ರಾಕೇಶ್ ಶರ್ಮಾ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1980ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದವರು. 58 ವರ್ಷದ ಬ್ಯಾಂಕರ್ ಪ್ರತಿಷ್ಟಿತ ಐಡಿಬಿಐ ಬ್ಯಾಂಕ್‌ನಲ್ಲಿ ಎಂಡಿ ಹಾಗೂ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2018ರ ಅಕ್ಟೋಬರ್ 10ರಂದು ಅವರು ಐಡಿಬಿಐ ಬ್ಯಾಂಕ್‌ನಲ್ಲಿಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ರಾಕೇಶ್ ಶರ್ಮಾ ಅವರು ಒಬ್ಬ ಬ್ಯಾಂಕರ್ ಆಗಿ ಹಲವು ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. 2023ರ ಅಕ್ಟೋಬರ್ 9 ರ ಪ್ರಕಾರ, ಐಡಿಬಿಐ ಬ್ಯಾಂಕ್ 71,805 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಐಡಿಬಿಐ ಬ್ಯಾಂಕ್‌ಗೆ ಸೇರುವ ಮೊದಲು ಅವರು ಕೆನರಾ ಬ್ಯಾಂಕ್‌ನಲ್ಲಿ 2018ರ ಜುಲೈ ತಿಂಗಳಿನಿಂದ ಮೂರು ವರ್ಷಗಳ ಕಾಲ ಎಂಡಿ ಹಾಗೂ ಸಿಇಒ ಆಗಿ ಕೆಲಸ ಮಾಡಿದ್ದರು.

ಶರ್ಮಾ ಅವರು ಎಸ್‌ಬಿಐ ಬ್ಯಾಂಕ್‌ನಲ್ಲಿ ಸುಧೀರ್ಘ ಅವಧಿಗೆ ಅಂದರೆ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಅಲ್ಲಿ 2014 ರವರೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಅವರು ಲಕ್ಷ್ಮಿ ವಿಲಾಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಆಗಿ ಸೇರಿಕೊಂಡು 2014 ರ ಏಪ್ರಿಲ್‌ನಿಂದ 2015 ರ ಸೆಪ್ಟಂಬರ್‌ವರೆಗೆ ಅಂದರೆ ಸುಮಾರು 18 ತಿಂಗಳ ಕಾಲ ಕೆಲಸ ಮಾಡಿದ್ದಾರೆ.
ಅಲ್ಲಿಂದ ಶರ್ಮಾ ಅವರು 2015 ರ ಸೆಪ್ಟಂಬರ್‌ನಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ್ದು, ಸಾರ್ವಜನಿಕ ಬ್ಯಾಂಕ್‌ಗಳನ್ನು ಪುನಃಶ್ಚೇತನಗೊಳಿಸುವ ಕೇಂದ್ರ ಸರ್ಕಾರದ ಮಿಷನ್‌ನಲ್ಲಿ ತೊಡಗಿಸಿಕೊಂಡಿದ್ದರು. 1958 ರ ಜುಲೈ 2ರಂದು ಜನಿಸಿರುವ ಶರ್ಮಾ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಶರ್ಮಾ ಅವರು ಅಕೌಂಟೆನ್ಸಿ, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆ, ಬ್ಯಾಂಕಿಂಗ್, ಅರ್ಥಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ.
ಐಡಿಬಿಐ ಬ್ಯಾಂಕ್, ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮೆ ಸಹಯೋಗದಲ್ಲಿ ಹಣಕಾಸು ಸಂಸ್ಥೆಯೊಂದನ್ನು ಸ್ಥಾಪಿಸಿದೆ. ಇದನ್ನು 1964 ರಲ್ಲಿ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಸ್ಥಾಪಿಸಲಾಗಿದ್ದು, ಇದು ಕೈಗಾರಿಕಾ ವಲಯಕ್ಕೆ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ.


Click it and Unblock the Notifications