ಕ್ಯಾಂಪಸ್ ನೇಮಕಾತಿಯಲ್ಲಿ ಇತ್ತೀಚೆಗೆ ಐಐಟಿ , ಐಐಎಂ ನಂತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಾಮಾನ್ಯವಾಗಿ 1 ಕೋಟಿ ರೂಪಾಯಿಗಿಂತ ಹೆಚ್ಚಿನ ರೆಕಾರ್ಡ್ ಬ್ರೇಕಿಂಗ್ ಸ್ಯಾಲರಿ ಪಡೆದ ಸುದ್ದಿ ನೀವು ಓದಿದ್ದೀರಿ. ಆದರೆ ಐಐಟಿ, ಐಐಎಂ ನಲ್ಲಿ ಓದದೇ ದೊಡ್ಡ ಕಂಪನಿಯಿಂದ ದೊಡ್ಡ ಮೊತ್ತದ ಪ್ಯಾಕೇಜ್ ಪಡೆದು ಸುದ್ದಿಯಾಗಿದ್ದಾರೆ ವಿದ್ಯಾರ್ಥಿ ಅಭಿಜಿತ್ ದ್ವಿವೇದಿ.!
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮಶನ್ ಟೆಕ್ನಾಲಜಿ (ಐಐಐಟಿ) ಲಕ್ನೋ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲಿ ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್ ಪಡೆದು ಅಭಿಜಿತ್ ಸಾಧನೆ ಮಾಡಿ ತೋರಿಸಿದ್ದಾರೆ. ಇ-ಕಾಮರ್ಸ್ ದೈತ್ಯ ಅಮೇರಿಕನ್ ಅಮೆಜಾನ್‌ನಲ್ಲಿ 1.2 ಕೋಟಿ ರೂ.ಗಳ ಬೃಹತ್ ವೇತನ ಪ್ಯಾಕೇಜ್‌ನಲ್ಲಿ ಅಭಿಜಿತ್ ಅವರನ್ನು ನೇಮಿಸಲಾಗಿದೆ.

ಅಭಿಜಿತ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ವಾಸಿಸುತ್ತಿದ್ದಾರೆ. ತನ್ನ ಡ್ರೀಮ್ ಜಾಬ್ ಗಳಿಸುವ ಮೊದಲು, ಅಭಿಜಿತ್ Upstox ಮತ್ತು Trifactaದಲ್ಲಿ ಇಂಟರ್ನ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಐಐಐಟಿಯಲ್ಲಿ ಇನ್ಫಾರ್ಮಶನ್ ಟೆಕ್ನಾಲಜಿ ಬಿಟೆಕ್‌ನ ಕೊನೆಯ ವರ್ಷದಲ್ಲಿ ಅಭಿಜಿತ್ ಈ ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್ ನೊಂದಿಗೆ ಕೆಲಸದ ಆಫರ್ ಪಡೆದರು.
ಎಲ್ಲರೂ ಅಸೂಯೆ ಪಡುವಂತಹ ಅತ್ಯುತ್ತಮ ಆಫರ್ ತಮ್ಮದಾಗಿಸಿಕೊಂಡ ಬಳಿಕ ಅಭಿಜಿತ್ , ಇಂಟರ್ವ್ಯೂಗೆ ತಾವು ಮಾಡಿರುವ ತಯಾರಿ, ಸಿದ್ದತೆಯ ಸಿಕ್ರೇಟ್ ನ್ನು ಹಂಚಿಕೊಂಡಿದ್ದಾರೆ. ಸಂದರ್ಶಕರ ಮನಗೆದ್ದು ನೇಮಕಗೊಳ್ಳುವಲ್ಲಿ ತಮ್ಮಲ್ಲಿದ್ದ ಕಾರ್ಯಕ್ಷಮತೆ ಮತ್ತು ಟೆಕ್ನಿಕಲ್ ಜ್ಞಾನ ಮಾತ್ರವಲ್ಲದೆ ಪ್ರಮುಖವಾಗಿ ಸಾಫ್ಟ್ ಸ್ಕಿಲ್ಸ್ ನಿರ್ಣಾಯಕ ಪಾತ್ರವಹಿಸಿದೆ ಎನ್ನುತ್ತಾರೆ ಅಭಿಜಿತ್.
ಪ್ಲೇಸ್‌ಮೆಂಟ್ ನ ಇಂಟರ್ವ್ಯೂ ರೌಂಡ್‌ಗಳಿಗಾಗಿ ತಯಾರಿ ನಡೆಸುತ್ತಿರುವಾಗ, ಅಭಿಜಿತ್ ಅವರು ತಮ್ಮ ಸಂವಹನ ಕಲೆ ಮತ್ತು ಬಾಡಿ ಲ್ಯಾಂಗ್ವೇಜ್ ಸೇರಿದಂತೆ ಸಾಫ್ಟ್ ಸ್ಕಿಲ್ಸ್ ಸುಧಾರಿಸುವತ್ತ ಗಮನಹರಿಸಿದರು. ಇವೆಲ್ಲವನ್ನೂ ಡೊಮೇನ್‌ನ ಟೆಕ್ನಿಕಲ್ ಜ್ಞಾನದಷ್ಟೇ ಮುಖ್ಯವೆಂದು ಇಂಟರ್ವ್ಯೂ ನಲ್ಲಿ ಪರಿಗಣಿಸಲಾಗುತ್ತದೆ. ಬರುವಂತಹ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಹಿರಿಯ ಸ್ನೇಹಿತರೊಂದಿಗೆ ಉತ್ತಮ ಸಂಪರ್ಕ ಹೊಂದುವುದು ಜೊತೆಗೆ ಉದ್ಯೋಗ ಸಂದರ್ಶನಗಳನ್ನು ಭೇದಿಸಲು ಅವರಿಂದ ಸಲಹೆಯನ್ನು ಪಡೆಯುವುದು ಅವರ ಪ್ರಕಾರ ಮತ್ತೊಂದು ಪ್ರಮುಖ ಅಂಶವಾಗಿದೆ.
ರೆಕಾರ್ಡ್ ಬ್ರೇಕಿಂಗ್ ಪ್ಯಾಕೇಜ್‌ನಲ್ಲಿ ನೇಮಕಗೊಂಡ ರಿತಿ ನೇಮಾ
ಭೋಪಾಲ್ ಮೂಲದ ರಿತಿ ನೇಮಾ ಬೈಗೋನ್ ಎಂಬ ವಿದ್ಯಾರ್ಥಿನಿ ಈ ಬಾರಿಯ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ಎಲ್ಲಾ ವಿಶ್ವವಿದ್ಯಾಲಯದ ದಾಖಲೆ ಮುರಿಯುವ ಸಾಧನೆ ಮಾಡಿದ್ದಾರೆ. ರಿತಿ ನೇಮಾ ಅವರು ಇಂದೋರ್‌ನಲ್ಲಿರುವ "ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ" ಕಾಲೇಜಿನ ಕಂಪ್ಯೂಟರ್ ಸೈನ್ಸ್‌ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಡಿಎವಿವಿಯ ಇತಿಹಾಸದಲ್ಲಿ ಅತ್ಯಧಿಕ ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ತಮ್ಮದಾಗಿಸುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ. ರಿತಿ ನೇಮಾ ಇಂದೋರ್ ಐಐಎಂನಲ್ಲಿ ಅತ್ಯುನ್ನತ ಪ್ಯಾಕೇಜ್ ಪಡೆದ ದಾಖಲೆಯನ್ನು ಮೀರಿಸಿದ್ದಾರೆ ಎಂಬುವುದು ವಿಶೇಷ. ವರದಿಗಳ ಪ್ರಕಾರ ಇದು ಐಐಎಂ ಇಂದೋರ್‌ನ ವಿದ್ಯಾರ್ಥಿ ಪಡೆದ 49 ಲಕ್ಷ ಅತ್ಯಧಿಕ ಪ್ಯಾಕೇಜ್‌ಗಿಂತ ಸುಮಾರು 8 ಲಕ್ಷ ರೂಪಾಯಿ ಹೆಚ್ಚಿದೆ.
ರಿತಿ ನೇಮಾ ಅವರಿಗೆ ಆಸ್ಟ್ರೇಲಿಯಾದ ಸಾಫ್ಟ್‌ವೇರ್ ಕಂಪನಿ ಅಟ್ಲಾಸಿಯನ್ 57 ಲಕ್ಷ ರೂ. ಗಳ ವಾರ್ಷಿಕ ಸಂಬಳದ ಆಫರ್ ನೀಡಿ ನೇಮಿಸಿಕೊಂಡಿದೆ. ರಿತಿ ನೇಮಾ ಪ್ಲೇಸ್‌ಮೆಂಟ್ ಪ್ರಕ್ರಿಯೆಯ ಬಗ್ಗೆ ತಿಳಿದ ತಕ್ಷಣವೇ ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ತಮ್ಮದಾಗಿಸಿಕೊಳ್ಳಲು ತಯಾರಿ ಆರಂಭಿಸಿದ್ದಾರೆ. ಈ ವೇಳೆ ಅವರು 4 ನೇ ಸೆಮಿಸ್ಟರ್‌ನಲ್ಲಿದ್ದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications