ಪ್ಲಾಸ್ಟಿಕ್ ಮಾನವಕುಲದ ಶ್ರೇಷ್ಠ ಆವಿಷ್ಕಾರವಾಗಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿ ದಿನನಿತ್ಯದ ಬಳಕೆಯ ವಸ್ತುವಾಗಿ ಸೇರಿಕೊಂಡಿತು. ಆದರೆ ಇದರ ಬಳಕೆ ಹೆಚ್ಚುತ್ತಿದ್ದಂತೆ ಇದು ಪ್ರಕೃತಿಗೆ ಹಾನಿಕಾರವಾಗಿ ಪರಿಣಮಿಸಿತು. ಇದರ ಉಪಯೋಗಗಳಿಗಿಂತ ಪ್ಲಾಸ್ಟಿಕ್ ನಿಂದ ಆಗುವ ಗಣನೀಯ ತೊಂದರೆ ಹೆಚ್ಚಾಗುತ್ತಿದ್ದರೂ ಇಂದು, ನಮ್ಮ ದೈನಂದಿನ ಜೀವನದಿಂದ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ನಮ್ಮೆಲ್ಲರಿಗೂ ಕಷ್ಟಕರವಾಗಿದೆ.
ಪ್ಲಾಸ್ಟಿಕ್ ಮಾಲಿನ್ಯದ ಭೀಕರ ಪರಿಣಾಮಗಳ ಅರಿತುಕೊಂಡಿರುವ , ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ 22 ವರ್ಷದ ಸಾರಾ ಲಖಾನಿಗೆ ಪರಿಸರದ ಬಗ್ಗೆ ಅಚಲವಾದ ಪ್ರೀತಿ. ಹೀಗಾಗಿ ಇವರ ಪ್ರಕೃತಿ ಪ್ರೇಮ ಸಾಂಪ್ರದಾಯಿಕ ಬಟ್ಟೆಯ ಪರಿಕಲ್ಪನೆಯನ್ನು ಬಿಟ್ಟು ಹೊಸತನ್ನು ಪ್ರೇರೇಪಿಸಿತು. ಅವರ ಸಂಗ್ರಹವು ಜವಳಿ ಮತ್ತು ಪ್ಲಾಸ್ಟಿಕ್ ಎರಡರಲ್ಲೂ ಮರುಬಳಕೆ ಮತ್ತು ಅಪ್ಸೈಕ್ಲಿಂಗ್ ಅನ್ನು ಆಧರಿಸಿದೆ. "ಟ್ರ್ಯಾಶ್ ಅಥವಾ ಟ್ರೆಷರ್" ಎಂಬ ಟೈಟಲ್ ನಲ್ಲಿ ಅವರ ಅದ್ಬುತ ಕಲ್ಪನೆಯನ್ನು ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ರಾಂಪ್‌ನಲ್ಲಿ ಪ್ರದರ್ಶಿಸಲಾಗಿದೆ.

Lakmé ಫ್ಯಾಶನ್ ವೀಕ್ ಫಾರ್ ವೀಕ್ ಇಂಟರ್ನ್ಯಾಷನಲ್ (GFWi) ಅನ್ನು FDCI, ಪರ್ಲ್ ಅಕಾಡೆಮಿ ಮತ್ತು ಗ್ರಾಜುಯೇಟ್ ಫ್ಯಾಶನ್ ಫೌಂಡೇಶನ್ ಸಹಯೋಗದೊಂದಿಗೆ ನಡೆಸಲಾಗಿದ್ದು ಇಲ್ಲಿ ದೇಶಾದ್ಯಂತದ ಪ್ರಮುಖ ಜಾಗತಿಕ ಫ್ಯಾಷನ್ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಮ್ಮ ಸುತ್ತಲಿನ ಪ್ರಕೃತಿಯ ಸರಳ ಮತ್ತು ಸಂಕೀರ್ಣ ವಿವರಗಳೇ ಡಿಸೈನ್ ಗೆ ಸ್ಫೂರ್ತಿ ಎನ್ನುತ್ತಾರೆ.
"ಈ ಕಲೆಕ್ಷನ್ ಪ್ರಜ್ಞಾಪೂರ್ವಕ ಗ್ರಾಹಕರಿಗಾಗಿ ಆಗಿದೆ," ಎಂದು ಸಾರಾ ಸೋಶಿಯಲ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಸಾರಾ ಸಮಸ್ಯೆಯನ್ನು ಪರಿಹಾರವಾಗಿ ಪರಿವರ್ತಿಸಲು ಪ್ರಯತ್ನಿಸಿದ್ದು, ತ್ಯಾಜ್ಯವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಇದನ್ನು ಹೇಗೆ ಪರಿಹಾರದ ಭಾಗವಾಗಿಸಬಹುದು ಎನ್ನುವ ಮೂಲಕ ಬದಲಾವಣೆ ತರಲು ಸಾರಾ ಯೋಚಿಸುತ್ತಿದ್ದರು.
ಸೋಶಿಯಲ್ ಸ್ಟೋರಿ ಪ್ರಕಾರ ,"ಅವರ ಕಲೆಕ್ಷನ್ ನಲ್ಲಿರುವ ಕಾಂತ ಎಂಬ್ರಾಯ್ಡರಿ (ಕಾಂತ ಕಸೂತಿ) ಯೂ ಎಲ್ಲಾ ತ್ಯಾಜ್ಯ ಪಾಲಿಥಿನ್ ಚೀಲ , ಬಟ್ಟೆಗಳನ್ನು ಮರುಬಳಕೆ ಹ್ಯಾಂಡ್ ವೊವೆನ್ ಟೆಕ್ಸ್ಟೈಲ್ ವೇಸ್ಟ್ ಗಳನ್ನು ಬಳಸಲಾಗಿದೆ". ಸಾಕಷ್ಟು ಬಹುಮುಖವಾದ ರೇಖೆಯನ್ನು ರಚಿಸಿ ಡಿಸೈನ್ ಮಾಡಿರುವ ಬಟ್ಟೆಗಳನ್ನು ಯಾರಾದರೂ, ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಧರಿಸಬಹುದಾಗಿದೆ.
ಕಾಂತಾ ಕಸೂತಿಯು ಪ್ಯಾಚ್ವರ್ಕ್ ಬಟ್ಟೆಯನ್ನು ಹೊಲಿಯುವ ಶತಮಾನಗಳ-ಹಳೆಯ ಸಂಪ್ರದಾಯಿಕ ಕಲೆಯಾಗಿದ್ದು ಥ್ರೆಡ್‌ಗಳನ್ನು ಆಕಾರವನ್ನು ರೂಪಿಸಲು ಕೇವಲ ಒಂದು ಮೇಲ್ಮೈಯಲ್ಲಿ ಲೂಪ್ ಮಾಡಲಾಗುತ್ತದೆ, ಆದರೆ ಬಟ್ಟೆಯ ಹಿಮ್ಮುಖ ಭಾಗವು ನೇರವಾದ ಸರಳ ಹೊಲಿಗೆಯಾಗಿದ್ದು, ಮುಂಭಾಗದ ಭಾಗವು ಸಂಕೀರ್ಣವಾದ ಜ್ಯಾಮಿತೀಯ ಮಾದರಿಯಾಗಿದೆ.
"ನನ್ನ ಸಂಗ್ರಹವು ಬಹುಪಾಲು ಕಾರ್ಸೆಟ್‌ಗಳು ಮತ್ತು ಡ್ರೆಸ್‌ಗಳು, ಸಾಕಷ್ಟು ಸರಳವಾದ ಟಾಪ್ಸ್ ಮತ್ತು ಬಾಟಮ್‌ಗಳನ್ನು ಹೊಂದಿತ್ತು, ಇವುಗಳನ್ನು ಮರುಬಳಕೆಯ ನೂಲುಗಳಿಂದ ಕೂಡ ಮಾಡಲಾಗಿದೆ," ಎಂದು ಸೋಶಿಯಲ್‌ಸ್ಟೋರಿ ಹೇಳಿಕೊಂಡಿದ್ದಾರೆ. ಸಾರಾ ಲಖಾನಿ ನಾಗ್ಪುರದ ಸಮೀಪವಿರುವ ಒಂದು ಸಣ್ಣ ಪಟ್ಟಣಕ್ಕೆ ಸೇರಿದವರು, ಅವರ ಕುಟುಂಬವು ಔಷಧಾಲಯವನ್ನು ನಡೆಸುತ್ತಿದೆ.
ಔಷಧ ಉದ್ಯಮದಿಂದ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸಾರಾ ನೋಡುತ್ತಾ ಬೆಳೆದವರು. "ಅಂತಹ ಸಣ್ಣ ಸ್ಥಳದಲ್ಲಿ ತ್ಯಾಜ್ಯವನ್ನು ಎಸೆಯುವುದು ನಮಗೆ ಕಷ್ಟ. ಏಕೆಂದರೆ ನಮ್ಮೂರಿನಲ್ಲಿ ತ್ಯಾಜ್ಯ ಸಂಗ್ರಹಣೆಗೆ ಯಾವುದೇ ವ್ಯವಸ್ಥೆ ಇಲ್ಲ" ಎನ್ನುತ್ತಾರೆ ಸಾರಾ. ಪರ್ಲ್ ಅಕಾಡೆಮಿಯಲ್ಲಿ ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್‌ನಲ್ಲಿ ಮರುಬಳಕೆ ಮಾಡುವ ಪ್ಲಾಸ್ಟಿಕ್ ಕಸವನ್ನು ಆಯ್ಕೆ ಮಾಡ್ವ ಮೂಲಕ ಈ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಒದಗಿಸಬಹುದು ಎಂಬ ಯೋಚನೆ ಸಾರಾ ಅವರನ್ನು ಪ್ರೇರೇಪಿಸಿತು.
ಕಸೂತಿ ಮತ್ತು ನೇಯ್ಗೆ ಪ್ರಕ್ರಿಯೆಗಳ ಪ್ರಯೋಗಗಳಲ್ಲಿ ಕಂಡುಬಂದ ಹಲವು ಅಡೆತಡೆಗಳ ಹೊರತಾಗಿಯೂ, ಸಾರಾ ಯಶಸ್ವಿಯಾಗಿ ಪ್ಲಾಸ್ಟಿಕ್‌ಗಳನ್ನು ಕಾಂತ ಕಸೂತಿ ಮೂಲಕ ತಮ್ಮ ಕಲೆ ಕ್ಷನ್ ನಲ್ಲಿ ಸೇರಿಸಿಕೊಂಡರು. ಆದರೆ ಸಾರಾ ತನ್ನ ಕಲ್ಪನೆಯ ಕುರಿತು ಮುಂಬೈ ಮತ್ತು ಗುಜರಾತ್‌ನಲ್ಲಿರುವ ವಿವಿಧ ಕಸೂತಿಗಾರರೊಂದಿಗೆ ಮಾತನಾಡಿದಾಗ ಆರಂಭದಲ್ಲಿ ಎಲ್ಲರೂ ಅವರ ಐಡಿಯಾ ತಿರಸ್ಕರಿಸಿದರು. ಕೊನೆಗೂ ಅವರ ಸಹಾಯ ಮಾಡಲು ಮುಂಬೈ ಮೂಲದ ಕಸೂತಿಗಾರನೋರ್ವನನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಾರಾ ಪ್ರಸ್ತುತ ಪುರುಷರ ಉಡುಪು ಸಂಗ್ರಹ ಬ್ರ್ಯಾಂಡ್ ಮಫ್ತಿಯಲ್ಲಿ ಜೂನಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


Click it and Unblock the Notifications