ಫಿಸಿಕ್ಸ್ ವಲ್ಲಾ ಭಾರತದಲ್ಲಿ ಲಾಭದಾಯಕವಾಗಿರುವ ಏಕೈಕ ಎಜ್ಯು-ಟೆಕ್ ಯುನಿಕಾರ್ನ್ ಆಗಿದೆ. ಈ ಕಂಪನಿಯ ಆದಾಯವು ಕಳೆದ ಹಣಕಾಸು ವರ್ಷದಲ್ಲಿ 780 ಕೋಟಿ ರೂಪಾಯಿಗಳಷ್ಟು ಇತ್ತು. ಇದು 300 ಪರ್ಸೆಂಟ್ ಹೆಚ್ಚಾಗಿದ್ದು ಆಗಿದ್ದು ಅಂದರೆ 233 ಕೋಟಿ ರೂ. ಆಗಿದೆ. ಕಂಪನಿಯು ಈ ಹಣಕಾಸು ವರ್ಷದಲ್ಲಿ 2500 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಕಳೆದ ವರ್ಷ 1.1 ಬಿಲಿಯನ್ ಡಾಲರ್ (9,000 ಕೋಟಿ) ವ್ಯಾಲ್ಯುವೇಷನ್‌ನಂತೆ 100 ಮಿಲಿಯನ್ ಡಾಲರ್ ಫಂಡ್ ರೈಸ್ ಮಾಡಿತ್ತು.
ಇದು ಯುನಿಕಾರ್ನ್ ಸ್ಟೇಟಸ್ ಪಡೆದಿರುವ 101ನೇ ಕಂಪನಿಯಾಗಿದೆ. ಈ ಕಂಪನಿಯನ್ನು ಎಂಜಿನಿಯರಿಂಗ್ ಡ್ರಾಪೌಟ್ ಆಗಿರುವ ಹಾಗೂ ಮಕ್ಕಳಿಗೆ ಟ್ಯೂಷನ್ ನೀಡುತ್ತ ಯೂಟ್ಯೂಬರ್ ಆಗಿ ಕೆಲಸ ಮಾಡುತ್ತಿದ್ದ ಅಲಖ್ ಪಾಂಡೆ ಅವರು ಸ್ಥಾಪಿಸಿದ್ದಾರೆ. ಪಾಂಡೆ ಅವರು ಅದೇ ಹೆಸರಿನ ಯೂಟ್ಯೂಬ್ ಚಾನೆಲ್‌ನೊಂದಿಗೆ ತಮ್ಮ ಉದ್ಯಮದ ಜರ್ನಿಯನ್ನು ಕೂಡ ಪ್ರಾರಂಭಿಸಿದ್ದರು. ಅವರು 2014ರಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದರು.

ಅಲಖ್ ಪಾಂಡೆ ಅವರ ಜನಪ್ರಿಯತೆಯನ್ನು ನೋಡಿ ಎಜ್ಯು-ಟೆಕ್ ಕಂಪನಿಯೊಂದು ವರ್ಷಕ್ಕೆ ಅವರಿಗೆ 40 ಕೋಟಿ ರೂಪಾಯಿ ಸಂಬಳದ ಆಫ್‌ರ್ ಅನ್ನು ನೀಡಿತ್ತು. ಆದರೆ ಅವರು ಆ ಉತ್ತಮ ಆಫರ್ ಅನ್ನು ತಿರಸ್ಕರಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಆ ಆಫರ್ ಅನ್ನು ನೀಡಿದ್ದು ಅನ್‌ಅಕಾಡೆಮಿ ಸಂಸ್ಥೆಯಾಗಿತ್ತು. ಬಳಿಕ ಅವರು ತಮ್ಮ ಫಿಸಿಕ್ಸ್ ವಲ್ಲಾ ಹೆಸರಿನ ಕಂಪನಿಯನ್ನು ಸ್ಥಾಪಿಸಿದರು. 2021-2022ರಲ್ಲಿ ಈ ಕಂಪನಿಯ ಆದಾಯವು ಒಮ್ಮೆಲೇ ಶೇ.900ರಷ್ಟು ಜಿಗಿದಿತ್ತು.
ಅಲಖ್ ಪಾಂಡೆ ಅವರು ಕಾನ್ಪುರದ ಟಾಪ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಕಲಿಯುತ್ತಿದ್ದರು. ಆದರೆ ಮೂರನೇ ವರ್ಷದಲ್ಲಿ ಅವರು ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ನಂತರ ಅಲಹಾಬಾದ್‌ನ ಸಾಫ್ಟ್‌ವೇಸ್ ಕೋಚಿಂಗ್ ಸೆಂಟರ್‌ಗೆ ಸೇರಿದ್ದರು. ತಮ್ಮ ಊರು ಕೂಡ ಅಲಹಾಬಾದ್ ಆಗಿರುವ ಕಾರಣ ಅದೇ ಕೋಚಿಂಗ್ ಸಂಸ್ಥೆಯಲ್ಲಿ ಫಿಸಿಕ್ಸ್ ಪಾಠ ಮಾಡುತ್ತಿದ್ದರು. ಆಗ ಅವರು 5000 ರೂಪಾಯಿ ವೇತನ ಪಡೆಯುತ್ತಿದ್ದರು.
ಅವರು ತಮ್ಮ ಫಿಸಿಕ್ಸ್ ಪಾಠದ ವೇಳೆ ವಿದ್ಯಾರ್ಥಿಗಳ ಗಮನವನ್ನು ಸಳೆದಿಡುವಂತೆ ಮಾಡುತ್ತಿದ್ದರು. ಅದಕ್ಕಾಗಿ ಪಾಠದ ಮಧ್ಯೆ ಆಕರ್ಷಕವಾದ ಜೋಕ್ಸ್‌ಗಳನ್ನು ಹೇಳುತ್ತಿದ್ದರು. ತಾವು ಕಲಿಸುವ ವಿಷಯದ ಬಗ್ಗೆ ಆಳ ಜ್ಞಾನ ಹೊಂದಿರುವ ಜತೆಗೆ ಅಧ್ಯಾಪಕರಾದವರು ತುಂಬಾ ಗಟ್ಟಿ ಧ್ವನಿ, ತಮಾಷೆ, ವ್ಯಂಗ್ಯ ಹಾಗೂ ಸ್ಟ್ರಿಕ್ಟ್ ಆಗಿರಬೇಕು ಎಂದು ಫೋರ್ಬ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಅನಿಮೇಟೆಡ್ ಮಾದರಿಯ ಪಾಠದಿಂದಾಗಿ ವಿದ್ಯಾರ್ಥಿಗಳು ಅವರ ತರಗತಿಗಳನ್ನು ತುಂಬಾ ಇಷ್ಟಪಡುತ್ತಿದ್ದರು. 2016ರಲ್ಲಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದರು. ನಿಧಾನವಾಗಿ ಅವರು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಜನಪ್ರಿಯತೆಯನ್ನು ಗಳಿಸಲು ಪ್ರಾರಂಭಿಸಿದರು.
ಜತೆಗೆ ಅವರು ವಿದ್ಯಾರ್ಥಿಗಳನ್ನು ಭವಿಷ್ಯದೆಡೆ ಉತ್ತೇಜಿಸುವುದಕ್ಕೆ ಪ್ರಾರಂಭಿಸಿದರು. ಮುಂದೆ ಅವರ ಯೂಟ್ಯೂಬ್ ಚಾನೆಲ್ ನಿರೀಕ್ಷೆಗೂ ಮೀರಿ ಜನಪ್ರಿಯತೆಯನ್ನು ಪಡೆಯಲಾರಂಭಿಸಿತು. 2017ರಲ್ಲಿ ಅವರಿಗೆ 4000 ಫಾಲೋವರ್ ಇದ್ದು, 2017ಕ್ಕೆ ಅದು 2.2 ಮಿಲಿಯನ್‌ಗೆ ಏರಿತು. ನಂತರ 2020ರಲ್ಲಿ ಪ್ರತಿಕ್ ಮಹೇಶ್ವರಿ ಜತೆಸೇರಿ ಕಂಪನಿ ಸ್ಥಾಪಿಸಿದರು. ಮುಂದೆ 12ನೇ ತರಗತಿ ವಿದ್ಯಾರ್ಥಿಗಳಿಗೆ 999ರೂ. ವಿನ ಕಲಿಕಾ ಪ್ಯಾಕೇಜ್ ಅನ್ನು ಮಾಡಿದರು.
2020ರ ವೇಳೆಗೆ ಪಾಂಡೆ ಅವರು ಯೂಟ್ಯೂಬ್‌ನಲ್ಲಿ 42 ಲಕ್ಷ ಚಂದಾದಾರರನ್ನು ಪಡೆದುಕೊಂಡರು. ಅವರ ಪ್ರತಿಸ್ಪರ್ಧಿ ಕಂಪನಿಯು 75 ಕೋಟಿ ರೂ.ಗಳ ಆಫರ್ ಅನ್ನು ನೀಡಿತ್ತು. ಆದರೆ ಪಾಂಡೆ ಅದನ್ನು ನಿರಾಕರಿಸಿದ್ದರು. ನಂತರದಲ್ಲಿ ಅವರ ಬಳಿಯಿದ್ದ ಉಪನ್ಯಾಸಕರಿಗೂ ಕೋಟಿ ರೂಪಾಯಿಗಳ ಸಂಬಳದ ಆಫರ್ ಅನ್ನು ನೀಡಿತ್ತು. ಆ ಕಾರಣಕ್ಕೆ ಅವರ ಬಳಿಯಿದ್ದ ಹಲವು ಸ್ಟಾರ್ ಉಪನ್ಯಾಸಕರು ಕೆಲಸ ಬಿಟ್ಟಿದ್ದರು.
ಕಡಿಮೆ ವೆಚ್ಚದ ಕಂಟೆಂಟ್ ನೀಡುವ ಮೂಲಕ ಅವರು ಯಶಸ್ಸನ್ನು ಸಾಧಿಸಿದರು. 2022ರಲ್ಲಿ ಫಂಡ್ ರೈಸ್ ಮಾಡಿದ್ದು, ಪ್ರಸ್ತುತ ಲಾಭದಲ್ಲಿ ನಡೆಯುತ್ತಿರುವ ಏಕೈಕ ಎಜ್ಯು-ಟೆಕ್ ಕಂಪನಿಯಾಗಿದೆ. ಅಲಖ್ ಪಾಂಡೆ ಅವರ ಬಾಲ್ಯವು ಅತ್ಯಂತ ಕಷ್ಟಗಳಿಂದ ಕೂಡಿದ್ದು, ತಂದೆಯು ಕಾಂಟ್ರಾಕ್ಟರ್ ಆಗಿದ್ದರು. ಮನೆಯನ್ನೇ ಮಾರಾಟ ಮಾಡಿ ಬಿಸಿನೆಸ್ ಪ್ರಾರಂಭಿಸಿದ್ದರೂ ಅದು ಕೈಕೊಟ್ಟಿತ್ತು. ಹುರುನ್ ಪ್ರಕಾರ ಅಲಖ್ ಪಾಂಡೆ ಹಾಗೂ ಅವರ ಸಹ ಸಂಸ್ಥಾಪಕರಾದ ಪ್ರತೀಕ್ ಮಹೇಶ್ವರಿ ಅವರ ನಿವ್ವಳ ಆಸ್ತಿ ಮೌಲ್ಯವು ತಲಾ 4000 ಕೋಟಿ ರೂ. ಆಗಿದೆ.


Click it and Unblock the Notifications