ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಳೆಯ ವಿಮಾ ಪಾಲಿಸಿಯನ್ನು ಮತ್ತೆ ಆರಂಭ ಮಾಡುವ ಅಭಿಯಾನವನ್ನು ಆರಂಭ ಮಾಡಿದೆ. ಮೆಚ್ಯೂರಿಟಿಗೂ ಮುನ್ನ ಕ್ಲೋಸ್ ಆದ ಹಳೆಯ ಪಾಲಿಸಿಯನ್ನು ಮತ್ತೆ ರಿಸ್ಟಾರ್ಟ್ ಮಾಡುವ ಅವಕಾಶವನ್ನು ಎಲ್‌ಐಸಿಯು ನೀಡಿದೆ. ಹೇಗೆ ಆರಂಭ ಮಾಡುವುದು ಎಂದು ಇಲ್ಲಿದೆ ನೋಡಿ...
ಈ ಅಭಿಯಾನವು ಫೆಬ್ರವರಿ 1ರಿಂದ ಮಾರ್ಚ್ 24ರವರೆಗೆ ನಡೆಯಲಿದೆ. ಯಾವುದೇ ಕಾರಣದಿಂದಾಗಿ ತಮ್ಮ ಎಲ್‌ಐಸಿ ಪಾಲಿಸಿಯನ್ನು ಕ್ಲೋಸ್ ಮಾಡಿದ್ದರೆ ಮತ್ತೆ ಆರಂಭ ಮಾಡುವ ಅವಕಾಶವನ್ನು ಎಲ್‌ಐಸಿ ನೀಡಿದೆ. ಅಭಿಯಾನದ ಸಂದರ್ಭದಲ್ಲಿ ಪ್ರೀಮಿಯಂ ತಡವಾದ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಹಾಗೆಯೇ ತಡವಾದ ಶುಲ್ಕ ಮತ್ತು ಪ್ರೀಮಿಯಂ ಮೇಲೆ ರಿಯಾಯಿತಿ ಇದೆ.
ತಡವಾದ ಶುಲ್ಕಕ್ಕೆ ಶೇಕಡ 25ರವರೆಗೆ ಅಂದರೆ ಸುಮಾರು ಒಂದು ಲಕ್ಷ ರೂಪಾಯಿವರೆಗೆ ಪಾಲಿಸಿದಾರರಿಗೆ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಪ್ರೀಮಿಯಂ ಮೇಲೆ 3 ಲಕ್ಷ ರೂಪಾಯಿವರೆಗೆ ರಿಯಾಯಿತಿ ಲಭ್ಯವಾಗಲಿದೆ. ಮೂರು ಲಕ್ಷಕ್ಕೂ ಅಧಿಕ ಪ್ರೀಮಿಯಂಗೆ ಶೇಕಡ 30ರಷ್ಟು ವಿನಾಯಿತಿ ಲಭ್ಯವಾಗಲಿದೆ.

5 ರೂಪಾಯಿ ತಡವಾದ ಶುಲ್ಕ ಪಾವತಿ
ನೀವು ಪ್ರೀಮಿಯಂ ಪಾವತಿ ಮಾಡದ ದಿನದಿಂದ ಐದು ವರ್ಷದವರೆಗೆ ನೀವು ಪಾಲಿಸಿಯನ್ನು ಪಡೆಯಲು ಸಾಧ್ಯವಾಗಲಿದೆ. NACH ಮತ್ತು BILL Pay ರಿಜಿಸ್ಟರ್ ಆದ ಪಾಲಿಸಿಯಡಿಯಲ್ಲಿ ಅರ್ಹರು ವಿಶೇಷ ಆಫರ್ ಅನ್ನು ಹೊಂದಿದ್ದಾರೆ. ತಡವಾದ ಶುಲ್ಕವಾಗಿ 5 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ಪ್ರೀಮಿಯಂ ಅನ್ನು ನೀವು ಎಲ್‌ಐಸಿ ಕಚೇರಿಯ ಮೂಲಕ ಆನ್‌ಲೈನ್ ಮೂಲಕ ಪಾವತಿ ಮಾಡಬಹುದು ಅಥವಾ ಏಜೆಂಟ್‌ಗಳ ಮೂಲಕ ಪಾವತಿ ಮಾಡಬಹುದು.
ಟರ್ಮ್ ಇನ್ಶುರೆನ್ಸ್, ಆರೋಗ್ಯ ವಿಮೆ, ಹಲವಾರು ರಿಸ್ಕ್‌ಗಳು ಇರುವ ಪಾಲಿಸಿಯು ಈ ಪಾಲಿಸಿ ಅಭಿಯಾನದಲ್ಲಿ ಅರ್ಹತೆಯನ್ನು ಹೊಂದಿರುವುದಿಲ್ಲ. ಪ್ರೀಮಿಯಂ ಪಾವತಿ ಅವಧಿಯಲ್ಲಿ ಲ್ಯಾಪ್ಸ್ ಆದ ಪಾಲಿಸಿ, ಮೆಚ್ಯೂರಿಟಿ ಅವಧಿ ಇನ್ನೂ ಮುಗಿದಿಲ್ಲ ಎಂದಾದರೆ, ಮತ್ತೆ ಪಾಲಿಸಿಯನ್ನು ಆರಂಭ ಮಾಡುವ ಅವಕಾಶ ಇರುತ್ತದೆ. ಎಲ್‌ಐಸಿ ಎಲ್ಲ ಕ್ಯಾಟೆಗರಿಗಳಿಗೆ ಎಲ್‌ಐಸಿ ಪ್ಲ್ಯಾನ್ ಅನ್ನು ಆಫರ್ ಮಾಡುತ್ತದೆ. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಪಾಲಿಸಿಯು ಬರೀ ಸುರಕ್ಷತೆಯನ್ನು ನೀಡುವುದು ಮಾತ್ರವಲ್ಲ, ಉಳಿತಾಯ ಮಾಡಲು ಅವಕಾಶ ನೀಡುತ್ತದೆ.
ಮೆಚ್ಯೂರಿಟಿಗೂ ಮುನ್ನ ಪಾಲಿಸಿದಾರರು ತಮ್ಮ ಪಾಲಿಸಿಯನ್ನು ಕ್ಲೋಸ್ ಮಾಡಿದ್ದರೆ, ಎಲ್‌ಐಸಿಯು ಪಾಲಿಸಿದಾರರಿಗೆ ಮತ್ತೆ ತಮ್ಮ ಪ್ಲ್ಯಾನ್ ಮತ್ತೆ ಆರಂಭಿಸಲು ಅವಕಾಶ ನೀಡುತ್ತದೆ. ರಿಯಾಯಿತಿ ಶುಲ್ಕ ಪಾವತಿ ಮಾಡಿ, ರಿಯಾಯಿತಿ ಪ್ರೀಮಿಯಂ ಅನ್ನು ಪಾವತಿಸಿ ಪಾಲಿಸಿಯನ್ನು ಮತ್ತೆ ಆರಂಭ ಮಾಡುವ ಅವಕಾಶ ಲಭ್ಯವಾಗುತ್ತದೆ. ಪಾಲಿಸಿದಾರರು ಈ ಆಫರ್‌ನ ಅವಕಾಶವನ್ನು ಪಡೆಯಬಹುದು, ತಮ್ಮ ಪಾಲಿಸಿಯನ್ನು ಮತ್ತೆ ಆರಂಭ ಮಾಡಬಹುದು.


Click it and Unblock the Notifications