ಬೆಂಗಳೂರನ್ನು ಭಾರತದ ಐಟಿ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಹಲವಾರು ಸಿರಿವಂತರು ಹಾಗೂ ಖ್ಯಾತ ಉದ್ಯಮಿಗಳು ನೆಲೆಸಿದ್ದಾರೆ. ಕಿರಣ್ ಮಜುಂದಾರ್ ಶಾ, ವಿಪ್ರೊದ ಅಜೀಂ ಪ್ರೇಮ್‌ಜಿ ಮತ್ತು ಇನ್ಫೋಸಿಸ್‌ನ ಎನ್‌ಆರ್ ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಈ ಬಾರಿ ಚಿರಪರಿಚಿತರಲ್ಲದ ಬೆಂಗಳೂರಿನ ವ್ಯಕ್ತಿಯೊಬ್ಬರು 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023 ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ಬಿಲಿಯನೇರ್ ಅರ್ಜುನ್ ಮೆಂಡಾ. ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಅತ್ಯಂತ ಶ್ರೀಮಂತ ವ್ಯಕ್ತಿ ಅರ್ಜುನ್ ಮೆಂಡಾ ಈ ಮೂಲಕ ಗಮನಸೆಳೆದಿದ್ದಾರೆ. ಬೆಂಗಳೂರು ಮೂಲದ ಸಂಸ್ಥೆ ಆರ್‌ಎಂಜೆಂಡ್ ಕಾರ್ಪ್ ಮುನ್ನಡೆಸುತ್ತಿರುವ ಅರ್ಜುನ್ ಮೆಂಡಾ ಮತ್ತು ಅವರ ಕುಟುಂಬವು 37,000 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದೆ.

ಅರ್ಜುನ್ ಮೆಂಡಾ ಯಾರು?
ಅರ್ಜುನ್ ಮೆಂಡಾ ಇಂದು ಅತ್ಯಂತ ಸಿರಿವಂತನಾಗಿ ಹೊರಹೊಮ್ಮಿದ್ದರೂ, ಪುಟ್ಟ ಉದ್ಯಮವನ್ನು ಪ್ರಾರಂಭಿಸಿ ಅದನ್ನು ಬಹು-ಶತಕೋಟಿ-ಡಾಲರ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸುವ ದಾರಿ ಸುಲಭದಾಯಕವಾಗಿರಲಿಲ್ಲ. ಅದಕ್ಕಾಗಿ ಅವರ ಶ್ರಮ ಪಟ್ಟು, ಶೃದ್ದೆಯಿಂದ ಕೆಲಸ ಮಾಡಿದ್ದಾರೆ. ಮೆಂಡಾ ಅವರು ಈಗ ಪಾಕಿಸ್ತಾನದಲ್ಲಿರುವ ಶಿಕರ್‌ಪುರ್ ಸಿಂಗ್‌ನಲ್ಲಿ ಜನಿಸಿದ್ದರು.
ಭಾರತ - ಪಾಕಿಸ್ಥಾನ ಇಬ್ಬಾಗವಾದಾಗ ಮೆಂಡಾ ಮತ್ತು ಅವರ ಕುಟುಂಬವು ಪಾಕ್ ನಲ್ಲಿದ್ದ ತಮ್ಮ ಸಂಪೂರ್ಣ ಸಂಪತ್ತು ಮತ್ತು ಆಸ್ತಿಯನ್ನು ತ್ಯಜಿಸಿ ಭಾರತಕ್ಕೆ ಬಂದರು. ಕುಟುಂಬದ ಆರ್ಥಿಕ ಸಮಸ್ಯೆಗಳ ನಡುವೆಯೂ ವಿದ್ಯಾರ್ಥಿವೇತನದ ಕಾರಣದಿಂದ ಅರ್ಜುನ್ ಮೆಂಡಾ ಅವರು ಐಐಟಿ ಖರಗ್‌ಪುರದಲ್ಲಿ ಅಭ್ಯಾಸಿಸಲು ಸಾಧ್ಯವಾಯಿತು. ಇಂದು ಮೆಂಡಾ ಫೌಂಡೇಶನ್ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಹಲವರ ಕನಸುಗಳನ್ನು ನನಸು ಮಾಡುತ್ತಿದೆ.
ಮೆಂಡಾ ಅವರು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನಲ್ಲಿ ಇಂಡಸ್ಟ್ರೀಯಲ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967 ರಲ್ಲಿ, ಅವರು ಬೆಂಗಳೂರಿನಲ್ಲಿ ಸಣ್ಣಮಟ್ಟದ ಕಾರ್ಯಾಚರಣೆಯೊಂದಿಗೆ ಉದ್ಯಮಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೆಲವು ವರ್ಷಗಳ ನಂತರ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿ 1980 ರ ದಶಕದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಎಂಟ್ರಿ ಕೊಟ್ಟರು. 2002 ರಲ್ಲಿ, ಆರ್‌ಎಂಜೆಡ್ ಕಾರ್ಪ್ ಅನ್ನು ಸ್ಥಾಪಿಸಿದರು.
ಇಂದು ಆರ್‌ಎಂಜೆಡ್ ಕಾರ್ಪ್ ವ್ಯವಹಾರವನ್ನು ಅವರ ಇಬ್ಬರು ಪುತ್ರರಾದ ರಾಜ್ ಮತ್ತು ಮನೋಜ್ ಮೆಂಡಾ ನಿರ್ವಹಿಸುತ್ತಿದ್ದಾರೆ. ಅರ್ಜುನ್ ಮೆಂಡಾ ಗ್ರೂಪ್ ಚೇರ್ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಂಪನಿಯೂ ಕಾರ್ಪೊರೇಟ್ ಕಚೇರಿಗಳ ಟಾಪ್ ಬಿಲ್ಡರ್‌ಗಳಲ್ಲಿ ಒಂದಾಗಿದ್ದು ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಇತರ ಸಾಫ್ಟ್‌ವೇರ್ ಹಬ್‌ಗಳಲ್ಲಿ ಇವರ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.


Click it and Unblock the Notifications