ನಮ್ಮ ವೃದ್ಧಾಪ್ಯದಲ್ಲಿ ನಾವು ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುವುದು ಪಿಂಚಣಿ. ಆದರೆ ಮಾಸಿಕವಾಗಿ ಸ್ವಲ್ಪವೇ ಪಿಂಚಣಿ ಇದ್ದರೆ ನಮಗೆ ಸಾಕಾಗುತ್ತದೆಯೇ? ಅದಕ್ಕಾಗಿ ಹೆಚ್ಚು ಪಿಂಚಣಿ ಪಡೆದರೆ ಉತ್ತಮವಲ್ಲವೇ, ನೀವು ವಾರ್ಷಿಕವಾಗಿ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು ಎಂಬುದುದು ಇಲ್ಲಿದೆ.
ದೇಶದಲ್ಲಿ ಉತ್ತಮ ಪಿಂಚಣಿ ಯೋಜನೆ ಎಲ್‌ಐಸಿಯ ಪಿಂಚಣಿ ಯೋಜನೆಯಾಗಿದೆ. ಆಗಸ್ಟ್ 2022ರಲ್ಲಿ ಭಾರತದ ಜೀವ ವಿಮಾ ನಿಗಮವು (ಎಲ್‌ಐಸಿ) ಪ್ರಾರಂಭಿಸಿರುವ ವೈಯಕ್ತಿಕ ತ್ವರಿತ ವರ್ಷಾಶನ ಯೋಜನೆಯು ಲಿಂಕ್ ಮಾಡದ ಯೋಜನೆಯಾಗಿದೆ. ಇದು ಏಕ ಪ್ರೀಮಿಯಂ ಯೋಜನೆಯಾಗಿದೆ.
ಇದು ವರ್ಷಾಶನ ಯೋಜನೆಯಾಗಿದ್ದು, ಯೋಜನೆಯ ಪ್ರಾರಂಭದೊಂದಿಗೆ ಸುಮಾರು 5 ಪ್ರತಿಶತದಷ್ಟು ವರ್ಷಾಶನ ಪಡೆಯಬಹುದು. ಈ ಎಲ್‌ಐಸಿ ಯೋಜನೆಯಡಿಯಲ್ಲಿ, ಪಾಲಿಸಿಯನ್ನು ಹೊಂದಿರುವವರು ಜೀವಂತವಾಗಿರುವವರೆಗೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಯನ್ನು ಆಯ್ಕೆ ಮಾಡುವ ಆಯ್ಕೆ ಇರುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಅರ್ಹತಾ ಮಾನದಂಡ ಏನಿದೆ?
40 ವರ್ಷ ವಯಸ್ಸಿನಿಂದ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಎಲ್ಐಸಿ ಸರಳ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಸರಳ ಪಿಂಚಣಿ ಯೋಜನೆ ಅಡಿಯಲ್ಲಿ ಕನಿಷ್ಠ ಮಾಸಿಕ ವರ್ಷಾಶನ ಅಥವಾ ಪಿಂಚಣಿ ರೂಪಾಯಿ ಸಾವಿರ ಆಗಿದೆ. ಅರ್ಹರು ಕನಿಷ್ಠ ಹೂಡಿಕೆಯನ್ನು ಮಾಡಿ ರೂಪಾಯಿ 1000 ಮಾಸಿಕ ವರ್ಷಾಶನ ಅಥವಾ ರೂ 12000 ವಾರ್ಷಿಕ ವರ್ಷಾಶನವನ್ನು ಪಡೆಯಲು ಸಾಧ್ಯವಾಗಲಿದೆ.
ಪಿಂಚಣಿ ಲೆಕ್ಕಾಚಾರ ಹೇಗೆ ನೋಡಿ
ಎಲ್‌ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯು ಸುಮಾರು ಶೇಕಡ 5ರಷ್ಟು ಲಾಭವನ್ನು ನೀಡುತ್ತದೆ. 41 ನೇ ವಯಸ್ಸಿನಲ್ಲಿ, ನೀವು ಒಮ್ಮೆ ಪಿಂಚಣಿ ಯೋಜನೆಯಲ್ಲಿ ರೂ 2.5 ಲಕ್ಷವನ್ನು ಹೂಡಿಕೆ ಮಾಡಿದರೆ, ನೀವು ಪ್ರತಿ ವರ್ಷ ರೂ 12,300 ಅಥವಾ ಪ್ರತಿ ತಿಂಗಳು ರೂ 1,025 ಪಿಂಚಣಿ ಪಡೆಯುತ್ತೀರಿ. 3 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 14,760 ರೂಪಾಯಿ ಅಥವಾ ತಿಂಗಳಿಗೆ 1,195 ರೂಪಾಯಿಗಳ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ. ನೀವು ಒಂದೇ ಬಾರಿಗೆ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮೊದಲ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,950 ರೂಪಾಯಿಗಳನ್ನು ಮತ್ತು ಎರಡನೇ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,250 ರೂಪಾಯಿ ಪಿಂಚಣಿಯನ್ನು ಪಡೆಯುತ್ತೀರಿ. ನೀವು ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ಪಿಂಚಣಿ ಪಡೆಯಬೇಕಾದರೆ ನೀವು 20 ಲಕ್ಷ ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.
ಎಲ್‌ಐಸಿ ಸರಳ ಪಿಂಚಣಿಯ ಪ್ರಾಮುಖ್ಯತೆ
ಸಾಲದ ಪ್ರಯೋಜನ: ಪ್ರಾರಂಭದ ಆರು ತಿಂಗಳ ಪೂರ್ಣಗೊಂಡ ನಂತರ, ಈ LIC ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಲಭ್ಯವಿದೆ.
ಎಕ್ಸಿಟ್ ಪ್ಲ್ಯಾನ್: ಪ್ರಾರಂಭವಾದ ಆರು ತಿಂಗಳ ನಂತರ ಎಲ್ಐಸಿ ಸರಳ ಪಿಂಚಣಿ ಯೋಜನೆಯನ್ನು ಬಿಡಬಹುದು.
ಬಡ್ಡಿದರ ಎಷ್ಟಿದೆ?: ವರ್ಷಾಶನ ಯೋಜನೆಯು ಸುಮಾರು 5 ಪ್ರತಿಶತದಷ್ಟು ವಾರ್ಷಿಕ ಬಡ್ಡಿದರವನ್ನು ನೀಡುತ್ತದೆ.
ಜೀವಮಾನದ ಪಿಂಚಣಿ ಪ್ರಯೋಜನ: ಎಲ್‌ಐಸಿ ಸರಳ ಪಿಂಚಣಿ ಯೋಜನೆಯು ಸಂಪೂರ್ಣ ಜೀವನ ಪಾಲಿಸಿಯಾಗಿದೆ. ಅಂದರೆ ಪಾಲಿಸಿದಾರರು ಪ್ರಾರಂಭದ ನಂತರ ಸಂಪೂರ್ಣ ಜೀವನಕ್ಕೆ ವಾರ್ಷಿಕ ಅಥವಾ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.
ನಾಮಿನಿಗೆ ಮರಣದ ಲಾಭ: ಎಲ್‌ಐಸಿ ಸರಳ ಪಿಂಚಣಿ ಯೋಜನೆ ಚಂದಾದಾರರ ಮರಣದ ನಂತರ, ಮೂಲ ಪ್ರೀಮಿಯಂ ಅನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ಮೆಚ್ಯೂರಿಟಿ ಪ್ರಯೋಜನವೇನು: ಎಲ್‌ಐಸಿ ಸರಳ ಯೋಜನೆ ಪಾಲಿಸಿದಾರರು ಜೀವಂತವಾಗಿರುವವರೆಗೆ ಪಿಂಚಣಿ ಲಭ್ಯವಾಗುವುದರಿಂದ ಯಾವುದೇ ಮೆಚ್ಯೂರಿಟಿ ಪ್ರಯೋಜನವಿಲ್ಲ.


Click it and Unblock the Notifications