"ಉದ್ಯಮ" ಈ ಪದ ಕೇವಲ ಪುರುಷರಿಗೆ ಮೀಸಲಾದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ದೇಶದಲ್ಲಿ ಉದ್ಯಮಶೀಲತೆಯ ಜಗತ್ತಿನಲ್ಲಿ ಇನ್ನೂ ಪುರುಷರು ಪ್ರಾಬಲ್ಯ ಹೊಂದಿದ್ದರೂ ಈ ಅಂಕಿಸಂಖ್ಯೆಗಳು ಬದಲಾಗುತ್ತಿದೆ. ತಮ್ಮ ಸ್ಟಾರ್ಟ್‌ಅಪ್‌ಗಳನ್ನು ಯಶಸ್ಸಿನತ್ತ ಮುನ್ನಡೆಸುತ್ತಿರುವ ಪ್ರತಿಭಾವಂತ ಮಹಿಳೆಯರು ಉದ್ಯಮಿಗಳಾಗಿ ಮುನ್ನಡೆಯುತ್ತಿದ್ದಾರೆ.
ಭಾರತದ ಉದ್ಯಮಿ ಮತ್ತು ಹೂಡಿಕೆದಾರರಲ್ಲಿ ಐಟಿಸಿಟಿ ಬೆಂಗಳೂರಿನಲ್ಲಿ ಶ್ರೀಮಂತ ಸ್ವಯಂ ನಿರ್ಮಿತ (ಸ್ವಂತ ಬಲದಲ್ಲಿ ಉದ್ಯಮ ಹುಟ್ಟು ಹಾಕಿದ) ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ, ಬಳಿಕ ಬೈಜು ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಪಡೆದುಕೊಂಡಿದ್ದರೆ ನಂತರ ಸ್ಥಾನವನ್ನು ಉದ್ಯಮಿ ಅಂಬಿಗಾ ಸುಬ್ರಮಣಿಯನ್ ಅವರು ಪಡೆದಿದ್ದಾರೆ.

ಇತ್ತೀಚಿನ ಕೊಟಕ್ ಖಾಸಗಿ ಬ್ಯಾಂಕಿಂಗ್ ಹುರುನ್ "ಭಾರತದ ಪ್ರಮುಖ ಶ್ರೀಮಂತ ಮಹಿಳೆಯರು" ಪಟ್ಟಿಯ ಪ್ರಕಾರ ಅಂಬಿಗಾ ಸುಬ್ರಮಣಿಯನ್ ಅವರ ನಿವ್ವಳ ಮೌಲ್ಯವನ್ನು 1,830 ಕೋಟಿ ಎಂದು ಅಂದಾಜಿಸಲಾಗಿದೆ. ಅಂಬಿಗಾ ಅವರು, ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್ ಅನ್ನು ಮುನ್ನಡೆಸಿದ ಪ್ರಥಮ ಭಾರತೀಯ ಮಹಿಳೆ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ಅಂಬಿಗಾ ಅವರ ವಿದ್ಯಾಭ್ಯಾಸದ ಗಮನಿಸುವುದಾದರೆ ಅವರು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು ಬಳಿಕ ಯುಎಸ್‌ನ ಮಿಚಿಗನ್‌ನಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅಂಬಿಗಾ ಅವರು ಕಮ್ಯುನಿಕೇಷನ್ಸ್ ದೈತ್ಯ ಮೊಟೊರೊಲಾದೊಂದಿಗೆ ತಮ್ಮ ವೃತ್ತಿಜೀವನವನ್ನು 1998 ರಲ್ಲಿ ಆರಂಭಿಸಿದರು. ಇದಾದ ಬಳಿಕ 2004 ರಲ್ಲಿ ಮು ಸಿಗ್ಮಾಗೆ ( Mu Sigma )ಸೇರ್ಪಡೆಗೊಂಡರು. ಈ ಸಂಸ್ಥೆಯನ್ನು ಅವರ ಮಾಜಿ ಪತಿ ಧೀರಜ್ ರಾಜಾರಾಂ ಸ್ಥಾಪಿಸಿದ್ದರು.
ಸಿಒಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಕಂಪನಿಯಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದರು . ನಂತರ ಪ್ರಮುಖ ಡೇಟಾ ಅನಾಲಿಟಿಕ್ಸ್ ಸಂಸ್ಥೆಯ ಸಿಇಒ ಆಗಿದ್ದರು. 2017 ರಲ್ಲಿ, ಅವರು ಕೊಟಕ್ ಖಾಸಗಿ ಬ್ಯಾಂಕಿಂಗ್ ಹುರುನ್ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಎಂಟು ಶ್ರೀಮಂತ ಸ್ವಯಂ-ನಿರ್ಮಿತ ಉದ್ಯಮಿಗಳಲ್ಲಿ ಕಿರಿಯ ಉದ್ಯಮಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಧೀರಜ್ ರಾಜಾರಾಂ ಮತ್ತು ಅಂಬಿಗಾ ಅವರಿಬ್ಬರು ವಿಚ್ಚೇದನಗೊಂಡು ತಮ್ಮ ದಾಂಪತ್ಯ ಜೀವನ ಕೊನೆಗೊಳಿಸಿದರು. ಇದಾದ ಬಳಿಕ ಅಂಬಿಗಾ Mu Sigmaದಲ್ಲಿದ್ದ ಹುದ್ದೆಯಿಂದ ಹೊರಬಂದರು. ಕಂಪನಿಯ ನಿಯಂತ್ರಕ ಷೇರುದಾರರಾಗಲು ರಾಜಾರಾಂ ಅವರು ಕಂಪನಿಯಲ್ಲಿ ಅಂಬಿಗಾರ 24 ಪ್ರತಿಶತ ಪಾಲನ್ನು ಖರೀದಿಸಿದರು.
ತದನಂತರ ಅಂಬಿಗಾ ತನ್ನ ಮುಂದಿನ ಸಾಹಸವಾಗಿ hyphen.social ಅನ್ನು 2018 ರಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯಾಗಿ ಪ್ರಾರಂಭಿಸಿದರು. Innov8, Piper Biosciences, Box8, ICE ಕ್ರಿಯೇಟಿವ್ ಎಕ್ಸಲೆನ್ಸ್ ಮತ್ತು ಕಾರ್ಟರ್‌ಎಕ್ಸ್‌ನಂತಹ ಮುಂಬರುವ ಸಂಸ್ಥೆಗಳನ್ನು ಬೆಂಬಲಿಸುವ ಮೂಲಕ ಅವರು ಯಶಸ್ವಿ ಹೂಡಿಕೆದಾರರಾಗಿ ಹೊರಹೊಮ್ಮಿದರು.


Click it and Unblock the Notifications