ಸಹೋದರ ಸಹೋದರಿ ಜೋಡಿಯೊಂದು ಸ್ಥಾಪಿಸಿದ ಕಂಪನಿಯೊಂದು ಹಲವು ಸೆಲೆಬ್ರಿಟಿಗಳನ್ನು ನಿರ್ವಹಿಸುತ್ತಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಕ್ರೀಡಾಪಟು, ಸಿನಿಮಾ ತಾರೆಯರು ಇವರ ಗ್ರಾಹಕರಾಗಿದ್ದಾರೆ.
ಒಡಹುಟ್ಟಿದವರಾಗಿರುವ ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಕ್ರೀಡಾ ನಿರ್ವಹಣಾ ವೃತ್ತಿಪರರಾಗಿದ್ದು, ಇಬ್ಬರು ಕಾರ್ನರ್‌ಸ್ಟೋನ್ ಎಂಬ ಸಂಸ್ಥೆಯನು ಹುಟ್ಟುಹಾಕಿದ್ದು, ಇದು ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಮಾಡುವ ಕಂಪನಿಯಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೀಗೆ ಖ್ಯಾತ ಕ್ರಿಕೆಟಿಗರ ನಿವ್ವಳ ಮೌಲ್ಯವು ನೂರಾರು ಕೋಟಿಗಳಷ್ಟಿರುತ್ತದೆ.

ಬ್ರ್ಯಾಂಡ್ ಡೀಲ್‌ಗಳು ಮತ್ತು ಎಂಡಾರ್ಸ್‌ಮೆಂಟ್‌ಗಳ ಮೂಲಕ ಅವರ ನಿವ್ವಳ ಮೌಲ್ಯ ನಿರ್ಮಾಣವಾಗಿರುತ್ತದೆ. ಇವರಿಬ್ಬರು ಬೃಹತ್ ಡೀಲ್ ಗಳನ್ನು ಪಡೆಯುವಲ್ಲಿಈ ಸಹೋದರ- ಸಹೋದರಿ ಜೋಡಿ ಸಹಾಯ ಮಾಡಿದೆ. ಉದ್ಯಮಿ ಬಂಟಿ ಸಜ್ದೇಹ್ ಅವರು ತನ್ನ ಸಹೋದರಿಯೊಂದಿಗೆ ಸೇರಿ ಆರಂಭಿಕ ಹಂತಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಿದ್ದು ಬಳಿಕ ಇದನ್ನು ಸಿನಿಮಾರಂಗಕ್ಕೂ ವಿಸ್ತರಿಸಿದರು.
ಸಹೋದರ - ಸಹೋದರಿಯ ಜೋಡಿಯೂ ವಿರಾಟ್ ಕೊಹ್ಲಿ ಅವರಿಗೆ ಕೋಟಿಗಟ್ಟಲೆ ಮೌಲ್ಯದ ಅನೇಕ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ಮಾಡಲು ಸಹಾಯ ಮಾಡಿದ್ದಾರೆ. ಅಡಿಡಾಸ್ ಮತ್ತು ಇತರ ಪ್ರಮುಖ ಬ್ರ್ಯಾಂಡ್‌ಗಳೊಂದಿಗಿನ ವಿರಾಟ್ ಅವರು ಒಪ್ಪಂದ ಮಾಡಿಕೊಂಡಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ವ್ಯವಹಾರದಲ್ಲಿ ಮಾತ್ರವಲ್ಲದೇ ಬಂಟಿ ಸಜ್ದೇಹ್ ಅವರು ಕೊಹ್ಲಿಯ ನಿಕಟ ಸ್ನೇಹಿತರಾಗಿದ್ದು, ಇವರಿಬ್ಬರೂ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 2008 ರಲ್ಲಿ ಆರಂಭವಾದ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಮೂಲಕ ವಿರಾಟ್ ಕೊಹ್ಲಿಯ ಸ್ಪೋರ್ಟ್ಸ್ ಅಪಿಯರೆಲ್ ಕಂಪನಿ ಪ್ಯೂಮಾದ ಮೂಲಕ 100 ಕೋಟಿ ರೂಪಾಯಿಗಳ ಎಂಡಾರ್ಸ್‌ಮೆಂಟ್ ಕಂಪನಿಯ ಮೊದಲ ವ್ಯವಹಾರಗಳಲ್ಲಿ ಒಂದಾಗಿದೆ.
ಪ್ರಸಿದ್ಧ ಕ್ರೀಡಾಪಟುಗಳಾದ ಪಿವಿ ಸಿಂಧು, ಸಾನಿಯಾ ಮಿರ್ಜಾ, ಕುಲದೀಪ್ ಯಾದವ್, ಬಾಲಿವುಡ್ ತಾರೆಯಾದ ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ ಹೀಗೆ ಹಲವು ಖ್ಯಾತನಾಮರು ರಿತಿಕಾ ಸಜ್ದೇಹ್ ಮತ್ತು ಬಂಟಿ ಸಜ್ದೇ ಅವರ ಏಜೆನ್ಸಿ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಗ್ರಾಹಕರಾಗಿದ್ದಾರೆ.
ಟೋಫ್ಲರ್ ಪ್ರಕಾರ, ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಅವರ ಕಂಪನಿ ಕಾರ್ನರ್‌ಸ್ಟೋನ್ 150 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ ಎಂದು ವರದಿಯಾಗಿದೆ. ಅವರ ಕಂಪನಿ ಹಲವು ಸೆಲೆಬ್ರಿಟಿಗಳನ್ನು ನಿರ್ವಹಿಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ನಿರಂತರ ಆದಾಯವನ್ನು ಗಳಿಸುತ್ತಿದ್ದಾರೆ.
ಸಜ್ದೇಹ್ ಜೋಡಿಯೂ ಭಾರತೀಯ ಕ್ರಿಕೆಟಿಗರೊರ್ವರೊಂದಿಗೆ ಹತ್ತಿರದ ಸಂಬಂಧವಿದೆ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಹಿಂದೆ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರು ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ವಿವಾಹವಾಗಿದ್ದು, ಹೀಗಾಗಿ ಬಂಟಿ ಸಜ್ದೇಹ್ ಅವರ ಭಾವ (brother-in-law) ಆಗಿದ್ದಾರೆ.
ಕಂಪನಿಯ ವೆಬ್‌ಸೈಟ್‌ನ ಪ್ರಕಾರ "ಕಾರ್ನರ್‌ಸ್ಟೋನ್ ಹೊಸ ಯುಗದ ಕ್ರೀಡೆ ಮತ್ತು ಮನರಂಜನಾ ಸಲಹಾ ಸಂಸ್ಥೆಯಾಗಿದೆ". 2008 ರಲ್ಲಿ ಸ್ಥಾಪಿತವಾದ ಕಾರ್ನರ್‌ಸ್ಟೋನ್ ಕ್ರೀಡೆ ಮತ್ತು ಮನರಂಜನೆಯ ವಿಭಾಗದಲ್ಲಿ ಭಾರತದ ಪ್ರಮುಖ ಪ್ರತಿಭೆ ನಿರ್ವಹಣಾ ಸಂಸ್ಥೆಯಾಗಿದೆ ಎಂದು ಹೇಳುತ್ತದೆ.


Click it and Unblock the Notifications