರಿಷ್ಠ ಮಾಸಿಕ ಪಿಂಚಣಿ 9250 ರೂಪಾಯಿ ಆಗಿದೆ.
ಎಲ್‌ಐಸಿ ಹೊಸ ಜೀವನ ಶಾಂತಿ
ಎಲ್‌ಐಸಿಯ ಹೊಸ ಜೀವನ ಶಾಂತಿ ಯೋಜನೆಯು ಸಿಂಗಲ್ ಪ್ರೀಮಿಯಂ ಆನ್ಯೂಟಿ (ಏಕ ಪ್ರೀಮಿಯಂ) ಯೋಜನೆಯಾಗಿದೆ. ಈ ಯೋಜನೆಯಲ್ಲಿ ಒಂದು ಬಾರಿ ಮಾತ್ರ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಒಂದು ಬಾರಿಗೆ ಅಧಿಕ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ನಿಗದಿತ ಅವಧಿಯ ಬಳಿಕ ರಿಟರ್ನ್ ಲಭ್ಯವಾಗುತ್ತದೆ. ಯಾರಲ್ಲಿ ಕೈಯಲ್ಲಿ ಅಧಿಕ ಮೊತ್ತವಿರುತ್ತದೆಯೋ ಅವರಿಗೆ ಈ ಯೋಜನೆ ಉತ್ತಮ.
ಯೋಜನೆಯ ಇತರೆ ಮಾಹಿತಿ
* ಯಾವುದೇ ಸಂದರ್ಭದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದಾಗಿದೆ.
* ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಆನ್ಯೂಟಿ ಪಾವತಿಸಲಾಗುತ್ತದೆ.
* ವಾರ್ಷಿಕವಾಗಿ ಆನ್ಯೂಟಿಯನ್ನು ಪಾವತಿಸದಿದ್ದರೆ, ಮೌಲ್ಯವು ಕಡಿಮೆಯಾಗಲಿದೆ. ಅರ್ಧವಾರ್ಷಿಕವಾಗಿ ಆನ್ಯೂಟಿ ಪಾವತಿಸಿದರೆ ಮೌಲ್ಯ ಶೇ.2ರಷ್ಟು ಇಳಿಯುತ್ತದೆ. ತ್ರೈಮಾಸಿಕವಾಗಿ ಪಾವತಿಸಿದರೆ ಶೇಕಡ 3ರಷ್ಟು ಕಡಿತವಾಗುತ್ತದೆ. ಮಾಸಿಕವಾಗಿ ಪಾವತಿಸಿದರೆ ಶೇ.4ರಷ್ಟು ಕಡಿತವಾಗಲಿದೆ.
* ಪಾಲಿಸಿದಾರರು 12 ತಿಂಗಳ ಬಳಿಕ (ಪಾಲಿಸಿ ಹಿಂಪಡೆಯಲು ಅವಕಾಶವಿರುವ ಸಂದರ್ಭ ಕಳೆದ ಬಳಿಕ) ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
* ಡೆತ್ ಬೆನಿಫಿಕ್ ಪಾಲಿಸಿ ಖರೀದಿ ಮೊತ್ತದ ಶೇಕಡ 105ರಷ್ಟು ಅಥವಾ ಖರೀದಿ ಮೊತ್ತ ಹಾಗೂ ಇತರೆ ಪ್ರಯೋಜನಗಳು ಸೇರಿ ಲಭ್ಯವಾಗಲಿದೆ.
ಅರ್ಹತೆ: ಪಾಲಿಸಿ ಪ್ರಯೋಜನ ಲಭ್ಯವಿಲ್ಲದ ವಯಸ್ಸು 31-80, ಪಾಲಿಸಿ ಖರೀದಿಗೆ ಅರ್ಹ ವಯಸ್ಸು 30 -79 ಆಗಿದೆ. 1,50,000 ರೂಪಾಯಿ ಪಾಲಿಸಿಯ ಕನಿಷ್ಠ ಖರೀದಿ ಮೊತ್ತ, ಈ ಯೋಜನೆಯಲ್ಲಿ ಗರಿಷ್ಠ ಖರೀದಿ ಮೊತ್ತ ನಿರ್ಬಂಧವಿಲ್ಲ.
ಎಲ್‌ಐಸಿ ಜೀವನ ಅಕ್ಷಯ್ - VII
* ಎಲ್‌ಐಸಿ ಜೀವನ ಅಕ್ಷಯ್ ಪಾಲಿಸಿ ಒಂದು ಸಿಂಗಲ್ ಪ್ರೀಮಿಯಂ ಯೋಜನೆಯಾಗಿದೆ.
* 30 ದಿನಗಳ ಫ್ರೀ ಲುಕ್ (ಪಾಲಿಸಿ ಖರೀದಿ ಮಾಡಿದ ಬಳಿಕ ಪಾಲಿಸಿ ಹಿಂಪಡೆಯಲು ಅವಕಾಶವಿರುವ ಸಮಯ) ಅವಧಿ ಇದೆ. ಅದಕ್ಕೆ ಷರತ್ತುಗಳು ಇದೆ.
* ಮೂರು ತಿಂಗಳ ಬಳಿಕ ಅಥವಾ ಫ್ರೀ ಲುಕ್ ಅವಧಿ ಮುಕ್ತಾಯದ ಬಳಿಕ ವಿಮೆಯ ಮೇಲೆ ಸಾಲವನ್ನು ಪಡೆಯಲು ಅವಕಾಶವಿದೆ. (ಯಾವುದು ತಡವಾಗಿ ಬರುವ ಅವಧಿಯೋ ಅದನ್ನು ಆಯ್ಕೆ ಮಾಡಲಾಗುತ್ತದೆ)
* ಆನ್ಯೂಟಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಪಾವತಿಸಲಾಗುತ್ತದೆ.
ಅರ್ಹತೆ: 30ರಿಂದ 85 ವರ್ಷದೊಳಗಿನವರು ಪಾಲಿಸಿ ಖರೀದಿ ಮಾಡಬಹುದು. ಕನಿಷ್ಠ ಪಾಲಿಸಿ ಖರೀದಿ ಮೊತ್ತ 1,000,000 (10 ಲಕ್ಷ ರೂ.) ರೂಪಾಯಿ ಆಗಿದೆ. ಯಾವುದೇ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಕನಿಷ್ಠ ಆನ್ಯೂಟಿ ಮಾಸಿಕ 1 ಸಾವಿರ ರೂಪಾಯಿ, ತ್ರೈಮಾಸಿಕವಾಗಿ 3000 ರೂಪಾಯಿ, ಅರ್ಧ ವಾರ್ಷಿಕವಾಗಿ 6000 ರೂಪಾಯಿ, ವಾರ್ಷಿಕವಾಗಿ 12000 ರೂಪಾಯಿ ಆಗಿದೆ.


Click it and Unblock the Notifications