ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು 288 ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನು ಸುಮಾರು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸರಣಿ ರೈಲು ಅಪಘಾತದ ಸಂತ್ರಸ್ತರಿಗೆ ಹಲವಾರು ಮಂದಿ ಸಹಾಯಹಸ್ತ ಚಾಚಿದ್ದಾರೆ. ಈ ಪೈಕಿ ಅರ್ಜುನ್ ದೇಶ್‌ಪಾಂಡೆ ಕೂಡಾ ಒಬ್ಬರಾಗಿದ್ದಾರೆ.
ಈಗಾಗಲೇ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಎಸ್‌ಬಿಐ ಲೈಫ್ ಸೇರಿದಂತೆ ಹಲವಾರು ವಿಮಾ ಸಂಸ್ಥೆಗಳು ತಮ್ಮ ವಿಮೆ, ಡೆತ್ ಬೆನಿಫಿಟ್ ಕ್ಲೈಮ್ ಪ್ರಕ್ರಿಯೆ ಸರಳಗೊಳಿಸುವ ಮೂಲಕ ಈ ರೈಲು ದುರಂತ ಸಂತ್ರಸ್ತರಿಗೆ ಮತ್ತು ಸಂತ್ರಸ್ತರ ಕುಟುಂಬಕ್ಕೆ ಸಹಾಯ ಮಾಡುವ ಪ್ರಯತ್ನ ಮಾಡಿದೆ. ಈ ನಡುವೆ ಸಂತ್ರಸ್ತರಿಗೆ ಬೇಕಾದ ಔಷಧಿಯನ್ನು ಪಡೆಯಲು ಅರ್ಜುನ್ ದೇಶ್‌ಪಾಂಡೆ ಸಹಾಯ ಮಾಡಿದ್ದಾರೆ. ಅರ್ಜುನ್ ದೇಶ್‌ಪಾಂಡೆ ಯಾರು ಎಂದು ತಿಳಿಯಲು ಮುಂದೆ ಓದಿ..

ಅರ್ಜುನ್ ದೇಶ್‌ಪಾಂಡೆ ಯಾರು?
ಅರ್ಜುನ್ ದೇಶ್‌ಪಾಂಡೆ 2018ರಲ್ಲಿ ಉದ್ಯಮವನ್ನು ಆರಂಭ ಮಾಡಿದ್ದಾರೆ. ತನ್ನ 16ನೇ ವಯಸ್ಸಿನಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಲೆಗಿಂತ ಕಡಿಮೆ ಬೆಲೆಗೆ ಔಷಧಿಯನ್ನು ಮಾರಾಟ ಮಾಡಲು ಅರ್ಜುನ್ ದೇಶ್‌ಪಾಂಡೆ ಆರಂಭಿಸಿದ್ದಾರೆ. ಪ್ರಸ್ತುತ ಅರ್ಜುನ್ ದೇಶ್‌ಪಾಂಡೆ ಜೆನರಿಕ್ ಆಧಾರ್ ಸಂಸ್ಥೆಯ ಸಿಇಒ ಆಗಿದ್ದಾರೆ.
ಜೆನರಿಕ್ ಆಧಾರ್ ಒಂದು ಸ್ಟಾರ್ಟ್‌ಅಪ್ ಸಂಸ್ಥೆಯಾಗಿದ್ದು ಈ ಸಂಸ್ಥೆಯು ಶೇಕಡ 80 -90 ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿಯನ್ನು ನೀಡುತ್ತದೆ. ಈ ಸಂಸ್ಥೆಯನ್ನು 21ನೇ ವಯಸ್ಸಿನಲ್ಲಿಯೇ ಮುನ್ನಡೆಸಲು ಆರಂಭಿಸಿದ್ದಾರೆ. ಹಾಗೆಯೇ ದೇಶದ ಅತೀ ಕಿರಿಯ ವಯಸ್ಸಿನ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.
ಜೆನರಿಕ್ ಆಧಾರ್ ಸಂಸ್ಥೆಯು ಡಬ್ಲ್ಯೂಎಚ್‌ಒ - ಜಿಎಂಪಿನ ಅಧಿಕೃತ ಔಷಧಿಗಳಿಗೆ ಸುಮಾರು ಶೇಕಡ 80ರಿಂದ 90ರವರೆಗೆ ಆಫರ್ ಅನ್ನು ನೀಡುತ್ತದೆ. ಹಲವಾರು ಫಾರ್ಮಾ ಸಂಸ್ಥೆಗಳು ಸರಿಸುಮಾರು ಶೇಕಡ 10ರಿಂದ 15ರಷ್ಟು ರಿಯಾಯಿತಿ ಬೆಲೆಯಲ್ಲಿ ಔಷಧಿಗಳನ್ನು ನೀಡುವಾಗ ಜೆನರಿಕ್ ಆಧಾರ್ ಮಾತ್ರ ಭಾರೀ ರಿಯಾಯಿತಿ ದರದಲ್ಲಿ ಔಷಧಿಗಳನ್ನು ನೀಡುತ್ತದೆ.
ದೇಶದ ಅತೀ ಹಿರಿಯ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಮುಂಬೈನಲ್ಲಿ ಜೆನರಿಕ್ ಆಧಾರ್‌ಗೆ ಹಣಕಾಸು ಸಹಾಯ ಮಾಡಿದ್ದಾರೆ. ಪ್ರಸ್ತುತ 500 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ.
ಜೆನರಿಕ್ ಆಧಾರ್ ಇಷ್ಟು ಪ್ರಮಾಣದಲ್ಲಿ ರಿಯಾಯಿತಿಯನ್ನು ನೀಡುವ ಸಲುವಾಗಿ ಮಧ್ಯಸ್ಥರಾದ ಮಾರುಕಟ್ಟೆದಾರರು, ವಿತರಣೆದಾರರು, ಸ್ಟಾಕ್‌ದಾರರು ಹೀಗೆ ಯಾರ ಸಹಾಯವನ್ನು ಕೂಡಾ ಪಡೆಯುವುದಿಲ್ಲ. ಸೋಂಕು ನಿರೋಧಕ ಲೆವೊಸೆಟಿರಿಜಿನ್ ಒಂದು ಸ್ಟ್ರಿಪ್‌ಗೆ ರಿಟೇಲ್ ದರವು 55 ರೂಪಾಯಿ ಆಗಿದೆ. ಆದರೆ ಜೆನರಿಕ್ ಆಧಾರ್‌ನಲ್ಲಿ ಇದರ ಬೆಲೆಯು ಸ್ಟ್ರಿಪ್‌ಗೆ 6 ರೂಪಾಯಿ ಆಗಿದೆ.
ಒಡಿಶಾ ರೈಲು ದುರಂತ ಸಂತ್ರಸ್ತರಿಗೆ ಸಹಾಯ ಮಾಡಿದ್ದು ಹೇಗೆ?
ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ಅರ್ಜುನ್ ದೇಶ್‌ಪಾಂಡೆ ಉಚಿತ ಔಷಧಿಯನ್ನು ನೀಡಲು ಸೂಚನೆ ನೀಡಿದ್ದಾರೆ. ಒಡಿಶಾದ 50 ಕ್ಕೂ ಹೆಚ್ಚು ಕೆಮಿಸ್ಟ್‌ಗಳ ತಂಡಕ್ಕೆ ಜನರಿಗೆ ಸಹಾಯ ಮಾಡಲು ಮತ್ತು ಉಚಿತ ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಅಗತ್ಯ ಸಹಾಯವನ್ನು ನೀಡಲು ಸೂಚನೆ ನೀಡಿದ್ದಾರೆ.
ಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಅರ್ಜುನ್ ದೇಶ್‌ಪಾಂಡೆಯನ್ನು CPhI, ಎಂಎಸ್‌ಎಂ, ಡಿಪಿಯು, ಬ್ಲಾಕ್‌ಬುಕ್ ಜರ್ಮನಿ, ಮತ್ತು ಐಐಟಿ ಮುಂಬೈ ಮತ್ತು ದೆಹಲಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಿಗೆ ಆಹ್ವಾನಿಸಲಾಗಿದೆ.
ನೆರಿಕ್ ಆಧಾರ್‌ನಲ್ಲಿ ಹೂಡಿಕೆಗೆ ರತನ್ ಟಾಟಾ ಮುಂದಾಗಿದ್ದು ಹೇಗೆ?
ಆರಂಭದ ಮೊದಲ ಕೆಲವು ವರ್ಷಗಳಲ್ಲಿ ಜೆನರಿಕ್ ಆಧಾರ್ ಶೀಘ್ರವಾಗಿ ಬೆಳವಣಿಗೆಯನ್ನು ಕಂಡಿದ್ದು, ಗಳಿಕೆಯನ್ನು ಕೂಡಾ ಪಡೆದಿದೆ. ಇದು ರತನ್ ಟಾಟಾರ ಗಮನವನ್ನು ಸೆಳೆದಿದೆ. ಸಂಸ್ಥೆಯ ಕಾರ್ಯತಂತ್ರದ ಬಗ್ಗೆ ಆಕರ್ಷಿತರಾದ ರತನ್ ಟಾಟಾ ಬಳಿಕ ತಾವಾಗಿಯೆ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.


Click it and Unblock the Notifications