ವಿಶ್ವದಲ್ಲಿ ಹಲವಾರು ಸೆಲೆಬ್ರೆಟಿಗಳು, ಬಿಲಿಯನೇರ್‌ಗಳು ಕಾರು ಪ್ರೇಮಿಗಳು ಆಗಿದ್ದಾರೆ. ಯಾವುದೇ ಹೊಸ ಮಾಡೆಲ್‌ಗಳು ಆಟೋಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದಾಗಲೇ ಅದನ್ನು ಖರೀದಿ ಮಾಡುವ ಅದೆಷ್ಟೋ ಸೆಲೆಬ್ರೆಟಿಗಳು ಜಗತ್ತಿನಲ್ಲಿದ್ದಾರೆ. ಈ ನಡುವೆ ಇಲ್ಲೋರ್ವ ಬಿಲಿಯನೇರ್ ತನ್ನ ಪೇಟದ ಬಣ್ಣಕ್ಕೆ ಮ್ಯಾಚ್ ಆಗುವ 15 ಬೇರೆ ಬೇರೆ ಬಣ್ಣದ ಕಾರುಗಳನ್ನು ಹೊಂದಿದ್ದಾರೆ.
ಪ್ರತಿಯೊಬ್ಬ ಕಾರು ಪ್ರೇಮಿಯ ಬಹುದಿನದ ಕನಸು ಕನಿಷ್ಠ ಒಂದು ರೋಲ್ಸ್ ರಾಯ್ಸ್ ಅನ್ನು ಖರೀದಿ ಮಾಡುವುದು ಆಗಿರುತ್ತದೆ. ಕೆಲವರು ಈ ಕಾರನ್ನು ಖರೀದಿ ಮಾಡುವ ಹಗಲುಗನಸು ಕಾಣುತ್ತಲೇ ಇರುತ್ತಾರೆ, ಆದರೆ ಇನ್ನು ಕೆಲವರು ತಮ್ಮ ಕನಸನ್ನು ನನಸಾಗಿಸಲು ಪ್ರತಿ ದಿನ ಶ್ರಮಿಸುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಯುಕೆ ಮೂಲದ ಸಿಖ್ ಉದ್ಯಮಿ ಇದಕ್ಕೆ ಪ್ರಮುಖ ಉದಾಹರಣೆ.

ಕಾರು ಪ್ರೇಮಿಯಾದ ಸಿಖ್ ಉದ್ಯಮಿ ರೂಬೆನ್ ಸಿಂಗ್ ವಾಹನಗಳಿಂದಲೇ ತುಂಬಿದ ಅತೀ ದೊಡ್ಡ ಗ್ಯಾರೇಜ್ ಅನ್ನು ಹೊಂದಿದ್ದಾರೆ. ಅದು ಕೂಡಾ ಮುಖ್ಯವಾಗಿ ರೋಲ್ಸ್ ರಾಯ್ಸ್ ರೂಬೆನ್ ಸಿಂಗ್ ಕಾರಿನ ಗ್ಯಾರೇಜ್‌ನಲ್ಲಿ ಹೆಚ್ಚಾಗಿದೆ. ತನ್ನ ಪೇಟಕ್ಕೆ ಸಮವಾದ ಬಣ್ಣಕ್ಕೆ ಹೊಂದುವಷ್ಟು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ.
ಕೋಟ್ಯಾನುಗಟ್ಟಲೆ ಮೌಲ್ಯದ ಕಾರುಗಳ ಸಂಗ್ರಹ
ರೂಬೆನ್ ಸಿಂಗ್ ಅವರು ತಾನು ಧರಿಸಿದ ಪೇಟಕ್ಕೆ ತಕ್ಕುದಾದ ಬಣ್ಣವನ್ನು ಹೊಂದಿರುವ ತಮ್ಮ ರೋಲ್ಸ್ ರಾಯ್ಸ್ ಕಾರುಗಳ ಮುಂದೆ ಪೋಸ್ ನೀಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಹಲವಾರು ಬಾರಿ ಇವರ ಫೋಟೋಗಳು ವೈರಲ್ ಆಗಿದೆ. ಉದ್ಯಮಿ ಬಿಲಿಯನೇರ್‌ಗಟ್ಟಲೆ ಡಾಲರ್ ಮೌಲ್ಯದ ಬೃಹತ್ ಕಾರು ಸಂಗ್ರಹವನ್ನು ಹೊಂದಿದ್ದಾರೆ.
ಒಮ್ಮೆಲೇ 5 ರೋಲ್ಸ್ ರಾಯ್ಸ್ ಕಾರುಗಳ ಖರೀದಿ!
ಕಳೆದ ವರ್ಷ ದೀಪಾವಳಿಯಂದು, ರೂಬೆನ್ ಸಿಂಗ್ ಅವರು ವಿವಿಧ ಬಣ್ಣಗಳ ಐದು ರೋಲ್ಸ್ ರಾಯ್ಸ್ ಕಾರುಗಳನ್ನು ತನಗೆ ತಾನು ಉಡುಗೊರೆಯಾಗಿ ನೀಡಿದ್ದಾರೆ, ಈ ಮೂಲಕ ತನ್ನ ರೋಲ್ಸ್ ರಾಯ್ಸ್ ಕಾರುಗಳ ಸಂಗ್ರಹವನ್ನು ವಿಸ್ತರಿಸಿದರು. ಪ್ರಸ್ತುತ ರೂಬೆನ್ ಸಿಂಗ್ ಸುಮಾರು 15 ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ. ಆದರೆ ಕಾರಿನ ಮಾದರಿ ಮತ್ತು ಕಸ್ಟಮೈಸೇಶನ್ ಬಗ್ಗೆ ಮಾಹಿತಿ ಲಭ್ಯವಿಲ್ಲ.
ರೂಬೆನ್ ಸಿಂಗ್ ಭಾರತದವರಾಗಿದ್ದು, ಅವರ ಕುಟುಂಬವು 1970 ರ ದಶಕದಲ್ಲಿ ಯುಕೆಗೆ ವಲಸೆ ಬಂದಿದೆ. ಗ್ರಾಹಕ ಸೇವಾ ಹೊರಗುತ್ತಿಗೆ ವ್ಯವಹಾರ ಆಲ್‌ಡೇಪಿಎ (AlldayPA) ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಐಹರ್ ಕ್ಯಾಪಿಟಲ್ (Iher Capital) ಎರಡೂ ರೂಬೆನ್ ಸಿಂಗ್ ಒಡೆತನದಲ್ಲಿದೆ.
ಗ್ರಾಹಕ ಸೇವಾ ಹೊರಗುತ್ತಿಗೆ ವ್ಯವಹಾರ AlldayPA ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ Iher Capital ಎರಡೂ ಅವನ ಒಡೆತನದಲ್ಲಿದೆ. ರೂಬೆನ್ ಸಿಂಗ್‌ರನ್ನು "ಬ್ರಿಟಿಷ್ ಬಿಲ್ ಗೇಟ್ಸ್" ಎಂದು ಕರೆಯಲಾಗುತ್ತದೆ. ತನ್ನನ್ನು ತಾನು ಹೆಮ್ಮೆಯ ಬ್ರಿಟಿಷ್ ಸಿಖ್ ಎಂದು ಹೇಳಿಕೊಳ್ಳುತ್ತಾರೆ. "ನನ್ನ ನಂಬಿಕೆಯು ನನಗೆ ಶಕ್ತಿಯನ್ನು ನೀಡುತ್ತದೆ," ಎಂದು ರೂಬೆನ್ ಸಿಂಗ್ ಪ್ರತಿಪಾದಿಸುತ್ತಾರೆ.
ರೋಲ್ಸ್ ರಾಯ್ಸ್ ಮಾತ್ರವಲ್ಲ ಇನ್ನು ಕೆಲವು ದುಬಾರಿ ಕಾರುಗಳನ್ನು ರೂಬೆನ್ ಸಿಂಗ್ ಹೊಂದಿದ್ದಾರೆ. 15 ರೋಲ್ಸ್ ರಾಯ್ಸ್ ಜೊತೆಗೆ ರೂಬೆನ್ ಸಿಂಗ್ 3.22 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಲಂಬೋರ್ಗಿನಿ ಹುರಕಾನ್ ಅನ್ನು ಹೊಂದಿದ್ದಾರೆ. 12.95 ಕೋಟಿ ರೂಪಾಯಿ ಆರಂಭಿಕ ಬೆಲೆಯನ್ನು ಹೊಂದಿರುವ ಅತ್ಯಂತ ದುಬಾರಿ ಆಟೋಮೊಬೈಲ್, ಬುಗಾಟಿ ವೆಯ್ರಾನ್ ಅನ್ನು ಹೊಂದಿದ್ದಾರೆ. ರೂಬೆನ್ ಸಿಂಗ್ ಫೆರಾರಿ ಎಫ್12 ಬರ್ಲಿನೆಟ್ಟಾ, ಪೋರ್ಷೆ 918 ಸ್ಪೈಡರ್ ಮತ್ತು ಪಗಾನಿ ಹುಯೆರಾವನ್ನು ಹೊಂದಿದ್ದಾರೆ.


Click it and Unblock the Notifications