ವಿವೇಕ್ ಚಂದ್ ಸೆಹಗಲ್ ಓರ್ವ ಪ್ರಸಿದ್ಧ ಮಿಲಿಯನೇರ್ ಉದ್ಯಮಿಯಾಗಿದ್ದು, ಇವರು ಭಾರತ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಹೆಸರುವಾಸಿಯಾಗಿದ್ದಾರೆ. 66 ನೇ ವಯಸ್ಸಿನ ಇವರು $12.5 ಬಿಲಿಯನ್ (1,05,600 ಕೋಟಿ ರೂಪಾಯಿ) ಆದಾಯವಿರುವ ಮದರ್‌ಸನ್ ಗ್ರೂಪ್‌ನ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೆಹಗಲ್ ಅವರು ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಭಾರತೀಯ ಎಂದು ಗುರುತಿಸಲ್ಪಟ್ಟಿದ್ದಾರೆ. 1975 ರಲ್ಲಿ, ಅವರು ತಮ್ಮ ದಿವಂಗತ ತಾಯಿ ಶ್ರೀಮತಿ ಸ್ವರಣ್ ಲತಾ ಸೆಹಗಲ್ ಅವರೊಂದಿಗೆ ಸೇರಿಕೊಂಡು ಬೆಳ್ಳಿ ವ್ಯಾಪಾರ ಉದ್ಯಮವಾಗಿ ವ್ಯಾಪಾರವನ್ನು ಪ್ರಾರಂಭಿಸಿದರು. ಹೀಗಾಗಿಯೇ ಅವರು ತಮ್ಮ ಸಂಸ್ಥೆಗೆ ಮದರ್‌ಸನ್ ಎಂದು ಹೆಸರಿಸಿದರು.

ವಿವೇಕ್ ಚಾಂದ್ ಸೆಹಗಲ್ ಅವರು ಸಂವರ್ಧನ ಮದರ್ಸನ್ ಗ್ರೂಪ್ ಅನ್ನು ಮುನ್ನಡೆಸುತ್ತಾರೆ, ಇದು ವಿಶಾಲವಾದ ಮದರ್ ಸನ್ ಗ್ರೂಪ್‌ನ ಅವಿಭಾಜ್ಯ ಅಂಗವಾಗಿದೆ, ಇದು ಆಟೋ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿದೆ. ಫೋರ್ಬ್ಸ್ ವರದಿ ಪ್ರಕಾರ 2024 ರ ಜನವರಿ 30 ರ ಹೊತ್ತಿಗೆ ಸೆಹಗಲ್ ಅವರ ನಿವ್ವಳ ಮೌಲ್ಯ 4.8 ಶತಕೋಟಿ ಯುಎಸ್ ಡಾಲರ್ (39,904 ಕೋಟಿ ರೂಪಾಯಿ) ಆಗಿದ್ದು, ಇವರು ಆಸ್ಟ್ರೇಲಿಯಾದ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿದ್ದಾರೆ.
ಅವರ ಸಂಪತ್ತಿನ ಪ್ರಾಥಮಿಕ ಮೂಲವು ಸಂವರ್ಧನ್ ಮದರ್‌ಸನ್ ಇಂಟರ್‌ನ್ಯಾಶನಲ್ ಬಂದಿದೆ. ಈ ಹಿಂದೆ ಇದನ್ನು ಮದರ್‌ಸನ್ ಸುಮಿ ಎಂದು ಕರೆಯಲಾಗುತ್ತಿತ್ತು. ಸೆಹಗಲ್ ಅವರಿಗೆ ಇಬ್ಬರು ಮಕ್ಕಳಿದ್ದು, ಈ ಪೈಕಿ ಲಕ್ಷ್ ವಾಮನ್ ಸೆಹಗಲ್, ಸಂವರ್ಧನ ಮದರ್ಸನ್ ಇಂಟರ್ ನ್ಯಾಷನಲ್ ಮತ್ತು ಮದರ್ಸನ್ ಸುಮಿ ವೈರಿಂಗ್ ಇಂಡಿಯಾ ಎರಡೂ ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದಾರೆ.
ವಿವೇಕ್ ಚಾಂದ್ ಸೆಹಗಲ್ ಆಸ್ಟ್ರೇಲಿಯಾದ ಪ್ರಜೆಯಾಗಿದ್ದು ಇವರು, ದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. 2016 ರಲ್ಲಿ, ಅವರು ಭಾರತದ ವರ್ಷದ EY ವಾಣಿಜ್ಯೋದ್ಯಮಿ ಪ್ರಶಸ್ತಿಯ ಗೌರಕ್ಕೆ ಭಾಜನರಾಗಿದ್ದಾರೆ. ಮದರ್‌ಸನ್ ಸುಮಿ ವೈರಿಂಗ್ ಇಂಡಿಯಾವನ್ನು ಸ್ಥಾಪಿಸಿದ್ದು ಇದು ಸುಮಿಟೊಮೊ ವೈರಿಂಗ್ ಸಿಸ್ಟಮ್ ಮತ್ತು ಮದರ್‌ಸನ್ಸ್ ಗ್ರೂಪ್ ನಡುವಿನ ಜಂಟಿ ಉದ್ಯಮವಾಗಿದೆ, ಇದು ಭಾರತೀಯ ವೈರಿಂಗ್ ಹಾರ್ನೆಸ್ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದೆ. ಈಗ್ರೂಪ್ ಬಿಎಂಡಬ್ಲ್ಯೂ, ಫೋರ್ಡ್, ಮರ್ಸಿಡಿಸ್, ಟೊಯೋಟಾ ಮತ್ತು ವೋಕ್ಸ್‌ವ್ಯಾಗನ್‌ನಂತಹ ಪ್ರಸಿದ್ಧ ಗ್ರಾಹಕ ಸಂಸ್ಥೆಗಳನ್ನು ಹೊಂದಿದೆ.


Click it and Unblock the Notifications