ರಿಲಯನ್ಸ್ ಗ್ರೂಪ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಬೆಳೆದು ಬಂದ ಕಥೆಗಳನ್ನು ಬಹಳಷ್ಟು ಜನ ಓದಿರಬಹುದು. ಸಾಮಾನ್ಯ ಜನ ಜೀವನ ಸಾಗಿಸುತ್ತಿದ್ದ ಅವರು ನಂತರ ದಿನಗಳಲ್ಲಿ ಜಗತ್ತಿನ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡವರು.
ಅವರ ಮಗ ಮುಕೇಶ್ ಅಂಬಾನಿ , ಸಹೋದರ ಅನಿಲ್ ಅವರು ಭುಲೇಶ್ವರದಲ್ಲಿ 8-9 ಜನರ ಒಟ್ಟಿಗೆ ಒಂದೇ ಕೋಣೆಯಲ್ಲಿ ಬೆಳೆದವರು. ಇದೇ ರೀತಿ ದೇಶದ ಮತ್ತೊಬ್ಬ ಸಾಧಕರ ಪಯಣ ಕೂಡ ಮುಂಬೈ ವಠಾರದಿಂದ ಆರಂಭವಾಗುತ್ತದೆ. ಅವರೇ ಎಚ್‌ಡಿಎಫ್‌ಸಿ ಸಂಸ್ಥಾಪಕರಾದ ಎಚ್‌ಟಿ ಪಾರೇಖ್.

ಇದೇ ರೀತಿ ಮುಂಬೈನ ವಠಾರದಲ್ಲಿ (chawl) ಬೆಳೆದು ಇಂದು ದುಬೈನಲ್ಲಿ ಐಷಾರಾಮಿ ಭವನವನ್ನು ವಾಸಿಸುತ್ತಿರುವ ಉದ್ಯಮಿ ಅನಿಸ್ ಸಜನ್ ಎಂಬವರ ಯಶೋಗಾಥೆ ಇಲ್ಲಿದೆ. ಮುಂಬೈನ ಪಂತ್ ನಗರದ ಘಾಟ್ಕೋಪರ್‌ನ ಚಾಲ್ (ವಠಾರ) ನಲ್ಲಿ ಬೆಳೆದಿದ್ದು, ಈಗ ದುಬೈನ ಎಮಿರೇಟ್ಸ್ ಹಿಲ್ಸ್‌ನಲ್ಲಿ ಅರಮನೆಯಂತಹ ವಿಲ್ಲಾ ಹೊಂದಿದ್ದಾರೆ.
ಅವರ ತಂದೆ ಆಸ್ಕರ್ ಅಲಿ ಸಜನ್ ಅವರ ಅಕಾಲಿಕ ಮರಣದ ನಂತರ ಸಜನ್ ಅವರ ಕುಟುಂಬ ತೀರಾ ಸಂಕಷ್ಟಕ್ಕೆ ಒಳಗಾಗಬೇಕಾಯಿತು. ಹೀಗೆ ಏರಿಳಿತದ ಜೀವನದಲ್ಲಿ ಅವರು ರೂಪಾಯಿ 200 ಕಮಿಷನ್ ಗಾಗಿ ಸೇಲ್ಸ್‌ಮ್ಯಾನ್ ಆಗಿ ದುಡಿಯಬೇಕಾಯಿತು.
ಅನಿಸ್ ಸಜನ್ ಅವರು ಅವರ ಹಿರಿಯ ಸಹೋದರ ರಿಜ್ವಾನ್ ಸಜನ್ ಅವರಿಗೆ ಬಿಲಿಯನ್ ಡಾಲರ್ ನ ಡ್ಯಾನ್ಯೂಬ್ ಗ್ರೂಪ್ ಅನ್ನು ನಿರ್ಮಿಸಲು ಸಹಾಯ ಮಾಡಿದರು. ಅನಿಸ್ ಸಜನ್ ಇಂದು ಗಲ್ಫ್ ಮೂಲದ ಬ್ಯುಸಿನೆಸ್ ಗ್ರೂಪ್ ನ ಉಪಾಧ್ಯಕ್ಷರಾಗಿದ್ದಾರೆ.
ಅನಿಸ್ 1992 ರಲ್ಲಿಅಂದರೆ ತಮ್ಮ 21 ನೇ ವಯಸ್ಸಿನಲ್ಲಿ ದುಬೈಗೆ ಬಂದರು. ಅಲ್ಲಿ ಅವರ ಹಿರಿಯ ಸಹೋದರ ರಿಜ್ವಾನ್ ಟ್ಂಬರ್ ವಿಭಾಗದತ್ತ ಗಮನಹರಿಸಿದ್ದರಿಂದ ಇಂದು ಡ್ಯಾನ್ಯೂಬ್ ಗ್ರೂಪ್‌ನಲ್ಲಿರುವ ಸ್ಯಾನಿಟರಿ ವಿಭಾಗವನ್ನು ಸ್ಥಾಪಿಸುವುದು ಅವರ ಮೊದಲ ಕೆಲಸವಾಗಿತ್ತು.
ಇವರಿಬ್ಬರು ಒಟ್ಟಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಆ ಸಂಸ್ಥೆಯನ್ನು $1 ಶತಕೋಟಿಗಳಿಗಿಂತಲೂ ಹೆಚ್ಚು ವಹಿವಾಟು ತಲುಪುವಂತೆ ಮಾಡುವಲ್ಲಿ ಯಶಸ್ವಿಯಾದರು. ಇಂದು ಇವರ ಕುಟುಂಬ ಮದ್ಯ- ಪ್ರಾಚ್ಯ ದೇಶದಲ್ಲಿ ಅತ್ಯಂತ ಪ್ರಮುಖ ಭಾರತೀಯ ವ್ಯಾಪಾರ ಕುಟುಂಬಗಳಲ್ಲಿ ಒಂದಾಗಿದೆ.


Click it and Unblock the Notifications