For Quick Alerts
ALLOW NOTIFICATIONS  
For Daily Alerts

3 ಲಕ್ಷ ರೂಪಾಯಿ ಹೂಡಿಕೆ ಮಾಡಿ 14 ಸಾವಿರ ಪಿಂಚಣಿ ಪಡೆಯಿರಿ!

|

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ ಅನ್ನು ಹೊಂದಿರುವ ಹೂಡಿಕೆಯಾಗಿದೆ. ಹಾಗೆಯೇ ಲಿಂಕ್ಡ್ ಯೋಜನೆಯಲ್ಲ. ಜಾಲ್ತಿಯಲ್ಲಿದ್ದ ಯೋಜನೆಯಲ್ಲಿ ಕೆಲವು ಅಪ್‌ಡೇಟ್, ಬದಲಾವಣೆಯನ್ನು ಮಾಡಿದ ಬಳಿಕ ಈ ವರ್ಷದ ಆಗಸ್ಟ್‌ನಲ್ಲಿ ಎಲ್‌ಐಸಿಯ ಸರಳ ಪಿಂಚಣಿ ಯೋಜನೆ ಸಂಖ್ಯೆ 862 ಅನ್ನು ಪರಿಚಯಿಸಲಾಯಿತು.

 

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಾವಳಿಗಳ ಪ್ರಕಾರ, ಈ ಸಾಂಪ್ರದಾಯಿಕ ತಕ್ಷಣ ವರ್ಷಾಶನ ಒದಗಿಸುವ ಯೋಜನೆಯು ಒಂದು ದೊಡ್ಡ ಮೊತ್ತದ ಪಾವತಿಯ ಮೇಲೆ ವರ್ಷಾಶನದ ಪ್ರಕಾರವನ್ನು ಎರಡು ಪ್ರಕಾರವಾಗಿ ಆಯ್ಕೆ ಮಾಡಲು ಪಾಲಿಸಿದಾರರಿಗೆ ಅವಕಾಶವನ್ನು ನೀಡುತ್ತದೆ.

ಎನ್‌ಪಿಎಸ್ ಖಾತೆ: ಹಣ ವಿತ್‌ಡ್ರಾ, ಪ್ರಯೋಜನ, ಸಂಪೂರ್ಣ ಮಾಹಿತಿಎನ್‌ಪಿಎಸ್ ಖಾತೆ: ಹಣ ವಿತ್‌ಡ್ರಾ, ಪ್ರಯೋಜನ, ಸಂಪೂರ್ಣ ಮಾಹಿತಿ

ಪಾಲಿಸಿಯ ಪ್ರಾರಂಭವು ವರ್ಷಾಶನ ದರಗಳನ್ನು ಖಾತರಿಪಡಿಸುತ್ತದೆ. ವರ್ಷಾಶನದಾರರ ಜೀವನ ಪೂರ್ತಿ ಪಾವತಿಗಳನ್ನು ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಎರಡು ವರ್ಷಾಶನ ಆಯ್ಕೆಗಳು ಇದೆ. ಅದುವೇ ಜಾಯಿಂಟ್ ಲೈಫ್ ಲಾಸ್ಟ್ ಸರ್ವೈವರ್ ಆನ್ಯುಟಿ ಜೊತೆಗೆ ಎಲ್ಲ ಸರ್ವವೈರ್‌ಗಳ ಮರಣದ ಮೇಲಿನ ಖರೀದಿ ಬೆಲೆಯ ಶೇಕಡ 100ರಷ್ಟು, ಜೀವನ ಪೂರ್ತಿ ವರ್ಷಾಶನದೊಂದಿಗೆ ಶೇಕಡ 100ರಷ್ಟು ಖರೀದಿ ಬೆಲೆಯ ರಿಟರ್ನ್. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 ಎಲ್‌ಐಸಿ ಸರಳ ಪಿಂಚಣಿ ಯೋಜನೆಯ ಅರ್ಹತೆ

ಎಲ್‌ಐಸಿ ಸರಳ ಪಿಂಚಣಿ ಯೋಜನೆಯ ಅರ್ಹತೆ

40 ವರ್ಷ ವಯಸ್ಸಿನಿಂದ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಎಲ್ಐಸಿ ಸರಳ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಸರಳ ಪಿಂಚಣಿ ಯೋಜನೆ ಅಡಿಯಲ್ಲಿ ಕನಿಷ್ಠ ಮಾಸಿಕ ವರ್ಷಾಶನ ಅಥವಾ ಪಿಂಚಣಿ ರೂಪಾಯಿ ಸಾವಿರ ಆಗಿದೆ. ಅರ್ಹರು ಕನಿಷ್ಠ ಹೂಡಿಕೆಯನ್ನು ಮಾಡಿ ರೂಪಾಯಿ 1000 ಮಾಸಿಕ ವರ್ಷಾಶನ ಅಥವಾ ರೂ 12000 ವಾರ್ಷಿಕ ವರ್ಷಾಶನವನ್ನು ಪಡೆಯಲು ಸಾಧ್ಯವಾಗಲಿದೆ.

ತಿಂಗಳಿಗೆ 5000 ಹೂಡಿಕೆ ಮಾಡಿ ಮಾಸಿಕ 1.6 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?ತಿಂಗಳಿಗೆ 5000 ಹೂಡಿಕೆ ಮಾಡಿ ಮಾಸಿಕ 1.6 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?

 ಹೂಡಿಕೆ, ರಿಟರ್ನ್ ಲೆಕ್ಕಾಚಾರ ಹೇಗೆ?
 

ಹೂಡಿಕೆ, ರಿಟರ್ನ್ ಲೆಕ್ಕಾಚಾರ ಹೇಗೆ?

ಎಲ್‌ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯು ಸುಮಾರು ಶೇಕಡ 5ರಷ್ಟು ಲಾಭವನ್ನು ನೀಡುತ್ತದೆ. 41 ನೇ ವಯಸ್ಸಿನಲ್ಲಿ, ನೀವು ಒಮ್ಮೆ ಪಿಂಚಣಿ ಯೋಜನೆಯಲ್ಲಿ ರೂ 2.5 ಲಕ್ಷವನ್ನು ಹೂಡಿಕೆ ಮಾಡಿದರೆ, ನೀವು ಪ್ರತಿ ವರ್ಷ ರೂ 12,300 ಅಥವಾ ಪ್ರತಿ ತಿಂಗಳು ರೂ 1,025 ಪಿಂಚಣಿ ಪಡೆಯುತ್ತೀರಿ. 3 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 14,760 ರೂಪಾಯಿ ಅಥವಾ ತಿಂಗಳಿಗೆ 1,195 ರೂಪಾಯಿಗಳ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ. ನೀವು ಒಂದೇ ಬಾರಿಗೆ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮೊದಲ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,950 ರೂಪಾಯಿಗಳನ್ನು ಮತ್ತು ಎರಡನೇ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,250 ರೂಪಾಯಿ ಪಿಂಚಣಿಯನ್ನು ಪಡೆಯುತ್ತೀರಿ.

 ಬೇರೇನು ಪ್ರಯೋಜನವಿದೆ?

ಬೇರೇನು ಪ್ರಯೋಜನವಿದೆ?

ಹೂಡಿಕೆದಾರರು, ಅವರ ಜೀವನ ಸಂಗಾತಿ ಅಥವಾ ಮಕ್ಕಳಿಗೆ ಪಟ್ಟಿ ಮಾಡಲಾದ ಆರೋಗ್ಯ ಸಮಸ್ಯೆ ಉಂಟಾದರೆ ಪಾಲಿಸಿಯನ್ನು ಸರೆಂಡರ್ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಆರೋಗ್ಯ ಸಮಸ್ಯೆಗೆ ಸಂಬಂಧಿಸಿತ ಹಲವು ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಆರು ತಿಂಗಳ ಬಳಿಕ ಮಾತ್ರ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಅದಕ್ಕೂ ಮುನ್ನ ಹೂಡಿಕೆ ಸರೆಂಡರ್ ಮಾಡುವ ಅವಕಾಶವಿಲ್ಲ. ಪಾಲಿಸಿಯನ್ನು ಆರಂಭ ಮಾಡಿದ ಆರು ತಿಂಗಳ ಬಳಿಕ ಯಾವುದೇ ಸಮಯದಲ್ಲಿ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದು. ನಾಲ್ಕು ವಿಭಿನ್ನ ವರ್ಷಾಶನ ಪಾವತಿಗಳಾಗಿದೆ. ವಾರ್ಷಿಕ, ಅರೆ-ವಾರ್ಷಿಕ, ತ್ರೈಮಾಸಿಕ ಹಾಗೂ ಮಾಸಿಕವಾಗಿ ಪಾವತಿಯನ್ನು ಮಾಡಲಾಗುತ್ತದೆ.

English summary

LIC Saral Pension Plan: Invest Rs 3 Lakh, Receive 14,000 in Pension, Here's Details

The Saral Pension Plan of LIC is an individual instant annuity plan with a single premium that is non-linked and non-participating. Invest Rs 3 Lakh, Receive 14,000 in Pension, Here's Details.
Story first published: Tuesday, October 25, 2022, 14:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X