ಗೂಗಲ್ ಪೋಷಕ ಸಂಸ್ಥೆಯಾದ ಆಲ್ಫಾಬೇಟ್‌ನ ಸಿಇಒ, ಭಾರತ ಮೂಲದ ಸುಂದರ್ ಪಿಚೈಗೆ 2022ರಲ್ಲಿ ಸಂಸ್ಥೆಯು ಒಟ್ಟಾಗಿ 226 ಮಿಲಿಯನ್ ಡಾಲರ್ ಪರಿಹಾರವನ್ನು ನೀಡಲಾಗಿದೆ. ಸರಾಸರಿ ಉದ್ಯೋಗಿಯ ವೇತನಕ್ಕಿಂತ 800 ಪಟ್ಟು ಹೆಚ್ಚು ಈ ಪರಿಹಾರವಾಗಿದೆ ಎಂದು ಕಂಪನಿಯು ಶುಕ್ರವಾರ ಸೆಕ್ಯುರಿಟೀಸ್ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ ಸುಂದರ್ ಪಿಚೈಗೆ ಬೆನ್ನೆಲುಬಾಗಿ ಇರುವ ಅಂಜಲಿ ಪಿಚೈ ಬಗ್ಗೆ ತಿಳಿಯುವುದು ಬೇಡವೇ?
ಸುಂದರ್ ಪಿಚೈನ ವೇತನ ಬಹುತೇಕ ಭಾಗ ಷೇರುಗಳ ಆಧಾರಿತವಾಗಿದೆ. ಪಿಚೈನ ಸ್ಟಾಕ್ ಮೌಲ್ಯ 1788 ಕೋಟಿ ರೂಪಾಯಿ ಆಗಿದೆ. ಅಂದರೆ ಸುಂದರ್ ಪಿಚೈ ಒಟ್ಟಾಗಿ 88,693 ಆಲ್ಫಾಬೇಟ್ ಷೇರುಗಳನ್ನು ಹೊಂದಿದ್ದಾರೆ, ಇದು ಸಂಸ್ಥೆಯ ಒಟ್ಟು ಷೇರಿನ ಶೇಕಡ 0.01 ಆಗಿದೆ. ಇನ್ನು ಗೂಗಲ್ ಉದ್ಯೋಗಿಗಳ ಸರಾಸರಿ ಆದಾಯವು 2.42 ಕೋಟಿ ರೂಪಾಯಿ ಆಗಿದೆ.

ಸಂಸ್ಥೆಯು ಜನವರಿಯಲ್ಲಿ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. 2019ರಲ್ಲಿ ಸುಂದರ್ ಪಿಚೈ ಗೂಗಲ್‌ನ ಸಿಇಒ ಆಗಿದ್ದಾರೆ. ಜೂನ್ 10, 1972ರಲ್ಲಿ ತಮಿಳುನಾಡಿನ ಮದುರೈನಲ್ಲಿ ಜನಿಸಿದ ಸುಂದರ್ ಪಿಚೈ, ಚೆನ್ನೈನಲ್ಲೇ ಬೆಳೆದವರು. ಕಾರಗ್ಪುರ ಐಐಟಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಭ್ಯಾಸ ಮಾಡಿಕೊಂಡ ಸುಂದರ್ ಪಿಚೈ ಸ್ಟಾನ್‌ಫಾರ್ಡ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದಾರೆ.
ಅಮೇರಿಕದ ವಾರ್ಟಾನ್ ಸ್ಕೂಲ್‌ನಲ್ಲಿ ಸುಂದರ್ ಪಿಚೈ ಎಂಬಿಎ ಪೂರ್ಣಗೊಳಿಸಿದ್ದು, 2004ರಲ್ಲಿ ಗೂಗಲ್ ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ. ಸುಂದರ್ ಪಿಚೈನ ಈ ಯಶಸ್ವಿಯ ಹಿಂದೆ ಮುಖ್ಯ ಪಾತ್ರವನ್ನು ಸುಂದರ್ ಪಿಚೈರ ಪತ್ನಿ ಅಂಜಲಿ ಪಿಚೈ ಪಾತ್ರ ಪ್ರಮುಖವಾದುದು. ಹಾಗಾದರೆ ಸುಂದರ್ ಪಿಚೈಗೆ ಸ್ಪೂರ್ತಿಯಾದ ಅಂಜಲಿ ಪಿಚೈ ಬಗ್ಗೆ ನಾವಿಲ್ಲಿ ತಿಳಿಯೋಣ ಮುಂದೆ ಓದಿ...
ಅಂಜಲಿ ಪಿಚೈ ಬಗ್ಗೆ ತಿಳಿದುಕೊಳ್ಳಿ
ಲಿಂಕ್ಡಿನ್‌ನಲ್ಲಿರುವ ಮಾಹಿತಿ ಪ್ರಕಾರ ಅಂಜಲಿ ಪಿಚೈ ಸಾಫ್ಟ್‌ವೇರ್ ಸಂಸ್ಥೆಯಾದ ಇನ್‌ಟ್ಯೂಟ್‌ನಲ್ಲಿ ಬ್ಯುಜಿನೆಸ್ ಆಪರೇಷನ್ ಮ್ಯಾನೆಜರ್ ಆಗಿ ಕಾರ್ಯ ಮಾಡುತ್ತಿದ್ದಾರೆ. ಅಂಜಲಿ ಪಿಚೈ ರಾಜಸ್ಥಾನದ ಕೋಟಾ ಮೂಲದವರು ಆಗಿದ್ದಾರೆ. ಅಂಜಲಿ ಪಿಚೈ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಬಳಿಕ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ.
ಅಂಜಲಿ ಪಿಚೈ ತಂದೆ ಕೋಟಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿಯಾಗಿದ್ದಾರೆ. ಐಐಟಿಯ ಮೊದಲ ವರ್ಷದಲ್ಲಿ ಸುಂದರ್ ಪಿಚೈ ಹಾಗೂ ಅಂಜಲಿ ಪಿಚೈ ಸ್ನೇಹಿತರಾಗಿದ್ದಾರೆ. ಬಳಿಕ ಇಬ್ಬರು ವಿವಾಹವಾಗಿದ್ದು, ದಂಪತಿಗೆ ಕಾವ್ಯ ಮತ್ತು ಕಿರಣ್ ಎಂಬ ಮಕ್ಕಳಿದ್ದಾರೆ. ಅಂಜಲಿ ಪಿಚೈ ಮೊದಲ ಬಾರಿಗೆ ಆಕ್ಸೆಂಚರ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.
ಅಂಜಲಿ ಪಿಚೈ ಆಕ್ಸೆಂಚರ್ ಸಂಸ್ಥೆಯಲ್ಲಿ ಮೂರು ವರ್ಷ ಉದ್ಯೋಗ ಮಾಡಿದ್ದಾರೆ. ಅದಾದ ಬಳಿಕ ಅಂಜಲಿ ಇನ್‌ಟ್ಯೂಟ್‌ನಲ್ಲಿ ಕಾರ್ಯನಿರ್ವಹಣೆ ಮಾಡಲು ಆರಂಭಿಸಿದ್ದಾರೆ. ಅಂಜಲಿ ಪಿಚೈ ಓದುವ ಹಾಗೂ ಪ್ರವಾಸ ಮಾಡುವ ಹವ್ಯಾಸವನ್ನು ಹೊಂದಿದ್ದಾರೆ. ಸುಂದರ್ ತನ್ನ ಪ್ರಸ್ತುತ ಸ್ಥಾನಕ್ಕೆ ಅಂಜಲಿಗೆ ಕ್ರೆಡಿಟ್ ನೀಡಿದ್ದಾರೆ. ಯಾಹೂ ಮತ್ತು ಟ್ವಿಟ್ಟರ್‌ನಿಂದ ಆಫರ್ ಬಂದಾಗ ಗೂಗಲ್ ಅನ್ನು ತೊರೆಯಲು ಬಯಸಿದ್ದರು. ಆದರೆ ಅಂಜಲಿ ಆ ನಿರ್ಧಾರವನ್ನು ಕೈಗೊಳ್ಳದಂತೆ ಗೂಗಲ್‌ನಲ್ಲೇ ಉಳಿಯುವಂತೆ ಪ್ರೋತ್ಸಾಹ ನೀಡಿದ್ದಾರೆ.
ಅಂಜಲಿ 1993ರಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ಹಾಗೆಯೇ ಅಂಜಲಿ ಮತ್ತು ಸುಂದರ್ ಪಿಚೈ ಜೊತೆಯಾಗಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸುಂದರ್ ಪಿಚೈ ಯುನೈಟೆಡ್ ಸ್ಟೇಟ್ಸ್‌ನ ಸ್ಟಾನ್‌ಫಾರ್ಡ್ ಯೂನಿವರ್ಸಿಟಿ ತೆರಳಿದ್ದು, ಇಬ್ಬರೂ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿದ್ದರು. ಅಂಜಲಿ 1999ರಿಂದ 2002ರವರೆಗೆ ಆಕ್ಸೆಂಚರ್‌ನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications