ಪ್ರವಾಸ ಮಾಡುವ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ಹಿಮತುಂಬಿದ ಪ್ರದೇಶಗಳಿಗೆ, ಸುಂದರ ಪ್ರದೇಶಗಳು ಇರುವೆಡೆ ನಾವು ಪ್ರಯಾಣ ಮಾಡಲು ಬಯಸುತ್ತೇವೆ. ಇಲ್ಲವಾದರೆ ಸುಂದರವಾದ ಪ್ರದೇಶಗಳಿರುವ ಸ್ಥಳಕ್ಕೆ ಹೋಗಲು ಬಯಸುತ್ತೇವೆ. ಹಾಗಿದ್ದಾಗ ನಮ್ಮ ಮುಂದೆ ಬರುವ ಆಯ್ಕೆ ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್ ಆಗಿದೆ.
ನೀವು ಪ್ರಕೃತಿ ಚಿಕಿತ್ಸೆಯನ್ನು ಪಡೆಯಲು ಪ್ರವಾಸ ಪ್ಯಾಕೇಜ್ ಅವಕಾಶ ನೀಡುತ್ತದೆ. ಲೋಟಸ್ ಡಿಟಾಕ್ಸ್ ಪ್ರವಾಸ ಪ್ಯಾಕೇಜ್ ಸುಮಾರು ಮೂರು ರಾತ್ರಿಗಳು, ನಾಲ್ಕು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಫೈವ್ ಲೋಟಸ್ ಇಂಡೋ ಜರ್ಮನ್ ಎಂಬ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಲಾಗುತ್ತದೆ. ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪ್ಯಾಕೇಜ್ ವಿವರ ಇಲ್ಲಿದೆ ನೋಡಿ
ಪ್ಯಾಕೇಜ್ ದರ: ಲೋಟಸ್ ಡಿಟಾಕ್ಸ್ ಪ್ಯಾಕೇಜ್-ಕ್ಲೀನ್ಸ್-ರಿಜುವೆನೇಟ್-3 ನೈಟ್ಸ್
ಪ್ಯಾಕೇಜ್ ದಿನ: ಮೂರು ರಾತ್ರಿಗಳು
ಪ್ಯಾಕೇಜ್ ಆರಂಭ: ರಾಯಪುರ ರೈಲ್ವೆ ನಿಲ್ದಾಣ/ ವಿಮಾನನಿಲ್ದಾಣ
ವೆಲ್‌ನೆಸ್ ಸೆಂಟರ್: ಫೈವ್ ಲೋಟಸ್ ಇಂಡೋ ಜರ್ಮನ್ (ರಾಯಪುರ ರೈಲ್ವೆ ನಿಲ್ದಾಣದಿಂದ 84 ಕಿಲೋ ಮೀಟರ್ ದೂರ)
ಯಾವ ದಿನ: ಪ್ರತಿ ದಿನ
ಪ್ಯಾಕೇಜ್ ದರ (ಪ್ರತಿ ವ್ತಕ್ತಿಗೆ)
ಎಕ್ಸಿಕ್ಯೂಟಿವ್ ಸಿಂಗಲ್: 11,200 ರೂಪಾಯಿ
ಎಕ್ಸಿಕ್ಯೂಟಿವ್ ಡಬಲ್: 10,150 ರೂಪಾಯಿ
ಎಕ್ಸಿಕ್ಯೂಟಿವ್ ಲೇಕ್ ವೀವ್- ಸಿಂಗಲ್: 12,200 ರೂಪಾಯಿ
ಎಕ್ಸಿಕ್ಯೂಟಿವ್ ಲೇಕ್ ವೀವ್- ಡಬಲ್: 11,000 ರೂಪಾಯಿ
ಬಂಗಲೆ- ಸಿಂಗಲ್: 13,800 ರೂಪಾಯಿ
ಬಂಗಲೆ- ಡಬಲ್: 12,800 ರೂಪಾಯಿ
ಪ್ರೀಮಿಯಂ ಡ್ಯುಪ್ಲೆಕ್ಸ್ - ಸಿಂಗಲ್: 17,900 ರೂಪಾಯಿ
ಪ್ರೀಮಿಯಂ ಡ್ಯುಪ್ಲೆಕ್ಸ್- ಡಬಲ್: 16,900 ರೂಪಾಯಿ
ದಿನ 1: ವೆಲ್‌ನೆಸ್ ಸೆಂಟರ್‌ಗೆ ಚೆಕಿನ್ ಆಗುವುದು. (ಮಧ್ಯಾಹ್ನ 2 ಗಂಟೆಗೆ). ಕೆಲವು ಚಟುವಟಿಕೆಗಳು ಇರಲಿದೆ. ಅದಾದ ಬಳಿಕ ವೆಲ್‌ನೆಸ್ ಸೆಂಟರ್‌ನಲ್ಲಿ ರಾತ್ರಿ ತಂಗುವುದು.
ದಿನ 2, 3: ದಿನದ ವೇಳಾಪಟ್ಟಿಯಂತೆ ಎಲ್ಲಾ ಚಟುವಟಿಕೆಗಳನ್ನು ವೆಲ್‌ನೆಸ್ ಸೆಂಟರ್‌ನಲ್ಲಿ ಮಾಡಲಾಗುತ್ತದೆ. ರಾತ್ರಿ ಅಲ್ಲಿಯೇ ತಂಗಲಾಗುತ್ತದೆ.
ದಿನ 4: ಚೆಕ್-ಔಟ್ ಆಗುವುದು. ಉಪಹಾರದ ನಂತರ, ನಿಮ್ಮ ಚಟುವಟಿಕೆಗಳನ್ನು ಪೂರ್ಣಗೊಳಿಸಿ. ಚೆಕ್- ಔಟ್ ಆಗುವುದು. ಸಮಯ 11 ಗಂಟೆ.
ಕ್ಷೇಮ ಕೇಂದ್ರದಲ್ಲಿ ದಿನಚರಿ ಹೇಗಿದೆ?
ಬೆಳಿಗ್ಗೆ 05:00 - 05:30: ಸ್ವಚ್ಛತೆ ಚಟುವಟಿಕೆ
ಬೆಳಿಗ್ಗೆ 5:30-06:00: ಶುದ್ಧೀಕರಣ ಪಾನೀಯ
ಬೆಳಿಗ್ಗೆ 06:00 - 07:00: ಯೋಗ, ಪ್ರಾಣಾಯಾಮ
ಬೆಳಿಗ್ಗೆ 07:00 - 08:00: ಉಪಹಾರ
ಬೆಳಿಗ್ಗೆ 08:30 - 10:00: ಪ್ರಕೃತಿ ಚಿಕಿತ್ಸೆಗಳು
ಬೆಳಿಗ್ಗೆ 10:00 - 10:30: ತರಕಾರಿ ರಸ ಸೇವನೆ
ಮಧ್ಯಾಹ್ನ 12:30 - 01:30: ಊಟ
ಮಧ್ಯಾಹ್ನ 01:30 - 02:30: ವಿಶ್ರಾಂತಿ ಸಮಯ
ಮಧ್ಯಾಹ್ನ 02:30 - 03:00: ಹಣ್ಣಿನ ರಸ ಸೇವನೆ
ಸಂಜೆ 03:00 - 05:30: ಪ್ರಕೃತಿ ಚಿಕಿತ್ಸೆಗಳು
ಸಂಜೆ 05:30 - 06:00: ಹರ್ಬಲ್ ಟೀ/ಸಂಜೆಯ ತಿಂಡಿ
ಸಂಜೆ 06:00 - 06:45: ಪವರ್ ಯೋಗ
ಸಂಜೆ 06:45 - 07:15: ಧ್ಯಾನ
ರಾತ್ರಿ 07:30 - 08:00: ಊಟ
ರಾತ್ರಿ 08:15- 08:30: ಆರೋಗ್ಯ ಮಾತುಕತೆ
ರಾತ್ರಿ 08:30 - 08:45: ಮೂಲಿಕಾ ಚಹಾ
ರಾತ್ರಿ 09:00: ಮಲಗುವ ಕೋಣೆಗೆ ಹೋಗಿ ವಿಶ್ರಾಂತಿ


Click it and Unblock the Notifications