ಅನೇಕ ಯಶಸ್ವಿ ಉದ್ಯಮಿಗಳು ತಮ್ಮ ಮುಂದಿನ ಪೀಳಿಗೆಗೆ ತಾವು ಕಟ್ಟಿ ಬೆಳೆಸಿದ ವ್ಯಾಪಾರ ಸಾಮ್ರಾಜ್ಯವನ್ನು ಹಸ್ತಾಂತರಿಸುವುದು ನೋಡಬಹುದು. ಇಂತಹ ಶ್ರೇಷ್ಟ ಉದ್ಯಮಿಗಳು ತಮ್ಮ ಕಠಿಣ ಪರಿಶ್ರಮ ಹಾಗೂ ಕುಟುಂಬದ ಸಹಕಾರದಿಂದ ವ್ಯವಹಾರ ಸಾಮ್ರಾಜ್ಯ ಕಟ್ಟಿಬೆಳೆಸಿರುತ್ತಾರೆ. ಅವರ ನಿಧನದ ನಂತರ, ಕುಟುಂಬ ಸದಸ್ಯರು ಅವರ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ಸಂದೀಪ್ ಸಿಂಗ್ ಕೂಡಾ ಒಬ್ಬರಾಗಿದ್ದಾರೆ.
ಇವರು ಔಷಧೀಯ ಸಂಸ್ಥೆ ಅಲ್ಕೆಮ್ ಲ್ಯಾಬೊರೇಟರೀಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಗಿದ್ದಾರೆ. ಈ ಕಂಪನಿಯ ಸಂಸ್ಥಾಪಕ ಮತ್ತು ಗೌರವಾನ್ವಿತ ಅಧ್ಯಕ್ಷರಾಗಿದ್ದ ದಿವಂಗತ ಸಂಪ್ರದಾ ಸಿಂಗ್ ಅವರ ಮೊಮ್ಮಗನಾಗಿದ್ದಾರೆ. 40ರ ಹರೆಯದ ಸಂದೀಪ್ ಸಿಂಗ್ ಅವರು ಫಾರ್ಮಸಿಟಿಕಲ್ ಇಂಡಸ್ಟ್ರಿಯಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದ್ದು, ಅವರು ಸಂಸ್ಥೆಯ ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ.

ತಮ್ಮ ಪದವಿಯ ನಂತರ 2013 ರಲ್ಲಿ ಕಂಪನಿಯ ಮಂಡಳಿಗೆ ಸೇರಿದ್ದು, ಅವರು ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. 2017 ರಲ್ಲಿ ಎಂಡಿ ಹುದ್ದೆಗೇರಿದ ಅವರು, "ಬ್ಲೂ ಟ್ರೈಬ್ ಫುಡ್ಸ್"ನ ಸಂಸ್ಥಾಪಕರೂ ಆಗಿದ್ದಾರೆ. ಆಲ್ಕೆಮ್ ಲ್ಯಾಬ್ ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಭಾರತ ಮತ್ತು ಜಾಗತಿಕವಾಗಿ ಔಷಧೀಯ ಜೆನೆರಿಕ್ಸ್, ಫಾರ್ಮುಲೇಶನ್ಸ್ ಮತ್ತು ನ್ಯೂಟ್ರಾಸ್ಯುಟಿಕಲ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಕಂಪನಿಯು ಡಿಸೆಂಬರ್ ಕೊನೆಯ ವಾರದಲ್ಲಿ 58,766 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಈ ವೇಳೆ ಇದರ ಷೇರಿನ ಬೆಲೆ 4,915 ರೂಪಾಯಿ ಆಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯ ಹಾಗೂ ಫಾರ್ಮ ಲೀಡರ್ಸ್ ಇನ್ ಅಸೋಸಿಯೇಷನ್ ಸಹಯೋಗದ 'ಎಮರ್ಜಿಂಗ್ ಫಾರ್ಮಾ ಲೀಡರ್ ಆಫ್ 2016 ಪ್ರಶಸ್ತಿ'ಯನ್ನು ಸಿಂಗ್ ಅವರಿಗೆ ನೀಡಲಾಯಿತು. 2021 ರಲ್ಲಿ, ಅವರು 'ಇಟಿ ಮತ್ತು ಸ್ಪೆನ್ಸರ್ ಸ್ಟುವರ್ಟ್ 40 ಅಂಡರ್ 40' (ET AND SPENCER STUART 40 under 40) ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications