Bhavish Aggarwal: ಮೈಕ್ರೋಸಾಫ್ಟ್‌ ಉದ್ಯೋಗ ತೊರೆದು 49225 ಕೋಟಿ, 39832 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಭವೀಶ್‌ ಅಗರ್ವಾಲ್

ಐಐಟಿಯು ಹೆಚ್ಚು ಯಶಸ್ವಿ ವ್ಯಕ್ತಿಗಳನ್ನು ತಯಾರಿಸುವತ್ತ ಒಲವು ಹೊಂದಿದೆ. ಇದು ಬಿಸಿನೆಸ್‌ ಲೀಡರ್ಸ್‌ ಹಾಗೂ ಬಿಸಿನೆಸ್‌ ಓನರ್ಸ್‌ ಅನ್ನು ತಯಾರಿಸುತ್ತಿದೆ. ಅದರಂತೆ ಮೈರೈಡ್‌ ಎಂಟರ್‌ಪ್ರೈಸರ್ಸ್‌ ಈ ಸಂಸ್ಥೆಯಿಂದ ಹೊರಬಂದಿದೆ. ಈ ಕಂಪನಿಯಲ್ಲಿ ಭವೀಶ್‌ ಅಗರ್ವಾಲ್‌ ಅವರು ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದಾರೆ. ಭವೀಶ್‌ ಅಗರ್ವಾಲ್‌ ಪಂಜಾಬ್‌ನ ಲುಧಿಯಾನಾದಲ್ಲಿ ಜನಿಸಿದ್ದಾರೆ.

ಭವೀಶ್‌ ಅಗರ್ವಾಲ್‌ ಅವರು 2007ರಲ್ಲಿ ಮೈಕ್ರೋಸಾಫ್ಟ್‌ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ಅವರು ಟೆಕ್ ಬೆಹೆಮೊತ್‌ನ ಉದ್ಯೋಗಿ ಆಗಿ ಅಲ್ಲಿ ಎರಡು ವರ್ಷ ಕೆಲಸ ಮಾಡಿದ್ದರು. ಭವೀಶ್‌ ಅಗರ್ವಾಲ್‌ ಅವರು ಉದ್ಯೋಗಕ್ಕೆ ಗುಡ್‌ಬೈ ಹೇಳಿದಾಗ ಅವರ ಜೀವನವು ದೊಡ್ಡ ತಿರುವು ಪಡೆದುಕೊಂಡಿದೆ. ಭವೀಶ್‌ ಅಗರ್ವಾಲ್‌ ಅವರು ಕೆಲಸವನ್ನು ಬಿಡುವಾಗ ಆ ಕಂಪನಿಯಲ್ಲಿ ಪ್ರಮುಖ ಉದ್ಯೋಗಿಯಾಗಿ ಗುರುತಿಸಿಕೊಂಡಿದ್ದರು.

 ಮೈಕ್ರೋಸಾಫ್ಟ್‌ ಉದ್ಯೋಗ ತೊರೆದು 2 ಕಂಪನಿ ಕಟ್ಟಿದ ಭವೀಶ್‌ ಅಗರ್ವಾಲ್!

ಭವೀಶ್‌ ಅಗರ್ವಾಲ್‌ ಅವರು ಎರಡು ಪೇಟೆಂಟ್‌ಗಳನ್ನು ಸಲ್ಲಿಸಿದ್ದರು ಹಾಗೂ ಮೂರು ಪ್ರಬಂಧಗಳನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದರು. 2004 ಮತ್ತು 2008ರ ನಡುವೆ ಐಐಟಿ ಮುಂಬೈನಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಮಾಡಿದ್ದರು. ಅವರು ಭಾರತದಲ್ಲಿ ಅತ್ಯಂತ ಹೊಸ ಮಾದರಿಯ ಓಲಾ ಕ್ಯಾಬ್ಸ್‌ ಅನ್ನು ಪ್ರಾರಂಭಿಸಿದರು.

ಭವೀಶ್‌ ಅಗರ್ವಾಲ್‌ ಅವರು ಈ ಕಂಪನಿಯನ್ನು ಪ್ರಾರಂಭಿಸಿದಾಗ ಇಂಟರ್‌ನೆಟ್‌ ಬಳಕೆಯು ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಆದರೆ, ಅವರು ಆಗಲೇ ಭವಿಷ್ಯದ ವಿಪುಲ ಅವಕಾಶಗಳ ಬಗ್ಗೆ ಊಹಿಸಿಕೊಂಡಿದ್ದರು. ಭವೀಶ್‌ ಅವರು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಮ್ಮೆ ಬೆಂಗಳೂರಿನಿಂದ ಬಂಡೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ಅವರಿಗೆ ಭಯಾನಕ ಕ್ಯಾಬ್‌ ಅನುಭವ ಆಗಿತ್ತು. ಅದರ ಪರಿಣಾಮವಾಗಿ ರೈಡ್-ಹೇಲಿಂಗ್‌ ಕಂಪನಿಯನ್ನು ತೆರೆಯುವ ಆಲೋಚನೆಯನ್ನು ಮಾಡಿದರು. ಒಪ್ಪಂದದ ದರಕ್ಕಿಂತ ಹೆಚ್ಚಿನ ಹಣವನ್ನು ನೀಡಲು ನಿರಾಕರಿಸಿದ ನಂತರ ಕ್ಯಾಬ್‌ನ ಚಾಲಕ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದರು.

ಭವೀಶ್‌ ಅವರು ರಾಜಲಕ್ಷ್ಮಿ ಅವರನ್ನು ವಿವಾಹವಾಗಿದ್ದಾರೆ. ಭವೀಶ್‌ ಓಲಾ ಮೂಲಕ ಭಾರತೀಯ ಕ್ಯಾಬ್‌ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಕಂಪನಿಯ ಇತ್ತೀಚಿನ ಆಸ್ತಿ ಮೌಲ್ಯವು 4.8 ಶತಕೋಟಿ ಡಾಲರ್‌ ಅಂದರೆ 39,832 ಕೋಟಿ ರೂಪಾಯಿ ಆಗಿದೆ. ಭವೀಶ್‌ ಅಗರ್ವಾಲ್ ಅವರು 2017ರಲ್ಲಿ ಓಲಾ ಎಲೆಕ್ಟ್ರಿಕ್‌ ಎಂಬ ಮತ್ತೊಂದು ಕಂಪನಿಯನ್ನು ಪ್ರಾರಂಭಿಸಿದರು. ಕಂಪನಿಯು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ.

ಭವೀಶ್‌ ಅಗರ್ವಾಲ್‌ ಅವರು ಕಳೆದ ವರ್ಷ 2400 ಕೋಟಿ (300 ಮಿಲಿಯನ್ ಡಾಲರ್) ರೂಪಾಯಿ ಸಂಗ್ರಹಿಸಿದ್ದಾರೆ. ಕಂಪನಿಯ ಮೌಲ್ಯವು 6 ಬಿಲಿಯನ್ ಡಾಲರ್ ಅಂದರೆ 49225 ಕೋಟಿ ರೂಪಾಯಿ ಆಗಿದೆ. ಎರಡು ಯುನಿಕಾರ್ನ್‌ಗಳನ್ನು ಸ್ಥಾಪಿಸಿರುವ ಕೆಲವೇ ಕೆಲವು ಭಾರತೀಯರಲ್ಲಿ ಅವರು ಕೂಡ ಒಬ್ಬರು. 2022ರಲ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 11700 ಕೋಟಿ ರೂಪಾಯಿ ಆಗಿದೆ.

ಇನ್ನು ಉತ್ತಮ ವೇತನ ನೀಡುವ ಉದ್ಯೋಗವನ್ನು ತೊರೆದು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾದವರ ವಿಚಾರಕ್ಕೆ ಬಂದಾಗ ನಮ್ಮ ಮುಂದೆ ಇನ್ನೂ ಹಲವಾರು ಮಂದಿಯ ಹೆಸರು ಬರುತ್ತದೆ. ಶಶಾಂಕ್‌ ಕುಮಾರ್‌, ಮೋಹಿತ್‌ ಅಹ್ಲುವಾಲಿಯಾ ಹಾಗೂ ಜಗಜ್ಯೋತ್‌ ಕೌರ್‌ ದಂಪತಿ, ಅನಿಲ್‌ ನಗರ್‌, ರಾಜೀವ್ ಭಾಸ್ಕರ್, ಬೆಂಗಳೂರಿನ ದಂಪತಿಗಳಾದ ನಿಧಿ ಸಿಂಗ್ ಮತ್ತು ಆಕೆಯ ಪತ್ನಿ ಶಿಖರ್ ವೀರ್ ಸಿಂಗ್ ತಮಗೆ ಉತ್ತಮ ವೇತನವನ್ನು ನೀಡುವ ಉದ್ಯೋಗ ತೊರೆದು ಯಶಸ್ವಿ ಉದ್ಯಮವನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ.

ಇನ್ನು ಈ ಪೈಕಿ ಶಶಾಂಕ್‌ ಕುಮಾರ್‌ ಅವರ ರೇಜರ್‌ಪೇ ಹೆಸರು ಹೆಸರು ಇತ್ತೀಚೆಗೆ ಬಿಡುಗಡೆಯಾದ ಹುರುನ್‌ ವರದಿಯಲ್ಲಿ ಭಾರತದ ಅತ್ಯಾಮೂಲ್ಯವಾದ ಪಟ್ಟಿ ಮಾಡಿದ ಕಂಪನಿಗಳಲ್ಲಿ ಕಾಣಿಸಿಕೊಂಡಿದೆ. ಮೋಹಿತ್‌ ಅಹ್ಲುವಾಲಿಯಾ ಹಾಗೂ ಜಗಜ್ಯೋತ್‌ ಕೌರ್‌ ಅವರು 2017ರ ಚಳಿಗಾಲದಲ್ಲಿ ಬಾಲಿಗೆ ವಿಹಾರಕ್ಕಾಗಿ ಪ್ರವಾಸ ಹೋಗಿದ್ದರು. ಅದಾದ ಬಳಿಕ ಉದ್ಯೋಗವನ್ನು ತೊರೆದು ತಮ್ಮದೆ ಆದ ಉದ್ಯಮವನ್ನು ಆರಂಭ ಮಾಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+