ಬಾಲಿವುಡ್‌ನ ಅತೀ ಜನಪ್ರಿಯ ಸ್ಟಾರ್ ಆದ ಅಮಿತಾಬ್ ಬಚ್ಚನ್ ಈ ವಾರ ತಮ್ಮ 81 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಸೂರತ್‌ನ ಉದ್ಯಮಿ ಸುನಿಲ್ ಶಾ ಅಮಿತಾಬ್ ಬಚ್ಚನ್‌ರ ಅದ್ಧೂರಿ ಹುಟ್ಟುಹಬ್ಬವನ್ನು ಆಯೋಜನೆ ಮಾಡಿದ್ದಾರೆ. ಬಿಗ್ ಬಿ ಅಭಿಮಾನಿಗಳಲ್ಲಿ ಒಬ್ಬರಾದ ಈ ಉದ್ಯಮಿ ಶ್ರೇಷ್ಠ ನಟನಿಗೆ ದೊಡ್ಡ ಗೌರವವನ್ನು ಸಲ್ಲಿಸಿದ್ದಾರೆ.
ಸುನಿಲ್ ಶಾ ಸಂಜೀವ್ ಕುಮಾರ್ ಆಡಿಟೋರಿಯಂನಲ್ಲಿ ವಿಶೇಷ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದ್ದಾರೆ. ಈ ಹುಟ್ಟುಹಬ್ಬದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಅಕ್ಟೋಬರ್ 11 ರಂದು ನಡೆದ ಜನ್ಮದಿನವನ್ನು ಆಚರಣೆ ಮಾಡಲಾಗಿದೆ.

ಅಷ್ಟೇ ಅಲ್ಲ, ಜನ್ಮದಿನದ ಪ್ರತೀಕವಾಗಿ ಸುನಿಲ್ ಶಾ 500 ಗ್ರಾಂ ತೂಕದ ಚಿನ್ನದಲ್ಲಿ ಮಾಡಿದ ಅಮಿತಾಬ್ ಬಚ್ಚನ್ ಪ್ರತಿಮೆಯನ್ನು ಕೂಡಾ ಮಾಡಿಸಿದ್ದಾರೆ. ಆದರೆ ಈ ಫ್ಯಾನ್ಸ್ ಆಚರಿಸುವ ಹುಟ್ಟುಹಬ್ಬಕ್ಕೆ ಅಮಿತಾಬ್ ಬಚ್ಚನ್ ವರ್ಚುವಲ್ ಆಗಿ ಭಾಗಿಯಾಗಿದ್ದಾರೆ. ಬಚ್ಚನ್‌ರ ಅದ್ಧೂರಿ ಹುಟ್ಟುಹಬ್ಬದ ಬಗ್ಗೆ ಇಲ್ಲಿದೆ ವಿವರ...
ಸುನಿಲ್ ಶಾ ಬಗ್ಗೆ ತಿಳಿಯಿರಿ
ಸುನಿಲ್ ಶಾ 43 ವರ್ಷದ ಉದ್ಯಮಿಯಾಗಿದ್ದು, ಆಭರಣ ತಯಾರಿಕಾ ಉದ್ಯಮ ಮತ್ತು ಐಟಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಬಾಲ್ಯದಲ್ಲಿಯೇ ಬಿಗ್ ಬಿ ಚಿತ್ರಗಳನ್ನು ಸಂಗ್ರಹ ಮಾಡುತ್ತಾ ಬಂದಿರುವ ಈ ಅಭಿಮಾನಿ ಸುನಿಲ್ ಶಾ, ಉದ್ಯಮಿಯಾದ ಬಳಿಕ ತನ್ನ ನೆಚ್ಚಿನ ನಟನ ಜನ್ಮದಿನ ಆಚರಣೆ ಮಾಡುತ್ತಾ ಬಂದಿದ್ದಾರೆ.
ಸಣ್ಣ ವಯಸ್ಸಿನಿಂದಲೇ ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದ ಸುನಿಲ್ ಶಾ ವರ್ಷ ಕಳೆದಂತೆ ಇನ್ನಷ್ಟು ದೊಡ್ಡ ಅಭಿಮಾನಿಯಾಗಿ ಬೆಳೆದಿದ್ದಾರೆ. ಕೆಬಿಸಿ ಸ್ಟಾರ್ ಅಮಿತಾಬ್ ಒಮ್ಮೆ ಓಡಿಸಿದ್ದ ಎರಡು ಕಾರುಗಳನ್ನು, 10 ಸೂಟ್‌ಗಳು ಮತ್ತು ಕೋಟ್‌ಗಳು, ಬಚ್ಚನ್ ಬರೆದಿರುವ, ಸಹಿ ಮಾಡಿದ ಪತ್ರಗಳಂತಹ ಅಮೂಲ್ಯವಾದ ಆಸ್ತಿಯನ್ನು ಖರೀದಿ ಮಾಡಿಕೊಂಡಿದ್ದಾರೆ.
ಟೈಮ್ ಆಫ್ ಇಂಡಿಯಾ ವರದಿಯ ಪ್ರಕಾರ, ಈಗ ತಮ್ಮ ಈ ಸಂಗ್ರಹದಲ್ಲಿ 500 ಗ್ರಾಂ ಚಿನ್ನದಿಂದ ಮಾಡಿದ ಬಿಗ್ ಬಿ ಪ್ರತಿಮೆಯನ್ನು ಸೇರಿಸಿದ್ದಾರೆ. ಬಚ್ಚನ್ ಜನ್ಮದಿನವನ್ನು ಪ್ರತಿ ವರ್ಷವೂ ಕೂಡಾ ಆಚರಣೆ ಮಾಡುವುದರ ಜೊತೆಗೆ ಬಚ್ಚನ್ ಸಿನಿಮಾ ಬಿಡುಗಡೆಯಾದ ದಿನಗಳಂದು ಶಾ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ಶಾ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಅಮಿತಾಭ್ ಬಚ್ಚನ್ ಹಸ್ತಾಕ್ಷರದ ಬಟ್ಟೆ, ಬರೆದ ಪತ್ರಗಳ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ಈವೆಂಟ್‌ನಲ್ಲಿ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬಚ್ಚನ್ ಚಿತ್ರವಿರುವ ಉಡುಪುಗಳನ್ನು ಧರಿಸಿದ್ದರು. ಬಚ್ಚನ್, ಆನ್‌ಲೈನ್ ಮೂಲಕ ಹಾಜರಾಗಿದ್ದಾರೆ. ಉದ್ಯಮಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


Click it and Unblock the Notifications