ಕಷ್ಟದಲ್ಲಿ ಬೆಳೆದು ಈಗ ದೊಡ್ಡ ಉದ್ಯಮಿಗಳಾದವರಲ್ಲಿ ಅಂದೆ ಪ್ರತಾಪ್ ರೆಡ್ಡಿ ಕೂಡಾ ಒಬ್ಬರಾಗಿದ್ದಾರೆ. ಬಡತನದಲ್ಲಿ ಹುಟ್ಟಿ ಬೆಳೆದು ಸ್ವಂತ ಶಕ್ತಿಯಿಂದ ಉದ್ಯಮಿಯಾದವರಾಗಿದ್ದಾರೆ. ಪ್ರತಾಪ್ ರೆಡ್ಡಿ ಖುದ್ದು ತಮ್ಮ ಬಗ್ಗೆ ಹೇಳುವಾಗ , ತಾವೊಬ್ಬ ರಿಸ್ಕ್-ಟೇಕರ್ ಆಗಿದ್ದು "ನಿಸ್ಸಂಶಯವಾಗಿ ತಪ್ಪು ನಿರ್ಧಾರಗಳಿಗಿಂತ ಹೆಚ್ಚು ಸರಿಯಾದ ನಿರ್ಧಾರಗಳನ್ನು ಮಾಡಿದ್ದಾರೆ," ಎನ್ನುತ್ತಾರೆ ಅಂದೆ ಪ್ರತಾಪ್ ರೆಡ್ಡಿ.
ದಿನನಿತ್ಯ ಸುಮಾರು 10 ಕಿಲೋಮೀಟರ್ ನಡೆದುಕೊಂಡು ಶಾಲೆಗೆ ಹೋಗಿ ರೆಡ್ಡಿ ಬಡತನವನ್ನು ಹತ್ತಿರದಿಂದ ನೋಡುತ್ತಾ ಬೆಳೆದರು. ಮುಂದೆ ಸ್ವಯಂ ನಿರ್ಮಿತ ಉದ್ಯಮಿಯಾಗುವ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು. ಮಾತ್ರವಲ್ಲದೇ ಹೋರಾಟಗಳನ್ನು ಎದುರಿಸಲು ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ಪ್ರೇರೇಪಿಸಿತು.

ಯಶಸ್ವಿ ಉದ್ಯಮಿಯಾದರೂ ಇಂದು ಕೂಡಾ ರಿಸ್ಕ್ ಟೇಕರ್
ಇದೆಲ್ಲದರ ಫಲವಾಗಿ ರೆಡ್ಡಿ ಇಂದು ಯಶಸ್ವಿ ಕೈಗಾರಿಕೋದ್ಯಮಿಯಾಗಿದ್ದು, ಅವರು 12 ಕೆಮಿಕಲ್ ಪ್ಲಾಂಟ್ ಮತ್ತು 7,416 ಕೋಟಿ ರೂಪಾಯಿ ಮಾರುಕಟ್ಟೆ ಕ್ಯಾಪ್ ಬಾಲಾಜಿ ಅಮೈನ್ಸ್ ನ್ನು ಮುನ್ನಡೆಸುತ್ತಿದ್ದಾರೆ. "ಯಶಸ್ವಿ ಉದ್ಯಮಿಯಾದರೂ ಇಂದು ಕೂಡಾ ರಿಸ್ಕ್ ಟೇಕರ್ ಆಗಿಯೇ ಮುನ್ನಡೆಯುತ್ತಿದ್ದು, 'ಸುಸ್ಥಿರ ಮತ್ತು ಬೆಳವಣಿಗೆ-ಆಧಾರಿತ ವ್ಯವಹಾರವನ್ನು ನಿರ್ಮಿಸುವುದು ಪ್ರಮುಖ ಅಂಶವಾಗಿದೆ' ಎಂದು ನಂಬುತ್ತೇನೆ," ಎಂಬ ಪ್ರತಾಪ್ ರೆಡ್ಡಿ ಅವರ ಮಾತುಗಳನ್ನು ಇತ್ತೀಚೆಗೆ ಬಿಸಿನೆಸ್ ಟುಡೇ ಉಲ್ಲೇಖಿಸಿದೆ.
ಪ್ರತಾಪ್ ರೆಡ್ಡಿ ಸುಮಾರು 4 ದಶಕಗಳ ಹಿಂದೆ ಅಂದರೆ 1976 ರಲ್ಲಿ ಬ್ಯಾಂಕ್‌ನಿಂದ 25,000 ರೂಪಾಯಿ ಸಾಲ ಪಡೆದು 25 ವರ್ಷದ ಕನಸುಗಾರನಾಗಿ ಉದ್ಯಮ ಜಗತ್ತಿಗೆ ಪ್ರವೇಶಿಸಿದರು. ಒಂದು ದಶಕದ ನಂತರ ತಮ್ಮ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಮೊದಲು ಅವರು ಹಲವಾರು ಸಣ್ಣ -ಸಣ್ಣ ವ್ಯವಹಾರ ಮಾಡಿ ಯಶಸ್ವಿಯಾಗಿದ್ದರು.
ಇದರ ಪರಿಣಾಮವಾಗಿ ಅವರು 1988 ರಲ್ಲಿ 3 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 'ಸ್ಪೆಷಿಯಾಲಿಟಿ ಕೆಮಿಕಲ್ಸ್' ತೊಡಗಿಕೊಂಡರು. ಬಡತನವನ್ನು ಹತ್ತಿರದಿಂದ ನೋಡುತ್ತಾ ಬೆಳೆದ ರೆಡ್ಡಿಯವರಿಗೆ ಮುಂದೆ ಸ್ವಯಂ ನಿರ್ಮಿತ ಉದ್ಯಮಿಯಾಗುವ ಅವರ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿತು. ಮಾತ್ರವಲ್ಲದೇ ಹೋರಾಟ ನಡೆಸಲು ಮತ್ತು ಅಪಾಯ ಎದುರಿಸಲು ಬಡತನ ಅವರನ್ನು ಪ್ರೇರೇಪಿಸಿತು.
ಅವರ ಕಂಪನಿ ಬಾಲಾಜಿ ಅಮೈನ್ಸ್ ಇಂದು 60 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದ ಅತಿದೊಡ್ಡ ಮೆಥಿಲ್ಮೈನ್ ತಯಾರಕವಾಗಿದೆ ಎಂದು ಬಿಟಿ ವರದಿ ಮಾಡಿದೆ. ಬಾಲಾಜಿ ಅಮೈನ್ಸ್ 2022 ರ ಹಣಕಾಸು ವರ್ಷದಲ್ಲಿ 2,300 ಕೋಟಿ ರೂಪಾಯಿ ಆದಾಯ ಗಳಿಸಿದೆ.
72 ವರ್ಷದ ರೆಡ್ಡಿಯವರ ಕಂಅಪನಿ ಬಾಲಾಜಿ ಅಮೈನ್ಸ್ ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ದೇಶಗಳಿಂದ ಮೆಥನಾಲ್ (ಪ್ರತಿ ತಿಂಗಳು 8,000 ಟನ್‌ಗಳು) ನಂತಹ ಬೃಹತ್ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ, ಸ್ಪೆಷಿಯಾಲಿಟಿ ಕೆಮಿಕಲ್ಸ್ ಗಳನ್ನು ತಯಾರಿಸುತ್ತದೆ ಮತ್ತು ಉತ್ಪನ್ನಗಳನ್ನು ಮಾರಾಟ ,ರಫ್ತು ಮಾಡುತ್ತದೆ. ಉತ್ಪನ್ನಗಳ ಸುಮಾರು 35 ಪ್ರತಿಶತವು ಇಂದು ಯುರೋಪ್, ಜಪಾನ್, ಚೀನಾ ಮುಂತಾದ ಸ್ಥಳಗಳಿಗೆ ರಫ್ತು ಮಾಡುತ್ತಿದ್ದು ಬಾಲಾಜಿ ಅಮೈನ್ಸ್ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 12 ಕ್ಕೂ ಹೆಚ್ಚು ಸ್ಥಾವರಗಳನ್ನು ಹೊಂದಿದೆ.
ಕಡಿಮೆ ಹೂಡಿಕೆ ಮಾಡಿ ದೊಡ್ಡ ಸಂಸ್ಥೆ ಕಟ್ಟಿದವರಿವರು!
ಹೀಗೆ ಕಡಿಮೆ ಹಣವನ್ನು ಹೂಡಿಕೆ ಮಾಡಿ ದೊಡ್ಡ ಸಂಸ್ಥೆಯನ್ನು ಕಟ್ಟಿದವರ ವಿಚಾರಕ್ಕೆ ಬಂದಾಗ ನಮ್ಮಲ್ಲಿ ರಾಜೇಶ್ ಮೆಹ್ತಾ ಹಾಗೂ ಕನ್ಹಯ್ಯಾ ಶರ್ಮಾ ಕೂಡಾ ಇದ್ದಾರೆ. ರಾಜೇಶ್ ಮೆಹ್ತಾ ಸುಮಾರು 1,200 ರೂಪಾಯಿ ಸಾಲದಿಂದ ಸಂಸ್ಥೆ ನಿರ್ಮಿಸಿದ್ದು ಇಂದು ವಿಶ್ವದ ಅತಿದೊಡ್ಡ ಚಿನ್ನ ರಫ್ತುದಾರರಾಗಿದ್ದಾರೆ. ಇವರ ಪೂರ್ಣ ಹೆಸರು ರಾಜೇಶ್ ಜಸ್ವಂತ್ ರಾಯ್ ಮೆಹ್ತಾ ಆಗಿದೆ.
ಭಾರತೀಯ ಬಿಲಿಯನೇರ್ ಉದ್ಯಮಿಯಾಗಿರುವ ರಾಜೇಶ್ ಮೆಹ್ತಾ ಬೆಂಗಳೂರು ಮೂಲದವರಾಗಿದ್ದು, ರಾಜೇಶ್ ಎಕ್ಸ್‌ಪೋರ್ಟ್ಸ್ ಎಂಬ ಕಂಪನಿಯ ಮಾಲಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಮೂಲತಃ ಗುಜರಾತಿನ ಮೊರ್ಬಿಯವರಾದ ಜಸ್ವಂತ್ ರಾಯ್ ಮೆಹ್ತಾ 1946 ಬೆಂಗಳೂರಿಗೆ ವಲಸೆ ಬಂದರು. ತಾವು ಮಾಡುತ್ತಿದ್ದ ಖಾಸಗಿ ಕಂಪನಿ ಕೆಲಸ ತೊರೆದು ಗುಜರಾತಿನಲ್ಲಿ "ರಾಜೇಶ್ ಡೈಮಂಡ್ ಕಂಪನಿ" ಎಂಬ ಹೆಸರಿನಲ್ಲಿ ಸೆಮಿ-ಪ್ರೆಶಿಯಸ್ ಸ್ಟೋನ್ಸ್ ವ್ಯವಹಾರ ಪ್ರಾರಂಭಿಸಿದರು.
ಇನ್ನು ಕನ್ಹಯ್ಯಾ ಶರ್ಮಾ 251 ರೂಪಾಯಿ ಹೂಡಿಕೆಯೊಂದಿಗೆ ಉದ್ಯಮ ಪ್ರಾರಂಭಿಸಿ ಕೋಟ್ಯಾಂತರ ರೂಪಾಯಿ ಗಳಿಸುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕನ್ಹಯ್ಯಾ ಶರ್ಮಾ 23 ನೇ ವಯಸ್ಸಿನಲ್ಲಿ 251 ರೂಪಾಯಿ ಬಂಡವಾಳದೊಂದಿಗೆ ಐಟಿ ಮತ್ತು ಕಾನೂನು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಕಂಪನಿಯೊಂದನ್ನು ಸ್ಥಾಪಿಸಿದ್ದು ಇಂದು ಕನ್ಹಯ್ಯಾ ಶರ್ಮಾ ಅವರ ವಹಿವಾಟು ಕೋಟಿ ರೂಪಾಯಿ ತಲುಪಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications