ಇಂಡಿಯನ್ ಬಿಲಿಯನೇರ್ ಉದ್ಯಮಿ ಅನಿಲ್ ಅರ್ಗವಾಲ್ ಅವರನ್ನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿಸುವುದಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಕನಸುಗಳನ್ನು ಬೆನ್ನತ್ತುವ ಬಗ್ಗೆ ಮಾತನಾಡಿದ್ದರು. ಅನಿಲ್ ಅಗರ್ವಾಲ್ ಅವರು ವೇದಾಂತ ರಿಸೋರ್ಸ್ ಲಿಮಿಟೆಡ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾಗಿದ್ದಾರೆ.
ಸಣ್ಣ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅನಿಲ್ ಅಗರ್ವಾಲ್ ಪಾಟ್ನಾದ ಮಾರ್ವಾಡಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆಯ ವ್ಯವಹಾರವನ್ನು ವಿಸ್ತರಿಸುವುದಕ್ಕ ನಿರ್ಧರಿಸಿದ್ದರು. ವೃತ್ತಿ ಜೀವನದಲ್ಲಿನ ಅವಕಾಶಗಳನ್ನು ಹುಡುಕುವುದಕ್ಕಾಗಿ 19ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದರು.

ಗಣಿ ಉದ್ಯಮಿ 1970ರಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿ ತನ್ನ ಯೌವನದಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ್ದರು. ಕೇಂಬ್ರಿಡ್ಜ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅನಿಲ್ ಅಗರ್ವಾಲ್, "ನಾನು ನನ್ನ 20ರ ಹಾಗೂ 30ರ ವಯಸ್ಸಿನಲ್ಲಿ ಬಹಳ ಕಷ್ಟಪಟ್ಟಿದ್ದು, ಇತರರನ್ನು ನೋಡಿ ನಾನು ಕೂಡ ಅವರಂತೆ ಆಗಬೇಕೆಂದು ಬಯಸಿದ್ದೆ. ಆದರೆ ಆ ಕನಸನ್ನು ನನಸು ಮಾಡುವುದಕ್ಕೆ ಪ್ರಾರಂಭಿಸಿದ್ದ 9 ಉದ್ಯಮ ಕೂಡ ವಿಫಲಗೊಂಡಿತ್ತು," ಎಂದಿದ್ದಾರೆ.
"ಆ ಮೂಲಕ ಖಿನ್ನತೆಗೆ ಒಳಗಾಗಿದ್ದೆ. ಆ ಬಳಿಕ ನಾನು ಮೊದಲ ಯಶಸ್ಸನ್ನು ಕಂಡಿದ್ದೆ. ಕಾಲೇಜಿಗೆ ಹೋಗದ ವ್ಯಕ್ತಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸಿರುವುದು ಯಾವ ಕನಸಿಗಿಂತಲೂ ಕಡಿಮೆಯಿಲ್ಲದ ಸಂಗತಿಯಾಗಿದೆ," ಎಂದು ಕೂಡಾ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.
"ಆ ದಿನ ನನ್ನ ಸುತ್ತಲೂ 20 ವರ್ಷ ವಯಸ್ಸಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸುತ್ತುವರಿದಿದ್ದು, ಕೈಯನ್ನು ಕುಲುಕುತ್ತ ದೊಡ್ಡ ನಗುವಿನೊಂದಿಗೆ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಅದೊಂದು ಅವಿಸ್ಮರಣೀಯ ಕ್ಷಣವಾಗಿತ್ತು," ಎಂದು ಅನಿಲ್ ಅಗರ್ವಾಲ್ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಆ ಅನುಭವವನ್ನು ಬರೆದುಕೊಂಡಿದ್ದಾರೆ.
ಅನಿಲ್ ಅರ್ಗವಾಲ್ ಅವರು ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಳ ಸ್ಫೂರ್ತಿದಾಯಕ ಪೋಸ್ಟ್‌ಗಳನ್ನು ಹಾಕುವ ಮೂಲಕ ಇತರರಿಗೆ ಬಹುದೊಡ್ಡ ಪ್ರೇರಕ ಶಕ್ತಿಯಾಗಿದ್ದಾರೆ. ಅವರು ಟ್ವಿಟರ್‌ನಲ್ಲಿ 1,63,000 ಫಾಲೋವರ್‌ಗಳನ್ನು ಹೊಂದಿದ್ದಾರೆ. ಅವರ ಕುಟುಂಬವು 32000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಕಡಿಮೆ ವರ್ಷದಲ್ಲಿಯೇ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು!
ಮಿಸ್ಬಾ ಅಶ್ರಫ್‌ನಂತೆಯೇ ಇನ್ನೂ ಹಲವು ಉದ್ಯಮಿಗಳು ಕೆಲವೇ ವರ್ಷಗಳಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. 2 ವರ್ಷದಲ್ಲಿ 83,000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿ ಬೆಳೆಸಿದ ಖ್ಯಾತಿಯು 35 ಹರೆಯದ ನಿಕಿಲ್ ವಿಶ್ವನಾಥನ್‌ಗೆ ಸಲ್ಲುತ್ತದೆ. ಭಾರತೀಯ ಮೂಲದ ಅಮೆರಿಕನ್ ಎಂಟ್ರೆಪ್ರೆನಿಯರ್ ಆಗಿರುವ ನಿಕಿಲ್ ವಿಶ್ವನಾಥನ್ ವಿಶ್ವದ ಪ್ರಮುಖ ವೆಬ್3 ಡೆವಲಪರ್ ಪ್ಲಾಟ್‌ಫಾರ್ಮ್ ಆಲ್ಕೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ನಿಕಿಲ್ ವಿಶ್ವನಾಥನ್ ಅವರು ಜೋಸೆಫ್ ಲಾವ್ ಜೊತೆ ಸೇರಿ ಆಲ್ಕೆಮಿಯನ್ನು ಹುಟ್ಟುಹಾಕಿದ್ದಾರೆ. 2020 ರಲ್ಲಿ ಇವರಿಬ್ಬರು ಪಂಥವೊಂದನ್ನು ಕಟ್ಟಿ ಅದರಲ್ಲಿ ಯಶಸ್ವಿಯಾಗಲು ನಿರ್ಧರಿಸಿದರು.
ಕೇವಲ 6 ತಿಂಗಳಲ್ಲಿ 9,900 ಕೋಟಿ ರೂಪಾಯಿ ಮೌಲ್ಯದ ಕಂಪನಿ ಕಟ್ಟಿದ ಖ್ಯಾತಿಯು ಅನಂತ್ ನಾರಾಯಣರಿಗೆ ಸಲ್ಲುತ್ತದೆ. ಅನಂತ್ ನಾರಾಯಣ ಈಗಾಗಲೇ ಪ್ರಮುಖ ಇ-ಕಾಮರ್ಸ್ ಬ್ರಾಂಡ್ ಮಿಂತ್ರಾ ಸಿಇಒ ಆಗಿ ಕಾರ್ಪೊರೇಟ್ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ನಂತರದಲ್ಲಿ ಅವರು ತಮ್ಮದೇ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು.
ನಡುವೆ ಅನಂತ್ ಅವರು ಪ್ರಾರಂಭಿಸಿದ ಕಂಪೆನಿಯು ಬಿಲಿಯನ್ ಡಾಲರ್ ಆಸ್ತಿ ಮೌಲ್ಯವನ್ನು ಗಳಿಸಿದ್ದು, ಬಹಳ ವೇಗವಾಗಿ ಯೂನಿಕಾರ್ನ್ ಟ್ಯಾಗ್ ಅನ್ನು ಭಾರತದಲ್ಲಿ ಪಡೆದುಕೊಂಡಿದೆ. ಅನಂತ್ ನಾರಾಯಣ ಅವರು ಮೆನ್ಸಾ ಬ್ರಾಂಡ್‌ನ ಸಂಸ್ಥಾಪಕರಾಗಿದ್ದಾರೆ. ಇದು ಭಾರತದ ಮೊದಲ ಇ-ಕಾಮರ್ಸ್ ರೋಲ್-ಅಪ್ ಕಂಪನಿಯಾಗಿದ್ದು, 1.2 ಬಿಲಿಯನ್ ಡಾಲರ್ (9,900 ಕೋಟಿ) ಆಸ್ತಿ ಮೌಲ್ಯವನ್ನು ಹೊಂದಿದೆ.


Click it and Unblock the Notifications